ಕಸಾಪ ಸಂಘಟನಾ ಕಾರ್ಯದರ್ಶಿ ಮೇಲೆ ಮಾರಣಾಂತಿಕ ಹಲ್ಲೆ

KannadaprabhaNewsNetwork |  
Published : Dec 30, 2024, 01:04 AM IST
28ಎಚ್ಎಸ್ಎನ್6 : ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಜಬೀಉಲ್ಲಾಬೇಗ್. | Kannada Prabha

ಸಾರಾಂಶ

ಚನ್ನರಾಯಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಜಬೀಉಲ್ಲಾಬೇಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಪಟ್ಟಣದ ಬಾಗೂರು ರಸ್ತೆಯ ಟಿಪ್ಪು ವೃತ್ತದ ಬಳಿ ಸಂಜೆ ೬ ಗಂಟೆಯ ಸಮಯದಲ್ಲಿ ಅಬ್ದುಲ್‌ಹಕ್, ಅಬ್ದುಲ್ ಹಸನ್, ಫಹಾದ್, ಸಾದಿಕ್, ಶಮಿ, ಸಾಕಿಬ್ ಮತ್ತಿತರ ಸುಮಾರು ೧೦ಕ್ಕೂ ಹೆಚ್ಚು ಜನ ಗೂಂಡಾಗಳು ಏಕಾಏಕಿ ಸುತ್ತುವರೆದು ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಜಬೀಉಲ್ಲಾಬೇಗ್ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಜಬೀಉಲ್ಲಾಬೇಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಪಟ್ಟಣದ ಬಾಗೂರು ರಸ್ತೆಯ ಟಿಪ್ಪು ವೃತ್ತದ ಬಳಿ ಸಂಜೆ ೬ ಗಂಟೆಯ ಸಮಯದಲ್ಲಿ ಅಬ್ದುಲ್‌ಹಕ್, ಅಬ್ದುಲ್ ಹಸನ್, ಫಹಾದ್, ಸಾದಿಕ್, ಶಮಿ, ಸಾಕಿಬ್ ಮತ್ತಿತರ ಸುಮಾರು ೧೦ಕ್ಕೂ ಹೆಚ್ಚು ಜನ ಗೂಂಡಾಗಳು ಏಕಾಏಕಿ ಸುತ್ತುವರೆದು ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಜಬೀಉಲ್ಲಾಬೇಗ್ ಆರೋಪಿಸಿದ್ದಾರೆ. ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಪಟ್ಟಣದ ಗೂರನಹಳ್ಳಿ ಬಳಿ ಬೈಕ್‌ನಲ್ಲಿ ಬರುವಾಗ ಹಿಂದೆ ಇಂದ ಟಾಟಾ ಏಸಿ ಗಾಡಿಯಿಂದ ಅಪಘಾತ ಮಾಡಿ ಕೊಲೆ ಮಾಡಲು ಬಂದಾಗ ಸ್ವಲ್ಪದರಲ್ಲಿ ಪಾರಾಗಿ ಟಿಪ್ಪು ವೃತ್ತದ ಬಳಿ ಬಂದಿದ್ದು, ಬೈಕ್ ಅಡ್ಡಗಟ್ಟಿ ಬೈಕ್‌ನಿಂದ ಕೆಳಗೆ ಎಳೆದುಕೊಂಡು ನೆಲ್ಲಕ್ಕೆ ಹಾಕಿ ಮನಸೋ ಇಚ್ಛೆ ಹಲ್ಲೆ ಮಾಡಿ ನಿನ್ನು ಹಾಗೂ ನಿಮ್ಮ ಕುಟುಂಬವನ್ನು ಕೊಲೆ ಮಾಡುತ್ತೇವೆ ಏನಾದರೂ ಪೊಲೀಸ್ ಠಾಣೆಗೆ ದೂರು ನೀಡಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಆದರೆ ನಮ್ಮ ಕುಟುಂಬದವರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೂ ಸಹ ಪ್ರಕರಣ ದಾಖಲಿಸಲಿಲ್ಲ. ನಂತರ ಮೇಲಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದು ಹೇಳಿದ ನಂತರ ಮೊಕದ್ದಮೆ ದಾಖಲಿಸಿದ್ದಾರೆ. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಜನಪ್ರತಿನಿಧಿಗಳ, ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳದೇ ಹೋದರೆ ತಾಲೂಕಿನಲ್ಲಿ ಹೆಣಗಳ ರಾಶಿ ಉರುಳಲಿದ್ದು ಕೊಲೆಗಳು ಸರ್ವೆಸಾಮಾನ್ಯವಾಗುತ್ತದೆ. ಆದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮವಹಿಸಿ ಕೂಡಲೆ ಆರೋಪಿಗಳನ್ನು ಬಂಧಿಸಿ ನಮ್ಮ ಕುಟುಂಬಕ್ಕೆ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ