ಇಂದಿನಿಂದ 108 ಲಿಂಗೇಶ್ವರ ದೇಗುಲದಲ್ಲಿ ಶ್ರೀ ದಾನಮ್ಮ ದೇವಿ ಪುರಾಣ ಪ್ರವಚನ

KannadaprabhaNewsNetwork | Published : Dec 16, 2024 12:46 AM

ಸಾರಾಂಶ

ನಗರದ 108 ಲಿಂಗೇಶ್ವರ ದೇವಸ್ಥಾನದಲ್ಲಿ ಡಿ.16 ರಿಂದ ಪಂಡಿತ್ ಪುಟ್ಟರಾಜ ಗವಾಯಿಗಳ ಶಿಷ್ಯರಿಂದ ಶ್ರೀ ಗುಡ್ಡಾಪುರದ ದಾನಮ್ಮ ದೇವಿಯ ಪುರಾಣ ಪ್ರವಚನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ 108 ಲಿಂಗೇಶ್ವರ ದೇವಸ್ಥಾನದ ಶರಣ ಶ್ರೀ ಬಸವಲಿಂಗ ಸ್ವಾಮೀಜಿ ಹರಿಹರದಲ್ಲಿ ನುಡಿದಿದ್ದಾರೆ.

- ಜ.2ರವರೆಗೆ ನಿತ್ಯ ಸಂಜೆ 6ರಿಂದ ಆರಂಭ: ಸ್ವಾಮೀಜಿ- - - ಹರಿಹರ: ನಗರದ 108 ಲಿಂಗೇಶ್ವರ ದೇವಸ್ಥಾನದಲ್ಲಿ ಡಿ.16 ರಿಂದ ಪಂಡಿತ್ ಪುಟ್ಟರಾಜ ಗವಾಯಿಗಳ ಶಿಷ್ಯರಿಂದ ಶ್ರೀ ಗುಡ್ಡಾಪುರದ ದಾನಮ್ಮ ದೇವಿಯ ಪುರಾಣ ಪ್ರವಚನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ 108 ಲಿಂಗೇಶ್ವರ ದೇವಸ್ಥಾನದ ಶರಣ ಶ್ರೀ ಬಸವಲಿಂಗ ಸ್ವಾಮೀಜಿ ನುಡಿದರು.

ನಗರದ ಭರಂಪುರದಲ್ಲಿರುವ ಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ಕಾರ್ಯಕ್ರಮ ಪೂರ್ವಸಿದ್ಧತೆ ಪರಿಶೀಲನೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಹೊಸದಾಗಿ ರಚನೆ ಆಗಿರುವ ದೇವಸ್ಥಾನ ಸಮಿತಿಯಿಂದ ಈಗ ಮತ್ತೆ ಮೊದಲಿನಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಈ ನಿಟ್ಟಿನಲ್ಲಿ ಸುಮಾರು 18 ದಿನಗಳ ಕಾಲ ಶ್ರೀ ದಾನಮ್ಮ ದೇವಿ ಪುರಾಣ ಪ್ರವಚನ ಹಮ್ಮಿಕೊಳ್ಳಲಾಗಿದೆ ಎಂದರು.

ಡಿ.16ರಿಂದ ಜ.2 ರವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ ಆರಂಭ ಆಗಲಿರುವ ಪ್ರವಚನವನ್ನು ಗದುಗಿನ ಶ್ರೀ ಗಾನಯೋಗಿ ಶಿವಯೋಗಿ ಪಂಡಿತ್ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಸಂಗಯ್ಯ ಶಾಸ್ತ್ರಿಗಳು ಶ್ರೀ ವೀರೇಶ್ವರ ಪುಣ್ಯಶ್ರಮ ತಬಲಾ ವಾದಕ ರಾಜಶೇಖರ್ ನಡೆಸಿಕೊಡುತ್ತಾರೆ ಎಂದು ಮಾಹಿತಿ ನೀಡಿದರು.

ಸಮಿತಿಯ ಬೆಣ್ಣಿ ಸಿದ್ದೇಶ್ ಮಾತನಾಡಿ, 2025ರ ಹೊಸ ವರ್ಷದ ಜನವರಿ 1ರಂದು 108 ಲಿಂಗೇಶ್ವರ ದೇವಸ್ಥಾನದ ಪೂಜ್ಯ ಗುರುಗಳಾದ ಶರಣ ಶ್ರೀ ಬಸವಲಿಂಗ ಶ್ರೀ ಜನ್ಮದಿನದ ಸಂಭ್ರಮವನ್ನು ಭಕ್ತರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀಗಳಿಂದ ಧನುರ್ಮಾಸದ 321ನೇ ಅನುಷ್ಠಾನ ಧ್ಯಾನ, ಜಪ, ಮೌನವ್ರತ ಮಾಡುವರು ಎಂದರು.

ಧನುರ್ಮಾಸದ ನಿಮಿತ್ತ ಶ್ರೀ 108 ಲಿಂಗೇಶ್ವರಸ್ವಾಮಿ ಮೂರ್ತಿಗೆ ದಿನನಿತ್ಯ ಬೆಳಗ್ಗೆ ರುದ್ರಾಭಿಷೇಕ ಮತ್ತು ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೋಮವಾರ ಸಂಜೆ 6 ಗಂಟೆಗೆ ಪ್ರವಚನ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸುವರು. ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಬೇಕೆಂದು ತಿಳಿಸಿದರು.

ಈ ಸಂದರ್ಭ ದೇವಸ್ಥಾನ ಸಮಿತಿಯ ಸದಸ್ಯರು ಇದ್ದರು.

- - - -15ಎಚ್‍ಆರ್‍ಆರ್04:

ಹರಿಹರ 108 ಲಿಂಗೇಶ್ವರ ದೇವಸ್ಥಾನದಲ್ಲಿ ಶರಣ ಶ್ರೀ ಬಸವಲಿಂಗ ಶ್ರೀ ಸುದ್ದಿಗಾರರೊಂದಿಗೆ ಮಾತನಾಡಿದರು.

Share this article