- ಕ್ಷೇತ್ರ ದೈಹಿಕ ಸಂಯೋಜಕ ಎಸ್. ನಾಗೇಂದ್ರ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ ಸದೃಢವಾದ ದೇಹವನ್ನು ಮತ್ತು ಸದೃಢ ಮನಸ್ಸನ್ನು ಹೊಂದಲು ಕ್ರೀಡಾ ಚಟುವಟಿಕೆ ಅತಿ ಅವಶ್ಯಕ ಎಂದು ಕ್ಷೇತ್ರ ದೈಹಿಕ ಸಂಯೋಜಕ ಎಸ್. ನಾಗೇಂದ್ರ ಹೇಳಿದರು.ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಪ್ರಾಥಮಿಕ ಮತ್ತು ಆಂಗ್ಲ ಪ್ರೌಢಶಾಲಾ ವಿದ್ಯಾರ್ಥಿಗಳ ಪೋಷಕರಿಗೆ ಆಯೋಜಿಸಿದ್ದ ಕ್ರೀಡಾಕೂಟವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.ದೇಶದಲ್ಲಿಇತ್ತೀಚಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದೆ, ಉದ್ಯೋಗ ಅವಕಾಶವು ಸಹ ಕ್ರೀಡಾ ಕ್ಷೇತ್ರದಲ್ಲಿ ಇರುವವರಿಗೆ ದೊರೆಯುತ್ತಿದೆ ಎಂದು ತಿಳಿಸಿದರು.ದೇಶದಲ್ಲಿ ಅನೇಕ ಕ್ರೀಡಾಪಟುಗಳು ಒಲಂಪಿಕ್ಸ್ ಸೇರಿದಂತೆ ಅನೇಕ ಪ್ರತಿಷ್ಠಿತ ಕ್ರೀಡೆಗಳಲ್ಲಿ ಉನ್ನತ ಸಾಧನೆಯನ್ನು ತೋರುತ್ತಿದ್ದಾರೆ, ಅಂತಹವರ ಸಾಲಿನಲ್ಲಿ ನಮ್ಮ ಇಲ್ಲಿನ ಕ್ರೀಡಾಳುಗಳು ಇರಬೇಕು ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಕೇವಲ ಬೆಟ್ಟಿಂಗ್ ಗಾಗಿ ಕ್ರೀಡೆಯಾಡದೆ, ದೇಶಕ್ಕಾಗಿ ಕ್ರೀಡೆ ಬಳಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷ ಸತೀಶ್ ಆರಾಧ್ಯ ಮಾತನಾಡಿ, ಮಕ್ಕಳನ್ನು ದುಶ್ಚಟದಿಂದ ದೂರವಿಡಲು ಕ್ರೀಡಾ ಕ್ಷೇತ್ರದತ್ತ ಗಮನಹರಿಸುವಂತೆ ಪೋಷಕರು ಪ್ರೆರೇಪಿಸಬೇಕು ಎಂದು ತಿಳಿಸಿದರು.
ಮಹಿಳೆಯರಿಗೆ ಫನ್ನಿಗೇಮ್, ನೀರಿನ ಮೇಲೆ ಚೆಂಡಿಟ್ಟು ಗಾಳಿ ಊದುವ ಸ್ಪರ್ಧೆ, ಮ್ಯುಸಿಕಲ್ ಛೇರ್, ಪುರುಷರಿಗೆ ಕ್ರಿಕೆಟ್, ಗುಂಡು ಎಸೆತ ಸೇರಿದಂತೆ ವಿವಿಧ ಆಟೋಟಗಳನ್ನು ಆಯೋಜಿಸಲಾಗಿತ್ತು, ವಿಜೇತರಿಗೆ ಶಾಲಾ ವಾರ್ಷಿಕೋತ್ಸವದಂದು ಬಹುಮಾನ ವಿತರಿಸಲಾಗುವುದು.ಕ್ರೀಡಾ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಭಾಗವಹಿಸುವಿಕೆ ಕಡಿಮೆ ಇದೆ, ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಭಾಗವಹಿಸುವಂತೆ ಪೋಷಕರು ಹಾಗೂ ಶಿಕ್ಷಕರು ಪ್ರೇರೇಪಿಸಬೇಕು ಎಂದರು.
ಪ್ರಾಂಶುಪಾಲರಾದ ಭೈರೇಗೌಡ, ಜೆ.ಎನ್. ವೆಂಕಟೇಶ್, ಬೀಚನಹಳ್ಳಿ ಮಂಜು, ಬಿ. ಸತೀಶ್ ಆರಾಧ್ಯ, ಎ.ಸಿ. ಭೈರಪ್ಪ, ಮುಖ್ಯೋಪಾಧ್ಯಾಯಿನಿ ನಂದಿನಿ, ಲೋಕೇಶ್, ರಾಜೇಗೌಡ, ಶಿವಕುಮಾರ್, ಶಿಲ್ಪಶ್ರೀ, ಕೈಸರ್ ಪಾಷ, ಪಾರ್ವತಿ, ಸಂತೋಷ್ ಕುಮಾರ್, ಸೋಮಶೇಖರ್, ಅಂಕಪ್ಪ, ರಮೇಶ್, ಚೈತ್ರ ಇದ್ದರು.