ಬಳ್ಳಾರಿ: ಸಾಂಸ್ಕೃತಿಕ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯಿಂದ ಅವರ ಪ್ರತಿಭೆ ಅನಾವರಣದ ಜತೆಗೆ ಶೈಕ್ಷಣಿಕ ಸಾಮರ್ಥ್ಯವೂ ಬಲಗೊಳ್ಳುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ನಯೀಮೂರ್ ರೆಹಮಾನ್ ಹೇಳಿದರು. ತಾಲೂಕಿನ ಗೋಡೆಹಾಳ್ ಕ್ರಾಸ್‌ನಲ್ಲಿರುವ ವಿನಾಯಕ ಎಜ್ಯುಕೇಷನ್ ಟ್ರಸ್ಟ್‌ನ ತಿರುಮಲ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಪಠ್ಯದಷ್ಟೇ ಪಠ್ಯಪೂರಕ ಚಟುವಟಿಕೆ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳಲ್ಲಿನ ವೇದಿಕೆ ಭಯ ಹೋಗಲಾಡಿಸಲು ಸಾಧ್ಯವಾಗುತ್ತದೆ. ಕಲೆ, ಸಾಹಿತ್ಯ, ಸಂಗೀತ ವಲಯಗಳು ಸಾಂಸ್ಕೃತಿಕ ಲೋಕದ ಜಗತ್ತನ್ನು ಪರಿಚಯಿಸುತ್ತವೆ. ಮುಂದಿನ ಭವಿಷ್ಯಕ್ಕೂ ಸ್ಪೂರ್ತಿಯಾಗುತ್ತದೆ ಎಂದರು. ತಿರುಮಲ ಪ್ರೌಢಶಾಲೆಯ ಆಡಳಿತ ಮಂಡಳಿ ಹಾಗೂ ಬೋಧಕ ಸಿಬ್ಬಂದಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ಶ್ರಮಿಸುತ್ತಿದೆ. ಹೀಗಾಗಿಯೇ ಪ್ರತಿವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ನಗರ ಪ್ರದೇಶದ ಖಾಸಗಿ ಶಾಲೆಗಳಿಗೆ ಪೈಪೋಟಿವೊಡ್ಡುವಂತೆ ಬೆಳೆಯುತ್ತಿರುವ ತಿರುಮಲ ಶಾಲೆ, ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ರೂಪಿಸುವ ಸಲುವಾಗಿ ಅವಿರತವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಪ್ರಾಸ್ತಾವಿಕ ಮಾತನಾಡಿದ ಶಾಲೆಯ ಮುಖ್ಯಸ್ಥ ಕೆ. ಯಲ್ಲಪ್ಪ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಆಶಯದಿಂದ ಶಾಲೆ ಆರಂಭಿಸಲಾಗಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಪೋಷಕರ ಸಹಕಾರದಿಂದ ಸಾಧ್ಯವಾಗಿದೆ ಎಂದರಲ್ಲದೆ, ಗ್ರಾಮೀಣರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು. ಅಮರಾಪುರ ಗ್ರಾಪಂ ಅಧ್ಯಕ್ಷೆ ಭಾರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಮರಾಪುರ ಗ್ರಾಪಂ ಉಪಾಧ್ಯಕ್ಷ ಗಾದಿಲಿಂಗಪ್ಪ, ಪರಮದೇವನಹಳ್ಳಿ ಠಾಣೆಯ ಎಎಸ್‌ಐ ಉಮೇಶ್, ವಿನಾಯಕ ಎಜ್ಯುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಕಾನೆಪ್ಪ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ. ಬಸವರಾಜ್, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನಗೌಡ, ಅಂಜಿನಪ್ಪ, ಮಾರೆಣ್ಣ, ಮಂಜುನಾಥ, ಅನುದಾನಿತ ಶಾಲೆಗಳ ಸಂಘದ ಜಿಲ್ಲಾ ಉಪಾಧ್ಯಕ್ಷ ಪರಮೇಶ್ವರಪ್ಪ, ಟೈಗರ್ ಹಿಲ್ಸ್ ಶಾಲೆಯ ಮುಖ್ಯಸ್ಥ ರಂಗಸ್ವಾಮಿ, ಈಶ್ವರಪ್ಪ, ವಡ್ಡೇರ ನಾರಾಯಣ, ಶಿಕ್ಷಣ ಸಂಯೋಜಕ ಎಸ್.ಬಿ. ಹಿರೇಮಠ, ಚಾಗನೂರು ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಈರಣ್ಣ ಬಡಿಗೇರ, ಸಿರುಗುಪ್ಪ ಎಪಿಎಂಸಿ ಮಾಜಿ ಅಧ್ಯಕ್ಷ ಶರಣಬಸವ, ಶಾಲೆಯ ಮುಖ್ಯಗುರು ಎಚ್. ನಾಗರಾಜ್ ಹಾಗೂ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಬಳಿಕ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.18 ಬಿಆರ್ ವೈ 3 ಬಳ್ಳಾರಿ ತಾಲೂಕಿನ ಗೋಡೆಹಾಳ್ ಕ್ರಾಸ್‌ನಲ್ಲಿರುವ ತಿರುಮಲ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭಕ್ಕೆ ಅಮರಾಪುರ ಗ್ರಾ.ಪಂ. ಅಧ್ಯಕ್ಷೆ ಭಾರತಿ ಅವರು ಚಾಲನೆ ನೀಡಿದರು.