ಶಿರಾಡಿ ಘಾಟ್‌ನಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ; ವಾಹನ ಸಂಚಾರದಲ್ಲಿ ವ್ಯತ್ಯಯ

KannadaprabhaNewsNetwork |  
Published : Mar 14, 2024, 02:06 AM IST
11 | Kannada Prabha

ಸಾರಾಂಶ

ಮಂಗಳೂರಿನ ಎಂಆರ್‌ಪಿಎಲ್‌ನಿಂದ ಆಗಮಿಸಿದ ತಜ್ಞರ ತಂಡ ಅನಿಲ ಸೋರಿಕೆ ತಡೆಯೊಡ್ಡಿದ ಬಳಿಕ ಕ್ರೇನ್ ಬಳಸಿ ಪಲ್ಟಿಯಾಗಿದ್ದ ಟ್ಯಾಂಕರನ್ನು ಬದಿಗೆ ಸರಿಸಿ ಅಲ್ಲಿಂದ ಸ್ಥಳಾಂತರಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಉಪ್ಪಿನಂಗಡಿ : ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ಶಿರಾಡಿ ಘಾಟ್‌ನಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಗ್ಯಾಸ್ ಸೋರಿಕೆಯಿಂದಾಗಿ ಬುಧವಾರ ಮಧ್ಯಾಹ್ನದ ತನಕ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಸಕಲೇಶಪುರ ಠಾಣಾ ವ್ಯಾಪ್ತಿಯ ಶಿರಾಡಿ ಘಾಟ್‌ನ ಡಬಲ್ ಟರ್ನ್ ಬಳಿ ಚಾಲಕನ ಹತೋಟಿ ತಪ್ಪಿ ಪಲ್ಟಿಯಾಗಿದೆ. ಪಲ್ಟಿಯಾಗಿದ್ದ ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಬದಲಿ ರಸ್ತೆ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ದಳದ ವಾಹನವನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಮಂಗಳೂರಿನ ಎಂಆರ್‌ಪಿಎಲ್‌ನಿಂದ ಆಗಮಿಸಿದ ತಜ್ಞರ ತಂಡ ಅನಿಲ ಸೋರಿಕೆ ತಡೆಯೊಡ್ಡಿದ ಬಳಿಕ ಕ್ರೇನ್ ಬಳಸಿ ಪಲ್ಟಿಯಾಗಿದ್ದ ಟ್ಯಾಂಕರನ್ನು ಬದಿಗೆ ಸರಿಸಿ ಅಲ್ಲಿಂದ ಸ್ಥಳಾಂತರಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.---

ಪಾವಂಜೆ ದೇವಸ್ಥಾನ ಜಾತ್ರೆಯಲ್ಲಿ ಮೊಬೈಲ್ ಕಳವು: ಆರೋಪಿ ಸೆರೆ

ಮೂಲ್ಕಿ: ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಸಂದರ್ಭ ದೇವರ ಸೇವೆ ಮಾಡುವ ವ್ಯಕ್ತಿಯೊಬ್ಬರ ಮೊಬೈಲ್ ಕಳ್ಳತನ ಮಾಡಿದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಉತ್ತರ ಕರ್ನಾಟಕದ ಸಿಂಧನೂರು ನಿವಾಸಿ ಪಕ್ಷಿಕೆರೆಯಲ್ಲಿ ವಾಸ್ತವ್ಯವಿರುವ ಸುರೇಶ ಎಂದು ಗುರುತಿಸಲಾಗಿದೆ.

ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭ ಇಲಾಲ್ ಹಿಡಿಯುವ ಸಸಿಹಿತ್ಲು ಮೂಲದ ವ್ಯಕ್ತಿಯ ಸುಮಾರು ಹದಿನೈದು ಸಾವಿರ ರುಪಾಯಿ ಬೆಲೆ ಬಾಳುವ ಮೊಬೈಲ್‌ ಕಳವಾಗಿತ್ತು. ಆರೋಪಿಯು ಚಾಲಾಕಿತನದಿಂದ ಕಳ್ಳತನ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದರ ಆಧಾರದಲ್ಲಿ ಆರೋಪಿ ಸುರೇಶ್‌ನನ್ನು ಮೊಬೈಲ್ ಸಮೇತ ಸ್ಥಳೀಯರು ರೆಡ್ ಹ್ಯಾಂಡಾಗಿ ಹಿಡಿದು ಪೋಲಿಸರಿಗೆ ಒಪ್ಪಿಸಿದ್ದು ಆರೋಪಿಯಿಂದ ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ.-----ನೇಣು ಬಿಗಿದು ಯುವಕ ಆತ್ಮಹತ್ಯೆಬಂಟ್ವಾಳ: ಸರಪಾಡಿ ಗ್ರಾಮದ ಪೆರ್ಲ ದರ್ಖಾಸು ನಿವಾಸಿ ಯುವಕ ಮನೆಯ ಹಿಂಬದಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಪೆರ್ಲ ದರ್ಖಾಸು ನಿವಾಸಿ ವಿನೋದ್ ನಾಯ್ಕ್ (೩೩) ಮೃತರು. ಯುವಕ ಕೂಲಿ ಕೆಲಸ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತ ಯುವಕ ಅವಿವಾಹಿತನಾಗಿದ್ದು, ತಂದೆ- ತಾಯಿ, ಅಕ್ಕ ಹಾಗೂ ತಮ್ಮನನ್ನು ಅಗಲಿದ್ದಾನೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ