ಮುಂಡಗೋಡ: ಕಾತೂರ ಗ್ರಾಮದ ಆಲಳ್ಳಿ ರಸ್ತೆಬದಿ ತ್ಯಾಜ್ಯವನ್ನು ಎಸೆಯಲಾಗಿದ್ದು, ಸಾಂಕ್ರಾಮಿಕ ರೋಗಗಳಿಗೆ ಅಹ್ವಾನ ನೀಡುತ್ತಿದೆ. ನಿತ್ಯ ಸಾಕಷ್ಟು ಜನ ಜ್ವರ ಮುಂತಾದ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಾತೂರ ಗ್ರಾಮದ ಆಲಳ್ಳಿ ರಸ್ತೆಯ ಅಂಚಿನ ಕಾಲುವೆ ಈಗ ಅಕ್ಷರಶಃ ಕಸದ ರಾಶಿಯಿಂದ ಕೂಡಿದ್ದು, ಸಂಪೂರ್ಣ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಮದ್ಯದ ಪೌಚ್, ಬಿಯರ್ ಬಾಟಲ್ ಸೇರಿದಂತೆ ಎಲ್ಲ ರೀತಿಯ ಕಸವನ್ನು ಇಲ್ಲಿಯೇ ಎಸೆಯಲಾಗುತ್ತಿದೆ. ಅಲ್ಲದೆ ಕೊಳಚೆ ನೀರು ಕೂಡ ಹರಿಯುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಿದೆ.ಇದರಿಂದ ಸಾಕಷ್ಟು ಜನ ಜ್ವರದಿಂದ ಬಳಲುತ್ತಿದ್ದಾರೆ. ಈ ಮಾರ್ಗವಾಗಿ ತಿರುಗಾಡಲು ಜನ ಹಿಂದೇಟು ಹಾಕುವಂತಾಗಿದೆ. ಈ ಬಗ್ಗೆ ಹಲವು ಬಾರಿ ಗ್ರಾಪಂಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳಿಯರು ಗ್ರಾಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಪಂನವರು ತಕ್ಷಣ ಸ್ವಚ್ಛತಾ ಕ್ರಮ ಕೈಗೊಂಡು ಸುಸಜ್ಜಿತ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಬೆಂಗಳೂರು ಚಲೋ ಯಶಸ್ವಿಗೆ ಸಿದ್ಧತೆ
ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ನ. ೨೧ರಂದು ಸಂಘಟಿಸಲಾದ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ರಾಜ್ಯಾದಂತ ಸಂಘಟನೆ ಕಾರ್ಯ ಜರುಗಿದ್ದು, ಬೃಹತ್ ಅರಣ್ಯವಾಸಿಗಳ ಜಾಥಾ ಅಂದು ಜರುಗಲಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.ಶುಕ್ರವಾರ ನಗರದ ವೇದಿಕೆಯ ಕಾರ್ಯಲಯದಲ್ಲಿ ಜರುಗಿದ ಬೆಂಗಳೂರು ಚಲೋದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅರಣ್ಯವಾಸಿಗಳ ಸಮಸ್ಯೆಗೆ ಸಕಾರಾತ್ಮಕ ಸ್ಪಂದಿಸುವ ಮತ್ತು ಕಸ್ತೂರಿರಂಗನ್ ವರದಿ ಸಂಪೂರ್ಣವಾಗಿ ಕೇಂದ್ರ ಸರ್ಕಾರ ತಿರಸ್ಕರಿಸಬೇಕೇಂಬ ಹಿನ್ನೆಲೆ ಬೆಂಗಳೂರು ಜಾಥಾ ಸಂಘಟಿಸಲಾಗಿದ್ದು, ರಾಜ್ಯಾದಂತ ಸಕಾರಾತ್ಮಕವಾಗಿ ಸ್ಪಂದನೆ ದೊರಕಿದೆ. ಬೆಂಗಳೂರು ಚಲೋಗೆ ಆಗಮಿಸುವ ಸದ್ಯಸರಿಗೆ ಗುರುತಿನ ಪತ್ರ ಮತ್ತು ಪ್ರಮುಖರಿಗೆ ಗ್ರೀನ್ ಕಾರ್ಡ್ ವಿತರಿಸುವ ಕಾರ್ಯ ತೀವ್ರ ಗತಿಯಲ್ಲಿ ಸಾಗಿದೆ ಮತ್ತು ಗ್ರಾಮಮಟ್ಟದಲ್ಲಿ ಅರಣ್ಯವಾಸಿಗಳ ಜಾಗೃತ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.ಸಭೆಯಲ್ಲಿ ಆರ್.ಎಚ್. ನಾಯ್ಕ ಜನಕಡಗಲ್, ಸಂಚಾಲಕ ಪಿಲ್ಲೆ ಅಂಕೋಲಾ, ನಾಗರಾಜ ಮಂಜುನಾಥ ನಾಯ್ಕ, ಬೆಳ್ಳ ಗೌಡ, ಗುರುಕೃಷ್ಣ ಹರಿಕಂತ್ರ ಅಂಕೋಲಾ, ಗಣಪತಿ ಪರಮೇಶ್ವರ ನಾಯ್ಕ, ರಾಮ ಬಂಗರ‍್ಯ ನಾಯ್ಕ, ಈರಾ ಗೌಡ ನೀರ್‌ಗಾನ್, ನಾಗವೇಣಿ ವಿ. ಗೌಡ, ಮಂಜುನಾಥ ನಾಗಾ ಜೋಗಿ, ನೇತ್ರಾವತಿ ಮರಿಯಾ ಗೌಡ ದೇವನಳ್ಳಿ ಉಪಸ್ಥಿತರಿದ್ದರು.