ಬಾಲಕಾರ್ಮಿಕ ಪದ್ಧತಿ ಹೋಗಲಾಡಿಸಲು ಎಲ್ಲರೂ ಶ್ರಮಿಸಬೇಕು

KannadaprabhaNewsNetwork |  
Published : Jun 14, 2025, 04:28 AM IST
12ಎಚ್ಎಸ್‌ಎನ್‌8  :ಹೊಳೆನರಸೀಪುರದ ಬಾಲಕರ ಸರ್ಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಿವಿಲ್ ನ್ಯಾಯಾಧೀಶರಾದ ಚೇತನಾ ಅವರು ಉದ್ಘಾಟಸಿದರು. | Kannada Prabha

ಸಾರಾಂಶ

ಇಂದಿನ ವ್ಯವಸ್ಥೆಯಲ್ಲಿ ಪ್ರತಿಯೊಂದು ಮಗುವಿಗೆ ಉಚಿತ ಶಿಕ್ಷಣ ದೊರೆಯುವ ಕಾರಣದಿಂದ ಬಾಲಕಾರ್ಮಿಕ ಪದ್ಧತಿ ತೊಲಗಿಸುವ ನಿಟ್ಟಿನಲ್ಲಿ ಬಾಲ ಕಾರ್ಮಿಕರನ್ನು ಕಂಡಾಗ ಪ್ರಾಧಿಕಾರಕ್ಕೆ ತಿಳಿಸುವುದು ಹಾಗೂ ಪೋಷಕರಿಗೆ ಶಿಕ್ಷಣದ ವ್ಯವಸ್ಥೆ ಜತೆಗೆ ಅಗತ್ಯ ಅರಿವನ್ನು ಮೂಡಿಸುವುದು ಅಗತ್ಯವಾಗಿದೆ ಎಂದರು. ತಂದೆ ತಾಯಿಗೆ ಸಹಾಯ ಮಾಡುವುದು ಬಾಲಕಾರ್ಮಿಕ ಪದ್ಧತಿಯಡಿ ಬರುವುದಿಲ್ಲ, ಆದರೆ ಶಾಲೆ ಬಿಟ್ಟು, ನಿರಂತರವಾಗಿ ಕರ್ತವ್ಯ ನಿರ್ವಹಿಸುವುದು ಬಾಲಕಾರ್ಮಿಕ ಚೌಕಟ್ಟಿನಲ್ಲಿ ಬರುತ್ತದೆ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಚೇತನಾ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರಬಾಲ್ಯಜೀವನದ ಅಮೂಲ್ಯ ಕ್ಷಣಗಳನ್ನು ಪ್ರತಿಯೊಂದು ಮಕ್ಕಳು ಅನುಭವಿಸಬೇಕಿದೆ ಹಾಗೂ ಅದನ್ನು ಕಸಿದುಕೊಳ್ಳಲು ನಾವ್ಯಾರು. ಆದ್ದರಿಂದ ಸಮಾಜದಲ್ಲಿ ಬಾಲ ಕಾರ್ಮಿಕರಾಗಿ ದುಡಿಯುವ ಮಕ್ಕಳ ಬಗ್ಗೆ ಗಂಭೀರವಾಗಿ ಪರಿಗಣಿಸಿ, ಅವರುಗಳ ಜೀವನ ರೂಪಿಸಿವಲ್ಲಿ ಪ್ರತಿಯೊಬ್ಬರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ, ಈ ಪಿಡುಗನ್ನು ಹೋಗಲಾಡಿಸಲು ಶ್ರಮಿಸಬೇಕಿದೆ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಚೇತನಾ ಸಲಹೆ ನೀಡಿದರು. ಪಟ್ಟಣದ ಡಾ. ಅಂಬೇಡ್ಕರ್‌ ನಗರ ಸಮೀಪವಿರುವ ಬಾಲಕರ ಸರ್ಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಪ್ರಯುಕ್ತ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು. ಬಾಲ್ಯ ಜೀವನದಲ್ಲಿ ತಮ್ಮದೇ ಲೋಕದಲ್ಲಿ ಅನುಭವಿಸಿದ ಪ್ರತಿಯೊಂದು ಕ್ಷಣವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಯೂವುದೇ ಹುದ್ದೆಗೆ ಸೇರಿದ್ದರೂ ಒಮ್ಮೆಯಾದರೂ ಜ್ಞಾಪಿಸಿಕೊಂಡು ಹರ್ಷಚಿತ್ತರಾಗುತ್ತಾರೆ. ಇಂತಹ ಕ್ಷಣವನ್ನು ಪ್ರತಿಯೊಂದು ಮಗು ಪಡೆಯಬೇಕು ಮತ್ತು ಇಂತಹ ಕ್ಷಣಗಳನ್ನು ಕಸಿಯಬಾರದು ಹಾಗೂ ಇಂದಿನ ವ್ಯವಸ್ಥೆಯಲ್ಲಿ ಪ್ರತಿಯೊಂದು ಮಗುವಿಗೆ ಉಚಿತ ಶಿಕ್ಷಣ ದೊರೆಯುವ ಕಾರಣದಿಂದ ಬಾಲಕಾರ್ಮಿಕ ಪದ್ಧತಿ ತೊಲಗಿಸುವ ನಿಟ್ಟಿನಲ್ಲಿ ಬಾಲ ಕಾರ್ಮಿಕರನ್ನು ಕಂಡಾಗ ಪ್ರಾಧಿಕಾರಕ್ಕೆ ತಿಳಿಸುವುದು ಹಾಗೂ ಪೋಷಕರಿಗೆ ಶಿಕ್ಷಣದ ವ್ಯವಸ್ಥೆ ಜತೆಗೆ ಅಗತ್ಯ ಅರಿವನ್ನು ಮೂಡಿಸುವುದು ಅಗತ್ಯವಾಗಿದೆ ಎಂದರು. ತಂದೆ ತಾಯಿಗೆ ಸಹಾಯ ಮಾಡುವುದು ಬಾಲಕಾರ್ಮಿಕ ಪದ್ಧತಿಯಡಿ ಬರುವುದಿಲ್ಲ, ಆದರೆ ಶಾಲೆ ಬಿಟ್ಟು, ನಿರಂತರವಾಗಿ ಕರ್ತವ್ಯ ನಿರ್ವಹಿಸುವುದು ಬಾಲಕಾರ್ಮಿಕ ಚೌಕಟ್ಟಿನಲ್ಲಿ ಬರುತ್ತದೆ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್ ಮಾತನಾಡಿ, ಸರ್ಕಾರಿ ಸವಲತ್ತುಗಳು ಅರ್ಹ ವ್ಯಕ್ತಿಗಳಿಗೆ ದೊರೆಯದೇ ಇರುವ ಕಾರಣದಿಂದ ಮನೆಯ ಪರಿಸ್ಥಿತಿ ನಿರ್ವಹಿಸುವ ಕಾರಣದಿಂದ ಮಕ್ಕಳನ್ನು ಪೋಷಕರು ದುಡಿಯಲು ಕಳುಹಿಸುತ್ತಾರೆ. ಇಂತಹ ಸನ್ನಿವೇಶ ನಿರ್ಮಾಣ ಮಾಡುವಲ್ಲಿ ಸಮಾಜದಲ್ಲಿನ ವ್ಯವಸ್ಥೆ ಮುಖ್ಯ ಕಾರಣವಾಗಿದೆ, ಸಮಾಜ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯಿತಿಗಳಲ್ಲಿ ಕೊಡುವ ಮನೆಗಳು ಹಾಗೂ ಇತರೆ ಇಲಾಖೆಗಳಲ್ಲಿ ಬಡವರ ಏಳಿಗೆಗೆ ರೂಪಿಸಿದ ಯೋಜನೆಗಳು ಅಧಿಕಾರಿಗಳು, ರಾಜಕಾರಣಿಗಳು ಅರ್ಹ ವ್ಯಕ್ತಿಗಳನ್ನು ಗುರುತಿಸಿ ಕೊಡದೇ ಇರುವ ಕಾರಣದಿಂದ ಈ ರೀತಿಯ ಪಿಡುಗುಗಳು ಇನ್ನೂ ಉಳಿದಿದೆ ಎಂದು ವ್ಯವಸ್ಥೆಯ ವಿರುದ್ಧ ಕಟುವಾಗಿ ಟೀಕಿಸಿದರು.ಹಿರಿಯ ವಕೀಲ ಕೆ.ಆರ್‌. ಜಯಪ್ರಕಾಶ್ ಪ್ರಧಾನ ಭಾಷಣ ಮಾಡಿದರು. ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ, ಬಿಇಒ ಸೋಮಲಿಂಗೇಗೌಡ ಹಾಗೂ ಉಪನ್ಯಾಸಕಿ ಬೇಬಿರಾಣಿ ಮಾತನಾಡಿದರು. ಶಿಕ್ಷಕಿ ತಹಸಿನ್ ಇರ್ಫಾನ ಪ್ರಮಾಣವಚನ ಬೋಧಿಸಿದರು, ಸುಮಾ ಸ್ವಾಗತಿಸಿದರು, ಎಚ್.ಎಚ್.ಫ್ರಾನ್ಸಿಸ್ ರೋಶನ್ ವಂದಿಸಿದರು ಹಾಗೂ ಬಿ.ಎಸ್.ಕಾಂತರಾಜ್ ನಿರೂಪಿಸಿದರು. ಅಪರ ಸಿವಿಲ್ ನ್ಯಾಯಾಧೀಶರಾದ ಐಶ್ವರ್ಯ ಗುಡದಿನ್ನಿ, ಬಾಲಕರ ಸರ್ಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಪ್ರಾಣೇಶ್ವರ್ ರಾವ್, ಉಪ ಪ್ರಾಂಶುಪಾಲ ಪುರುಷೋತ್ತಮ್, ಶಿಕ್ಷಕರಾದ ನಾಗವೇಣಿ, ದಿವಾಕರ್, ಎಚ್.ಆರ್‌.ತೀರ್ಥಪ್ಪ, ಸುಮಾ ರಾಣಿ, ಅಂಬುಜಾಕ್ಷಿ, ಗೌರಮ್ಮ, ವೀಣಮ್ಮ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ