ರೈತರು ಸರ್ಕಾರದ ಬೆಂಬಲ ಬೆಲೆ ಪಡೆಯಬೇಕು: ಶಾಸಕ ರಮೇಶ ಬಂಡಿಸಿದ್ದೇಗೌಡ

KannadaprabhaNewsNetwork | Published : Feb 18, 2024 1:32 AM

ಸಾರಾಂಶ

ಖರೀದಿ ಕೇಂದ್ರಕ್ಕೆ ಧಾನ್ಯ ತಂದ ಯಾವುದೇ ರೈತರನ್ನು ಅಧಿಕಾರಿಗಳು ಪರಿಗಣನೆಗೆ ತೆಗೆದುಕೊಳ್ಳದಿದ್ದರೆ ಅವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ವಿರುದ್ಧ ಕ್ರಮ ವಹಿಸಲಾಗುತ್ತದೆ. ಅಧಿಕಾರಿಗಳು ಕ್ಷೇತ್ರದಲ್ಲಿನ ರಾಗಿ ಬೆಳೆದ ರೈತರನ್ನು ಸಂಪರ್ಕಿಸಿ ತಾವೇ ಖರೀದಿ ಕೇಂದ್ರಕ್ಕೆ ತರುವ ಮಾಹಿತಿಗಳ ನೀಡಬೇಕು. ಎಂದು ಅಧಿಕಾರಿಗಳಿಗೂ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ರೈತರು ತಾವು ಬೆಳೆದ ಧಾನ್ಯವನ್ನು ಖರೀದಿ ಕೇಂದ್ರಕ್ಕೆ ತಂದು ಮಾರಾಟ ಮಾಡಿ ಸರ್ಕಾರದ ಬೆಂಬಲ ಬೆಲೆ ಪಡೆದುಕೊಳ್ಳಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.

ಪಟ್ಟಣದ ಟಿಎಪಿಸಿಎಂಸ್ ಕಚೇರಿ ಆವರಣದಲ್ಲಿ ನೂತನವಾಗಿ ತೆರೆಯಲಾದ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ, ರೈತರು ದಳ್ಳಾಳಿಗಳಿಂದ ದೂರವಿರಬೇಕು. ತಾವೇ ಖುದ್ದಾಗಿ ಧಾನ್ಯ ತಂದು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿ ಸರ್ಕಾರದ ಬೆಂಬಲ ಬೆಲೆ ಪಡೆದುಕೊಳ್ಳಬೇಕು ಎಂದರು.

ಖರೀದಿ ಕೇಂದ್ರಕ್ಕೆ ಧಾನ್ಯ ತಂದ ಯಾವುದೇ ರೈತರನ್ನು ಅಧಿಕಾರಿಗಳು ಪರಿಗಣನೆಗೆ ತೆಗೆದುಕೊಳ್ಳದಿದ್ದರೆ ಅವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ವಿರುದ್ಧ ಕ್ರಮ ವಹಿಸಲಾಗುತ್ತದೆ ಎಂದು ಎಚ್ಚರಿಸಿದರು.

ಅಧಿಕಾರಿಗಳು ಕ್ಷೇತ್ರದಲ್ಲಿನ ರಾಗಿ ಬೆಳೆದ ರೈತರನ್ನು ಸಂಪರ್ಕಿಸಿ ತಾವೇ ಖರೀದಿ ಕೇಂದ್ರಕ್ಕೆ ತರುವ ಮಾಹಿತಿಗಳ ನೀಡಬೇಕು ಎಂದು ಅಧಿಕಾರಿಗಳಿಗೂ ಎಚ್ಚರಿಸಿದರು.

ಸಾಮಾನ್ಯ ಭತ್ತಕ್ಕೆ 2183 ರು.ಗಳು ಹಾಗೂ ರಾಗಿಗೆ 3846 ರು. ಗಳನ್ನು ಬೆಂಬಲ ಬೆಲೆಯೊಂದಿಗೆ ಎಸ್‌ಆರ್‌ಪಿ ದರವನ್ನು ಸರ್ಕಾರ ನಿಗಧಿ ಮಾಡಿದೆ. ಪಹಣಿ, ಆದಾರ್ ಕಾರ್ಡ್‌, ಬ್ಯಾಂಕ್ ಪಾಸ್ ಬುಕ್ ನಂಬರ್ ಜರಾಕ್ಸ್ ಪ್ರತಿಗಳನ್ನು ಧಾನ್ಯ ಖರೀದಿ ಕೇಂದ್ರಕ್ಕೆ ತಂದು ಮಾರಾಟ ಮಾಡಿ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ವೇಳೆ ರಾಜ್ಯ ಮಾರುಕಟ್ಟೆ ಮಹಾ ಮಂಡಳ ನಿರ್ದೇಶಕ ಕೆ.ಎಸ್.ಮೋಹನ್, ತಹಸೀಲ್ದಾರ್ ಪರಿಶುರಾಮ್ ಸತ್ತಿಗೇರಿ, ಮೈಸೂರು ವಿಭಾಗದ ರೀಜನಲ್ ಮಾರ್ಕೇಟಿಂಗ್ ಮ್ಯಾನೇಜರ್ ವೆಂಕಟೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಎಂ. ನಂದೀಶ್, ಖರೀದಿ ಅಧಿಕಾರಿ ದರ್ಶನ್, ಎಪಿಎಂಸಿ ಕಾರ್ಯದರ್ಶಿ ರಫಿಕ್, ಉಪಾಧ್ಯಕ್ಷೆ ಲಕ್ಷ್ಮಿದೇವಮ್ಮ ಸೇರಿದಂತೆ ಇತರರು ಇದ್ದರು.

ಶಾಸಕ ಮಧುಗೆ ಕೃಷಿ ಪತ್ತಿನ ಸಂಘದ ನಿರ್ದೇಶಕರಿಂದ ಅಭಿನಂದನೆ

ಭಾರತೀನಗರ:

ಮುಟ್ಟನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಗೊಂಡ ನೂತನ ನಿರ್ದೇಶಕರು ಶಾಸಕ ಮಧು ಜಿ.ಮಾದೇಗೌಡರನ್ನು ಅಭಿನಂದಿಸಿದರು.ಭಾರತೀಎಜುಕೇಷನ್ ಟ್ರಸ್ಟ್‌ನಲ್ಲಿ ಅಭಿನಂದನೆ ಸ್ವೀಕರಿಸಿದ ಶಾಸಕರು ಮಾತನಾಡಿ, ನಮ್ಮ ಬೆಂಬಲಿಗರು ಸಹಕಾರ ಸಂಘದಲ್ಲಿ ಆಯ್ಕೆಗೊಂಡಿರುವುದು ನನಗೆ ಬಲ ತುಂಬಿದಂತಾಗಿದೆ. ಅದೇ ರೀತಿಯಲ್ಲಿ ಸಹಕಾರ ಸಂಘವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕೆಂದು ಸಲಹೆ ನೀಡಿದರು.

ಸಂಘಕ್ಕೆ ಅಧ್ಯಕ್ಷ-ಉಪಾಧ್ಯಕ್ಷರನ್ನು ಸಹ ಒಮ್ಮತದಿಂದ ಆಯ್ಕೆಗೊಳಿಸಿಕೊಂಡು ಪಕ್ಷಕ್ಕೆ ಚ್ಯೂತಿಬಾರದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು. ಈ ವೇಳೆ ನೂತನ ನಿರ್ದೇಶಕರಾದ ಎಂ.ಇ.ಮಹೇಂದ್ರ, ಚಿಕ್ಕನಾಥೇಗೌಡ, ಎಂಎಚ್.ಪುಟ್ಟಸ್ವಾಮಿ, ಕಲ್ಪಉಮೇಶ್, ಅಶೋಕ್, ಪ್ರಜ್ವಲ್, ರಾಜ್‌ಕುಮಾರ್, ಟಿ.ವೆಂಕಟೇಶ್, ಮಂಜುಳಾರಾಜ್, ಗೋಪಾಲಯ್ಯ, ಮುಖಂಡರಾದ ಎನ್.ಶಿವಲಿಂಗೇಗೌಡ, ಎಂ.ಇ.ಸುರೇಶ್, ಪುರುಷೋತ್ತಮ್, ಎಂ.ಇ.ನಂದೀಶ್, ಸಿದ್ದಯ್ಯ, ಕಾಳೇಗೌಡ, ವೀರೇಂದ್ರ, ಅನಿಲ್‌ಕುಮಾರ್, ಹರ್ಷಿತ್‌ಗೌಡ ಉಪಸ್ಥಿತಿದ್ದರು.

Share this article