ಕಾವೇರಿ ಗ್ರಾಮೀಣ ಬ್ಯಾಂಕ್ ಎದುರು ರೈತರ ಪ್ರತಿಭಟನೆ

KannadaprabhaNewsNetwork |  
Published : Jul 04, 2024, 01:17 AM IST
35 | Kannada Prabha

ಸಾರಾಂಶ

ಬ್ಯಾಂಕ್ ಶಾಖೆ ಗಳಲ್ಲಿ ಪ್ರಚಾರ ಮಾಡದೆ ಇರುವುದು ರೈತರು ಮುಗ್ಧ ಅಮಾಯಕ ರೈತರು ಈ ಅವಕಾಶದಿಂದ ವಂಚಿತರಾಗಿದ್ದಾರೆ,

ಫೋಟೋ- 3ಎಂವೈಎಸ್ 35- ಮೈಸೂರಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ಎದುರು ಕಬ್ಬು ಬೆಳೆಗಾರ ಸಂಘದ ಪದಾಧಿಕಾರಿಗಳು ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟಿಸಿದರು.

--

ಕನ್ನಡಪ್ರಭ ವಾರ್ತೆ ಮೈಸೂರು

ಎಲ್ಲ ಬ್ಯಾಂಕುಗಳು ರೈತರ ಕೃಷಿ ಸಾಲ ಒಟಿಎಸ್ ಮೂಲಕ ತೀರುವಳಿ ಮಾಡುತ್ತಿದ್ದರು ಕಾವೇರಿ ಗ್ರಾಮೀಣ ಬ್ಯಾಂಕ್ ಸರ್ಕಾರದ ಆದೇಶ ಉಲ್ಲಂಘಿಸಿ ಓ ಟಿ ಎಸ್ ಸಾಲ ತಿರುವಳಿ ಮೇಳ ಮಾಡುತ್ತಿಲ್ಲ ಎಂದು ಆಕ್ರೋಶಗೊಂಡು ರಾಜ್ಯ ಕಬ್ಬು ಬೆಳೆಗಾರ ಸಂಘದ ಮೈಸೂರು ಜಿಲ್ಲಾ ಘಟಕ ರೈತರು ಸಾಲ ತೀರುವಳಿ ಮೇಳ ನಡೆಸುವಂತೆ ಒತ್ತಾಯಿಸಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮೈಸೂರಿನ ಪ್ರಾದೇಶಿಕ ಕಚೇರಿಗೆ ಮುತ್ತಿಗೆ ಹಾಕಿ ರೈತರಿಗೆ ಒ ಟಿ ಎಸ್ ಮೇಳದಲ್ಲಿ ಸಾಲ ತೀರುವಳಿ ಮಾಡುವಂತೆ ಒತ್ತಾಯಿಸಿ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಬರಗಾಲದ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಕೃಷಿ ಸಾಲ ಮಾಡಿ ತೀರಿಸಲು ಸಾದ್ಯವಾಗದೆ ಇರುವುದರಿಂದ ಮತ್ತೆ ಕೃಷಿ ಚಟುವಟಿಕೆ ನಡೆಸಲು ಅನುಕೂಲ ಆಗುವಂತೆ ರಾಜ್ಯ ಮಾರ್ಗದರ್ಶಿ ಬ್ಯಾಂಕ್ (ಎಸ್ ಎಲ್ ಬಿ ಸಿ) ಆದೇಶ ಹೊರಡಿಸಿ ಬ್ಯಾಂಕ್ ಶಾಖೆಗಳಲ್ಲಿ ಒ ಟಿ ಎಸ್ ಸಾಲ ತಿರುವಳಿ ಮೇಳ ಹೆಚ್ಚು ಪ್ರಚಾರ ನೀಡಿ ನಡೆಸುವಂತೆ ಇದರ ಸದುಪಯೋಗ ರೈತರು ಪಡೆದು ಕೊಳ್ಳು ವಂತೆ ನಾಮಫಲಕ ಅನಾವರಣ ಮಾಡಿ ರೈತರಿಗೆ ಜಾಗೃತಿ ಮೂಡಿಸಿ ನೆರವಾಗಬೇಕು, ಆದರೆ ಬ್ಯಾಂಕ್ ಶಾಖೆ ಗಳಲ್ಲಿ ಪ್ರಚಾರ ಮಾಡದೆ ಇರುವುದು ರೈತರು ಮುಗ್ಧ ಅಮಾಯಕ ರೈತರು ಈ ಅವಕಾಶದಿಂದ ವಂಚಿತರಾಗಿದ್ದಾರೆ, ಕಳೆದ ಎರಡು ತಿಂಗಳ ಹಿಂದೆ ಬ್ಯಾಂಕ್ ನ ಕೇಂದ್ರ ಕಚೇರಿ ಬಳ್ಳಾರಿಯಲ್ಲಿ ಹೋರಾಟ ನಡೆಸಿದ ಪರಿಣಾಮ ಈ ಆದೇಶ ಹೊರಡಿಸಲಾಗಿದೆ ಆದರೆ ಕೆಲವು ಶಾಖೆಗಳು ಇದನ್ನು ಮರೆಮಾಚಿ ರೈತರಿಗೆ ವಂಚನೆ ಮಾಡುತ್ತಿವೆ,

ಒ ಟಿ ಎಸ್ ಮೇಳದ ಅನುಕೂಲ ಎಲ್ಲಾ ರೈತರಿಗೂ ಸಿಗಬೇಕು ನಿಮ್ಮ ಶಾಖೆಗಳಲ್ಲಿ ಹೆಚ್ಚು ಪ್ರಚಾರ ಮಾಡಿ ರೈತರಿಗೆ ವಂಚನೆ ಮಾಡದೆ ಅನುಕೂಲ ಮಾಡಿ ಕೊಡಬೇತುಯ ಒ ಟಿ ಎಸ್ ಮಾಡಿದ ರೈತರಿಗೆ ಮತ್ತೆ ಸಾಲ ಕೊಡಬೇಕು ಎಂದು ಪ್ರತಿಭಟನಾಕಾರರು ಬ್ಯಾಂಕ್ ವಿರುದ್ಧ ದಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಯಾದವಮೂರ್ತಿ, ಹಿರಿಯ ವ್ಯವಸ್ಥಾಪಕ ಭಾನುಪ್ರಕಾಶ್ಧರಣಿನಿರತ ರೈತರ ಮನವೊಲಿಸಿ ಬ್ಯಾಂಕ್ ಗಳಲ್ಲಿ ನಾಮಫಲಕ ಅನಾವರಣ ಮಾಡಿಸಿ ಹೆಚ್ಚು ಪ್ರಚಾರ ಮಾಡಿ ರೈತರಿಗೆ ಜಾಗೃತಿ ಮೂಡಿಸಿ ಓ ಟಿ ಎಸ್ ಮೇಳದ ಅನುಕೂಲ ಎಲ್ಲಾ ರೈತರಿಗೂ ಸಿಗುವಂತೆ ಎಲ್ಲ ಶಾಖೆಗಳಿಗೆ ಇಂದೆ ಸೂಚನೆ ನೀಡುತ್ತೇವೆ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿರಂ ಮಾರ್ಬಳ್ಳಿ ನೀಲಕಂಠಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ

ಬರಡನಪುರ ನಾಗರಾಜ್, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಸಂಘಟನಾ ಕಾರ್ಯದರ್ಶಿ ಕುರುಬೂರು ಪ್ರದೀಪ್, ಮಹಿಳಾ ಅಧ್ಯಕ್ಷೆ ಕಮಲಮ್ಮ, ರೈತ ಮಹಿಳೆ ಸಾಕಮ್ಮ, ಅಂಬಳೆ ಮಂಜುನಾಥ್, ಬನ್ನೂರು ಸೂರಿ, ಶಂಭುದೇವನಪುರ ಪ್ರಭುಸ್ವಾಮಿ, ಮೊದಲಾದವರು ಇದ್ದರು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ