ಆಧುನಿಕ ಬದುಕಿನಲ್ಲಿ ಜಾನಪದ ಮತ್ತೆ ವಿಜೃಂಭಿಸಬೇಕಿದೆ: ಡಾ. ಅಪ್ಪಗೆರೆ ತಿಮ್ಮರಾಜು

KannadaprabhaNewsNetwork |  
Published : Aug 24, 2025, 02:00 AM IST
ಪೋಟೋ: 22ಎಸ್‌ಎಂಜಿಕೆಪಿ04ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ವಿಶ್ವ ಜಾನಪದ ದಿನಾಚರಣೆಯ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಜಿಲ್ಲಾ ಸಮಿತಿ, ಸಹ್ಯಾದ್ರಿ ಕಲಾ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾನಪದ ಕಲೆಗಳ ಪ್ರದರ್ಶನ ಮತ್ತು ಕಾಲೇಜು ವಿದ್ಯಾರ್ಥಿಗಳ ಜಾನಪದ ಉಡುಗೆ-ತೊಡುಗೆಗಳ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಆಧುನಿಕ ಬದುಕಿನಲ್ಲಿ ಜಾನಪದ ಮತ್ತೆ ವಿಜೃಂಭಿಸಬೇಕಾಗಿದೆ ಎಂದು ಖ್ಯಾತ ಜಾನಪದ ವಿದ್ವಾಂಸ ಹಾಗೂ ಗಾಯಕ ಡಾ. ಅಪ್ಪಗೆರೆ ತಿಮ್ಮರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆಧುನಿಕ ಬದುಕಿನಲ್ಲಿ ಜಾನಪದ ಮತ್ತೆ ವಿಜೃಂಭಿಸಬೇಕಾಗಿದೆ ಎಂದು ಖ್ಯಾತ ಜಾನಪದ ವಿದ್ವಾಂಸ ಹಾಗೂ ಗಾಯಕ ಡಾ. ಅಪ್ಪಗೆರೆ ತಿಮ್ಮರಾಜು ಹೇಳಿದರು.

ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ವಿಶ್ವ ಜಾನಪದ ದಿನಾಚರಣೆಯ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಜಿಲ್ಲಾ ಸಮಿತಿ, ಸಹ್ಯಾದ್ರಿ ಕಲಾ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾನಪದ ಕಲೆಗಳ ಪ್ರದರ್ಶನ ಮತ್ತು ಕಾಲೇಜು ವಿದ್ಯಾರ್ಥಿಗಳ ಜಾನಪದ ಉಡುಗೆ-ತೊಡುಗೆಗಳ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಜಾನಪದ ಕನಿಷ್ಟ ಅಲ್ಲ, ಅದು ಈ ನೆಲದ ಸಂಸ್ಕೃತಿ. ಜೊತೆಗೆ ಕನ್ನಡ ಭಾಷೆಯ ಸಂಸ್ಕೃತಿಯೂ ಹೌದು, . ನನ್ನೂರಿನ ಹಾಡು ಜಾನಪದ ಕಲೆ ಇತ್ತೀಚೆಗೆ ಮರೆಯಾಗುತ್ತಿದೆ. ನೂರಾರು ಕಲಾ ಪ್ರಕಾರಗಳು ಇದ್ದರೂ ಕೂಡ ಈಗ ಸುಮಾರು ೭೫ ಕಲಾ ಪ್ರಕಾರಗಳು ಜೀವಂತವಾಗಿವೆ, ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ 12 ಕಲಾಪ್ರಕಾರಗಳು ಇನ್ನೂ ಅಸ್ಥಿತ್ವವನ್ನು ಉಳಿಸಿಕೊಂಡಿವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್. ಸಿರಾಜ್ ಅಹಮದ್‌ ಮಾತನಾಡಿ, ಜಾನಪದ ಎಂದರೆ ಬದುಕಿನ ವಿಧಾನ. ಕಳೆದುಹೋದ ಬದುಕನ್ನು ಮತ್ತೆ ಬೆಸೆಯುವ ಪ್ರಕ್ರಿಯೆ. ಅದು ಜೀವಂತಿಕೆ ಮನಸ್ಸುಗಳ, ಭಾವನೆಗಳ ವರ್ತಮಾನದ ಬದುಕಿನ ಬೆರೆಯುವಿಕೆ ಮತ್ತು ಬೆಸೆಯುವಿಕೆ ಇದು ಕೇವಲ ಆಚರಣೆಗೆ ಸೀಮಿತವಾಗಬಾರದು, ಜಾನಪದ ಎಂದರೆ ಕೆಲಸಕ್ಕೆ ಬಾರದ್ದು ಎಂದು ಅರ್ಥವಲ್ಲ, ಅದು ತಿಳುವಳಿಕೆಯ ವಿಧಾನ. ಯಜಮಾನ್ಯಕ್ಕೆ ಇಲ್ಲಿ ಅವಕಾಶವಿಲ್ಲ. ಸೃಜನಶೀಲತೆ ಇಲ್ಲಿದೆ ,ಕಳೆದುಹೋದ ಬದುಕನ್ನು ನಿತ್ಯ ಘಟಿಸುವ ಬದುಕಿನ ವರ್ತಮಾನದ ಭಾಗವೇ ಜಾನಪದ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಧ್ಯಾಪಕಿ ಡಾ.ಜಿ.ಕೆ. ಪ್ರೇಮಾ, ಜಾನಪದ ಬಹುದೊಡ್ಡ ಬದುಕಿನ ಭಾಗ ಇಲ್ಲಿ ಉಡುಗೆ-ತೊಡುಗೆ, ವಿಜ್ಞಾನ, ಹಾಡು, ಹಸೆ, ಕಥೆ, ಕಥನಕಾವ್ಯ, ಹೆಣ್ಣಿನ ವಿವಿಧ ಮುಖಗಳು, ಪ್ರೀತಿ, ಪರಂಪರೆ, ಸಂಸ್ಕೃತಿ, ಕನ್ನಡ ಜ್ಞಾನ, ಅನುಭವಗಳ ಸಂಪತ್ತು, ಮಾನವಿಕ ಇತಿಹಾಸ, ಸಮುದಾಯದ ಚಹರೆ ಹೀಗೆ ಎಲ್ಲವನ್ನೂ ಒಳಗೊಂಡಿದೆ ಎಂದರು.

ಇದೇ ಸಂದರ್ಭದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳಿಂದ ಜಾನಪದ ಕಲೆಗಳ ಕಲಾ ಪ್ರದರ್ಶನ ನಡೆಯಿತು. ಡೊಳ್ಳು ಸೇರಿದಂತೆ ವಿವಿಧ ಪ್ರದರ್ಶನಗಳು, ಉಡುಗೆ-ತೊಡುಗೆಗಳು, ಡಾ. ಅಪ್ಪಗೆರೆ ತಿಮ್ಮರಾಜು ಅವರ ಗಾಯನ ಇವೆಲ್ಲವೂ ಗಮನ ಸೆಳೆದವು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ್ ವಹಿಸಿದ್ದರು. ಖ್ಯಾತ ಗಾಯಕಿ ನಳಿನಾಕ್ಷಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್. ಮಂಜುನಾಥ್, ಸಹಪ್ರಾಧ್ಯಾಪಕ ಡಾ. ಎಚ್.ಪಿ. ಮಂಜುನಾಥ್, ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹಿಳ್ಳೋಡಿ, ಡಾ. ಹಾಲಮ್ಮ, ಡಾ. ಮೋಹನ್ ಚಂದ್ರಗುತ್ತಿ, ಡಾ. ಮಹಾದೇವ ಸ್ವಾಮಿ ಸೇರಿದಂತೆ ಹಲವರಿದ್ದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!