- ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ
-------ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಪ್ರತಿಪಕ್ಷಗಳ ಟೀಕೆಯ ನಡುವೆಯು ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದರು ಸಹ ಪಕ್ಷಗಳ ಆರೋಪದಂತೆ ಖಜಾನೆ ಖಾಲಿಯಾಗಿಲ್ಲ, ರಾಜ್ಯ ದಿವಾಳಿಯು ಆಗಿಲ್ಲ ಎಂದು ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಯತೀಂದ್ರ ಸಿದ್ದರಾಮಯ್ಯ ಹೇಳಿದರು.ತಾಲೂಕಿನ ಮನ್ನೇಹುಂಡಿ ಗ್ರಾಮದಲ್ಲಿ ಆರಂಭವಾಗಿರುವ ನೂತನ ಚಿಕಿತ್ಸಾಲಯವನ್ನು ಗೋವುಗಳಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ್ದ 5 ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. 58 ಸಾವಿರ ಕೋಟಿ ವೆಚ್ಚದ ಗ್ಯಾರಂಟಿ ಯೋಜನೆಗಳನ್ನುಜಾರಿ ಗೊಳಿಸಿದರೆ ಸರ್ಕಾರದ ಖಜಾನೆ ಖಾಲಿಯಾಗಿ ರಾಜ್ಯ ದಿವಾಳಿಯಾಗುತ್ತದೆ ಎಂಬ ಪ್ರತಿಪಕ್ಷದವರ ಆರೋಪ ಮತ್ತು ಟೀಕೆಯನ್ನು ಮೀರಿ ಎಲ್ಲ 5 ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಎಂದರು.ರಾಜ್ಯಕ್ಕೆ ಹೊಸದಾಗಿ 20 ಪಶುಚಿಕಿತ್ಸಾಲಯ ಮಂಜೂರಾಗಿದೆ. ಅದರಲ್ಲಿ ವರುಣ ಕ್ಷೇತ್ರ ವ್ಯಾಪ್ತಿಯ ಕೆಂಪಿ ಸಿದ್ದನಹುಂಡಿ, ಉತ್ತನಹಳ್ಳಿ ಹಾಗೂ ಮನ್ನೇಹುಂಡಿ ಗ್ರಾಮಕ್ಕೆ ಸಚಿವ ಕೆ. ವೆಂಕಟೇಶ್ ಅವರು ಮಂಜೂರು ಮಾಡಿಕೊಟ್ಟಿದ್ದಾರೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಎನ್. ಸೋಮು, ಸದಸ್ಯರಾದ ನಾಗರಾಜು, ಎಲ್. ಮಂಜುನಾಥ್, ಪ್ರಕಾಶ್, ತಾಪಂ ಮಾಜಿ ಉಪಾಧ್ಯಕ್ಷ ಬಿ. ಮರಯ್ಯ, ಕಿರಗಸೂರು ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ವರುಣ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮುದ್ದೇಗೌಡ, ತಾಪಂ ಮಾಜಿ ಸದಸ್ಯ ಎಂ. ರಮೇಶ್, ಮಹೇಶ್, ಬಾಬು, ಎಪಿಎಂಸಿ ಮಾಜಿ ಅಧ್ಯಕ್ಷ ಎನ್. ಅನಿಲ್ ಕುಮಾರ್, ಡೇರಿ ಉಪಾಧ್ಯಕ್ಷ ಏಳುಮಲೆ ಮಂಜು, ಗ್ರಾಪಂ ಸದಸ್ಯ ಕಾಮಿನಿ ರಾಜಶೇಖರ್, ಗ್ರಾಪಂ ಮಾಜಿ ಅಧ್ಯಕ್ಷ ಅಶ್ವಿನ್ ಇದ್ದರು.