ಪರಿಸರವನ್ನು ಉಳಿಸಲು ಎಲ್ಲರೂ ಶ್ರಮಿಸಬೇಕು: ಡಿವೈಎಸ್ಪಿ ಲಕ್ಷ್ಮಯ್ಯ

KannadaprabhaNewsNetwork |  
Published : Mar 18, 2024, 01:45 AM IST
ಚಾಮರಾಜನಗರ | Kannada Prabha

ಸಾರಾಂಶ

ಪರಿಸರವನ್ನು ಉಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಅದು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಆದ್ದರಿಂದ ಗಿಡಗಳನ್ನು ನೆಟ್ಟು ಬೆಳೆಸಿ ಉತ್ತಮವಾದ ಗಾಳಿಯನ್ನು ಪಡೆಯ ಬೇಕು ಎಂದು ಚಾಮರಾಜನಗರ ಡಿ.ವೈ.ಎಸ್.ಪಿ ಲಕ್ಷ್ಮಯ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ ಪರಿಸರವನ್ನು ಉಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಅದು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಆದ್ದರಿಂದ ಗಿಡಗಳನ್ನು ನೆಟ್ಟು ಬೆಳೆಸಿ ಉತ್ತಮವಾದ ಗಾಳಿಯನ್ನು ಪಡೆಯ ಬೇಕು ಎಂದು ಚಾಮರಾಜನಗರ ಡಿ.ವೈ.ಎಸ್.ಪಿ ಲಕ್ಷ್ಮಯ್ಯ ತಿಳಿಸಿದರು.

ನಗರದ ಸಂತೇ ಮರಳ್ಳಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪಟ್ಟಣ ಪೊಲೀಸ್ ಠಾಣೆಯ ಆವರಣದಲ್ಲಿ ಭಾನುವಾರ ಈಶ್ವರಿ ಸೋಷಿಯಲ್ ಟ್ರಸ್ಟ್ ವತಿಯಿಂದ ಕರ್ನಾಟಕ ರತ್ನ ಡಾ. ಪುನೀತ್‌ರಾಜ್‌ಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಸಾಲುಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಗಿಡ, ಮರಗಳನ್ನು ಬೆಳೆಸುವುದರಿಂದ ಭೂಮಿಯಲ್ಲಿ ವಾತಾವರಣ ಶುದ್ಧವಾಗುತ್ತದೆ. ಇತ್ತಿಚೀನ ದಿನಗಳಲ್ಲಿ ಬೇಸಿಗೆ ಬಿಸಿಲು ಹೆಚ್ಚಾಗಿದ್ದು ಅದನ್ನು ತಂಪುಮಾಡಬೇಕಾದರೆ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಮುಂದೆ ಒಂದೊಂದು ಗಿಡಗಳನ್ನು ನೆಟ್ಟು ಪೋಷಣೆ ಮಾಡಿದರೆ ಭೂಮಿಯು ತಂಪಾಗಿರುತ್ತದೆ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿಪುರಸ್ಕೃತ ಸ್ವಾಮಿಪೊನ್ನಾಚ್ಚಿ ಮಾತನಾಡಿ, ಈಶ್ವರಿ ಸೋಷಿಯಲ್ ಟ್ರಸ್ಟ್ ಸಿ.ಎಂ.ವೆಂಕಟೇಶ್ ಅವರು ನಮ್ಮದೇಯಾದ ಈಶ್ವರಿ ಸೋಷಿಯಲ್ ಟ್ರಸ್ಟ್ ಮಾಡಿಕೊಂಡು ಜಿಲ್ಲಾಧ್ಯಂತ ೧೨ ಸಾವಿರ ಗಿಡಗಳನ್ನು ನೆಟ್ಟು ಈ ಉರಿ ಬಿಸಿಲಿನಲ್ಲೂ ಟ್ಯಾಂಕರ್ ಮೂಲಕ ನೀರು ಹಾಕಿ ಪೋಷಣೆ ಮಾಡುತ್ತಿರುವುದು ಶ್ಲಾಘನೀಯ ವಿಷಯವಾಗಿದೆ. ಅವರ ಜೊತೆಗೆ ಪ್ರತಿಯೊಬ್ಬರು ಕೈ ಗೂಡಿಸಿದರೆ ಇನ್ನು ಹೆಚ್ಚಿನ ರೀತಿಯಲ್ಲಿ ಸೇವೆ ಮಾಡಲು ಅವಕಾಶ ನೀಡಿದಂತ್ತಾಗುತ್ತದೆ ಎಂದರು.ಈಶ್ವರಿ ಸೋಷಿಯಲ್ ಟ್ರಸ್ಟ್ ಸಂಸ್ಥಾಪಕ ಸಿ.ಎಂ.ವೆಂಕಟೇಶ್ ಮಾತನಾಡಿ, ಜಿಲ್ಲೆಯಲ್ಲಿ 1ಲಕ್ಷ ಗಿಡಗಳನ್ನು ನೆಟ್ಟು ಅವುಗಳನ್ನು ಮರಗಳನ್ನಾಗಿ ಮಾಡುವ ಮಹತ್ತರವಾದ ಗುರಿಯನ್ನು ಹೊಂದಲಾಗಿದೆ. ಅದಕ್ಕೆ ಸಾಕಷ್ಟು ಸಮಯ ಮತ್ತು ಹಣ ಬೇಕಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಪಟ್ಟಣ ಠಾಣೆ ಪೊಲೀಸ್ ವೃತ್ತ ನಿರಿಕ್ಷಕ ರಾಜೇಶ್, ಎಸ್‌ಐ ಗಳಾದ ಸುನೀಲ್, ಕೃಷ್ಣಮೂರ್ತಿ, ಸಿದ್ದರಾಜು, ಸಾಹಿತಿಗಳಾದ ಕೆ.ಶ್ರೀಧರ್, ಜನಪದ ಹಾಡುಗಾರ ಸಿ.ಎಂ.ನರಸಿಂಹಮೂರ್ತಿ, ಹೋಟಲ್ ಉದ್ಯಮಿ ಜಿ. ಅಂಕಶೆಟ್ಟಿ, ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ