ಅರಸಾಪುರ ಗ್ರಾಪಂ ಅಧ್ಯಕ್ಷೆಯಾಗಿ ಗಂಗರತ್ನಮ್ಮ

KannadaprabhaNewsNetwork |  
Published : Sep 12, 2025, 12:06 AM IST
ಅರಸಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಗಂಗರತ್ನಮ್ಮ ಅವಿರೋಧ ಆಯ್ಕೆ | Kannada Prabha

ಸಾರಾಂಶ

ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಪಂ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಗಂಗರತ್ನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಂಜುನಾಥ್ ಅಧಿಕೃತ ಘೋಷಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಪಂ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಗಂಗರತ್ನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಂಜುನಾಥ್ ಅಧಿಕೃತ ಘೋಷಣೆ ಮಾಡಿದರು. ಗ್ರಾಪಂ ನೂತನ ಅಧ್ಯಕ್ಷೆ ಗಂಗರತ್ನಮ್ಮ ಮಾತನಾಡಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆರ್ಶೀವಾದ ಹಾಗೂ ಗ್ರಾ ಪಂ ಎರಡನೇ ಅವಧಿಯ ಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಸರ್ವ ಸದಸ್ಯರು ಭರವಸೆಯಿಟ್ಟು ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿದ್ದು, ಸದಸ್ಯರ ಮತ್ತು ಅಧಿಕಾರಿಗಳ ವಿಶ್ವಾಸದೊಂದಿಗೆ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿ ಅವಿರೋಧ ಆಯ್ಕೆ ಮಾಡಿದ ಸದಸ್ಯರಿಗೆ ಧನ್ಯವಾದ ತಿಳಿಸಿದರು. ಗ್ರಾ.ಪಂ ಪಿಡಿಒ ಪೃಥ್ವಿ ಮಾತನಾಡಿ, ಚುನಾವಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಎರಡನೇ ಅವಧಿಯ ಗ್ರಾ.ಪಂ ಅಧ್ಯಕ್ಷ ಆಯ್ಕೆ ಚುನಾವಣೆ ಯಶಸ್ವಿಕಂಡಿದೆ. ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಗಂಗ ರತ್ನಮ್ಮರವರನ್ನು ಆಯ್ಕೆ ಮಾಡಿದ್ದಾರೆ. ನೂತನ ಅಧ್ಯಕ್ಷರು ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿ ಶುಭಕೋರಿದರು.ಸದಸ್ಯ ರಾಮಕೃಷ್ಣಯ್ಯ ಎಸ್.ಕೆ ಮಾತನಾಡಿ, ನಮ್ಮ ಗ್ರಾಪಂ ಗಡಿ ಭಾಗ ಆದ ಕಾರಣ ಗ್ರಾಪಂ ಅಭಿವೃದ್ಧಿಗಾಗಿ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರ ಅನುದಾನಕ್ಕಾಗಿ ಬೇಡಿಕೆ ನೀಡಲಾಗಿದ್ದು, ಸಚಿವರು ಕೂಡ ಸ್ಪಂದಿಸಿದ್ದು ಗ್ರಾಪಂ ಅಭಿವೃದ್ದಿಗೆ ಸಹಕರಿಸಲಿದ್ದಾರೆ. ಗ್ರಾಪಂ ಸದಸ್ಯರ ಒಪ್ಪಿಗೆಯೊಂದಿಗೆ ಅರಸಾಪುರ ಗ್ರಾಪಂ ನೂತನ ಅಧ್ಯಕ್ಷರಾಗಿ ಗಂಗರತ್ನಮ್ಮನವರು ಅವಿರೋಧ ಆಯ್ಕೆಯಾಗಿದ್ದಾರೆ. ಮುಂದಿನ ಅವಧಿಯಲ್ಲಿ ಸದಸ್ಯರನ್ನು ಮತ್ತು ಅಧಿಕಾರಿಗಳ ವಿಶ್ವಾಸಗಳಿಸಿ ನಮ್ಮ ಗ್ರಾಪಂ ವ್ಯಾಪ್ತಿಯ ಪ್ರತಿ ಗ್ರಾಮ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಹೇಳಿದರು.ಈ ವೇಳೆ ತಾ.ಪಂ ಮಾಜಿ ಅಧ್ಯಕ್ಷ ಟಿ.ಸಿ ರಾಮಯ್ಯ, ಉಪಾಧ್ಯಕ್ಷೆ ಪುಟ್ಟಮ್ಮ, ಸದಸ್ಯೆ ರತ್ನಮ್ಮ, ಲಿಂಗಪ್ಪ.ಎನ್, ಮಂಜುನಾಥ.ಬಿ, ಪ್ರಸನ್ನಕುಮಾರ್ ಎ.ಜಿ, ತಿಮ್ಮಯ್ಯ, ನಾಗರಾಜು, ಗಂಗಾಧರಯ್ಯ, ಲಕ್ಷ್ಮೀದೇವಮ್ಮ, ಗಂಗಾಧರಯ್ಯ ಜಿ.ಸಿ, ಚಂದ್ರಕಲಾ, ಲಕ್ಷ್ಮೀದೇವಮ್ಮ, ಮೋಹನ್ ಜಿ.ಎಂ, ಸಿದ್ದಗಂಗಮ್ಮ ಕೆ.ಎನ್, ಸಿದ್ದಗಂಗಮ್ಮ, ಮುಖಂಡರಾದ ಮಂಜಣ್ಣ, ರಾಜಣ್ಣ, ನಾಗರಾಜಪ್ಪ, ಬಿ.ಎಸ್.ಆರ್.ರಾಜಣ್ಣ, ನಾಗರಾಜು, ಗಂಗಣ್ಣ, ನರಸಿಂಹಮೂರ್ತಿ, ಉಗ್ರಪ್ಪ, ಸೇರಿದಂತೆ ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ