ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಔಷಧಿ ವಿತರಣೆ ಕಾರ್ಯಕ್ರಮ

KannadaprabhaNewsNetwork | Published : Nov 25, 2023 1:15 AM

ಸಾರಾಂಶ

ಅರಸೀಕೆರೆ ನಗರದ ಸಂತೆ ಮೈದಾನ ನಗರಸಭೆ ನೂತನ ಕಟ್ಟಡದಲ್ಲಿ ಸಾರ್ವಜನಿಕರಿಗೆ ರೋಗಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಈ ಕಾರ್ಯಕ್ರಮವನ್ನು ಆಯುಷ್ ತಜ್ಞ ಡಾ. ಶಂಕರ್, ನೇತ್ರ ತಜ್ಞ ಹೇಮಂತ್, ಆಪ್ತ ಸಮಾಲೋಚಕಿ ಕುಸುಮ ಎಸ್‌, ಪ್ರಯೋಗಶಾಲಾ ತಜ್ಞರು ಶಾಂತ ಎಂ ಮಂಜುಳಾ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಸಂತೆ ಮೈದಾನ ನಗರಸಭೆ ನೂತನ ಕಟ್ಟಡದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಸನ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಅರಸೀಕೆರೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ಪ್ರತಿಬಂಧಕ ಘಟಕ ಹಾಸನ, ಜಯಚಾಮರಾಜೇಂದ್ರ ಸಾರ್ವಜನಿಕರ ಆಸ್ಪತ್ರೆ ಅರಸೀಕೆರೆ ಇವರ ಸಹಯೋಗದೊಂದಿಗೆ (ಸಮುದಾಯ ಆಧಾರಿತ ತಪಾಸಣಾ ಶಿಬಿರ) ಹಾಗೂ ಸಾರ್ವಜನಿಕರಿಗೆ ರೋಗಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಈ ಕಾರ್ಯಕ್ರಮವನ್ನು ಆಯುಷ್ ತಜ್ಞ ಡಾ. ಶಂಕರ್, ನೇತ್ರ ತಜ್ಞ ಹೇಮಂತ್, ಆಪ್ತ ಸಮಾಲೋಚಕಿ ಕುಸುಮ ಎಸ್‌, ಪ್ರಯೋಗಶಾಲಾ ತಜ್ಞರು ಶಾಂತ ಎಂ ಮಂಜುಳಾ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಶಿಬಿರದಲ್ಲಿ ಬಿ ಪಿ ಶುಗರ್ ಕಣ್ಣಿನ ಪರೀಕ್ಷೆ, ಅಸ್ತಮಾ, ಎಚ್ಐವಿ ರಕ್ತ ಪರೀಕ್ಷೆಯಿಂದ ಗೊತ್ತಾಗುವಂತ ಕಾಯಿಲೆಗಳಿಗೆ ಪರೀಕ್ಷಿಸಲಾಯಿತು ಹಾಗೂ ಇನ್ನೂ ರೋಗಿಗಳಿಗೆ ಹೆಚ್ಚಿನ ಪರೀಕ್ಷೆಗಳಿಗೆ ಅವಶ್ಯಕತೆ ಇದ್ದರೆ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಗೆ ಬರುವಂತೆ ಸೂಚನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆಯುಷ್ ಡಾ. ಶಂಕರ್ ಕೆಲವು ರೋಗಿಗಳಿಗೆ ಕಾಯಿಲೆ ಇದ್ದರೂ ಸಹ ಅವರು ಪರೀಕ್ಷೆಯನ್ನೇ ಮಾಡದೆ ಆ ಕಾಯಿಲೆಯಿಂದ ಬೇರೆ ಸಾಮಾನ್ಯ ಜನರಿಗೂ ಹರಡುವ ಸಂಭವ ಇರುತ್ತದೆ. ಅದರಿಂದ ಕಾಯಿಲೆ ಇದ್ದಂತ ರೋಗಿಗಳು ಅವರೇ ಮೊದಲು ಪರೀಕ್ಷಿಸಿಕೊಂಡು ವೈದ್ಯರಿಂದ ಸಲಹೆ ಔಷಧಿಗಳನ್ನು ಪಡೆದುಕೊಂಡು ಗುಣಮುಖರಾದರೆ ರೋಗಗಳು ಬೇರೆಯವರಿಗೆ ಹರಡುವಂತ ಲಕ್ಷಣಗಳು ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ಆಪ್ತ ಸಮಾಲೋಚಕಿ ಕುಸುಮ ಎಸ್. ಮಾತನಾಡಿ, ಶುಕ್ರವಾರ ನಗರದ ಸಂತೆಯ ದಿನವಾಗಿದ್ದು ಸಾವಿರಾರು ಜನರು ಈ ಸ್ಥಳದಲ್ಲಿ ಆಗಮಿಸುತ್ತಾರೆ. ಅದರಿಂದ ತಪಾಸಣೆ ಶಿಬಿರವನ್ನು ಈ ಸ್ಥಳದಲ್ಲಿ ಆಯೋಜನೆ ಮಾಡಲಾಗಿದ್ದು ಇದರಲ್ಲಿ ಹೆಚ್ಚಿನ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಶೃತಿ. ಆರ್.ಪ್ರಯೋಗ ಶಾಲೆ ತಂತ್ರಜ್ಞರು ನಿರ್ಮಲ ಬಾಲು, ಸುರೇಶ್ ರಾವ್, ವರುಣ ಹಾಗೂ ತಪಾಸಣೆಗಳಿಗೆ ಬಂದಂತಹ ರೋಗಿಗಳು ಉಪಸ್ಥಿತರಿದ್ದರು.

Share this article