ಬಾಲಕಿ ಅತ್ಯಾಚಾರ, ಕೊಲೆಗೆ ಪರಿಹಾರ ನೀಡುವಂತೆ ರೈತಸಂಘದಿಂದ ಒತ್ತಾಯ

KannadaprabhaNewsNetwork |  
Published : Oct 15, 2025, 02:06 AM IST
37 | Kannada Prabha

ಸಾರಾಂಶ

ವೇದಿಕೆಯಲ್ಲಿ ರಾಷ್ಟ್ರ ಹಾಗೂ ರಾಜ್ಯ ಸರ್ಕಾರಗಳ ಮೂಲಕ ರೈತ ದಿನ ಆಚರಿಸಿ, ಪ್ರಗತಿ ರೈತರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಅನುಷ್ಠಾನ ತರುವಂತೆ ಸರ್ಕಾರಕ್ಕೆ ಒತ್ತಾಯಿಸಲು ಮನವಿಮಾಡುವುದಕ್ಕೂ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಿತು.

ಕನ್ನಡಪ್ರಭ ವಾರ್ತೆ ಮೈಸೂರು

ಕಳೆ ವಾರ ವಸ್ತುಪ್ರದರ್ಶನ ಹತ್ತಿರ ಅತ್ಯಾಚಾರ ಹಾಗೂ ಕೊಲೆಯಾದ ಬಾಲಕಿಯ ಕುಟುಂಬಕ್ಕೆ ಸರ್ಕಾರ ಆರ್ಥಿಕ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ರೈತ ಪರ್ವ ಒತ್ತಾಯಿಸಿತು.

ಕರ್ನಾಟಕ ರಾಜ್ಯ ರೈತ ಸಂಘ ರೈತ ಪರ್ವ ಕಚೇರಿಯಲ್ಲಿ ವಿವಿಧ ಜಿಲ್ಲೆಗಳ, ತಾಲೂಕು ಅಧ್ಯಕ್ಷರ ಸಮಕ್ಷಮದಲ್ಲಿ ಸಂಸ್ಥಾಪನ ಅಧ್ಯಕ್ಷ ಅರುಣ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಡಿ. 23ರಂದು ನಡೆಯುವ ವಿಶ್ವರೈತ ದಿನಾಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕಳೆದ ಐದು ವರ್ಷಗಳಿಂದಲೂ ನಿರಂತರವಾಗಿ ರೈತ ಪರ್ವ ವತಿಯಿಂದ ವಿಶ್ವರೈತ ದಿನ ಆಯಾಯ ವರ್ಷದ ಡಿ. 23ರಂದು ಕಾರ್ಯಕ್ರಮ ಆಯೋಜಿಸಲು ಈ ಬಾರಿ ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನಲ್ಲಿ ಕಾರ್ಯಕ್ರಮ ನಡೆಸಲು ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.

ವೇದಿಕೆಯಲ್ಲಿ ರಾಷ್ಟ್ರ ಹಾಗೂ ರಾಜ್ಯ ಸರ್ಕಾರಗಳ ಮೂಲಕ ರೈತ ದಿನ ಆಚರಿಸಿ, ಪ್ರಗತಿ ರೈತರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಅನುಷ್ಠಾನ ತರುವಂತೆ ಸರ್ಕಾರಕ್ಕೆ ಒತ್ತಾಯಿಸಲು ಮನವಿಮಾಡುವುದಕ್ಕೂ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಿತು.

ವಿವಿಧ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದ ಪದಾಧಿಕಾರಿಗಳನ್ನು ನಮಿಸಿ ನೇಮಕಾತಿ ಪತ್ರಗಳನ್ನು ನೀಡಲಾಯಿತು.

ರಾಜ್ಯ ಸಂಚಾಲಕ ಮರಿಯಪ್ಪ, ಚಾಮರಾಜನಗರ ಜಿಲ್ಲಾಧ್ಯಕ್ಷ ಸೋಮಣ್ಣ, ತುಮಕೂರು ಅಧ್ಯಕ್ಷ ಬಿ.ಎಲ್‌. ಮಂಜುನಾಥ, ತುಮಕೂರು ಜಿಲ್ಲೆ ಪ್ರಚಾರ ಸಮಿತಿ ಅಧ್ಯಕ್ಷ ಸತೀಶ್‌, ಗುಂಡ್ಲಪೇಟೆ ತಾಲೂಕು ಅಧ್ಯಕ್ಷ ಅಪ್ಪಾ ಸಾಹೇಬ ನಾಯ್ಕಲ್‌, ಕುಣಿಗಲ್‌ ತಾಲೂಕು ಅಧ್ಯಕ್ಷ ಜೆ.ಎನ್. ಪುರುಷೋತ್ತಮ, ಬೆಂಗಳೂರು ದಕ್ಷಿಣ ತಾಲೂಕು ಅಧ್ಯಕ್ಷ ಸಿ. ರಮೇಶ್, ನೆಲಮಂಗಲ ತಾಲೂಕು ಅಧ್ಯಕ್ಷ ನಟರಾಜು, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ಶಿವೇಗೌಡ, ಗುಂಡ್ಲುಪೇಟೆ ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀಪಾದ, ಹುಲಿಯೂರು ದುರ್ಗ ಹೋಬಳಿ ಅಧ್ಯಕ್ಷ ಕುಮಾರ, ತಾಲೂಕ ಉಪಾಧ್ಯಕ್ಷ ಪ್ರಕಾಶ್‌, ಯಡಿಯೂರು ಹೋಬಳಿ ಅಧ್ಯಕ್ಷ ಟಿ. ನಾಗರಾಜು ಭಾಗವಹಿಸಿದ್ದರು.

ಸಂಸ್ಥಾಪಕ ಅಧ್ಯಕ್ಷ ಅರುಣ್‌ ಕುಮಾರ್‌, ಗೌರವಾಧ್ಯಕ್ಷ ಕುಮಾರ್, ಪ್ರಧಾನ ಕಾರ್ಯದರ್ಶಿ ಉಮಾಪತಿ, ರಾಜ್ಯ ಉಪಾಧ್ಯಕ್ಷ ವಿಜಯ್‌, ಕಾನೂನು ಸಲಹೆಗಾರ ಸತೀಶ್‌ ಕುಮಾರ್‌, ರಾಜ್ಯ ಕಾರ್ಯದರ್ಶಿ ಚಾಮರಾಜು, ಎಚ್‌.ಡಿ. ಕೋಟೆ ತಾಲೂಕು ಅಧ್ಯಕ್ಷ ಸಿದ್ದಲಿಂಗೇಗೌಡ ಇದ್ದರು.

PREV

Recommended Stories

ಮರಳು ದಂಧೆ ತಡೆದ ಎಎಸ್‌ಐಗೆ ಹಲ್ಲೆ: ರಾಜೂಗೌಡ
ನಟ ದರ್ಶನ್‌ ಸೆಲ್‌ ಪರಿಶೀಲನೆ ನಡೆಸಿದ ಕಾನೂನು ಪ್ರಾಧಿಕಾರ