ರೈತರಿಗೆ ನಿಗದಿತ ಸಮಯಕ್ಕೆ ವಿದ್ಯುತ್ ಕೊಡಿ: ಶಾಸಕ ಎಚ್.ಡಿ.ರೇವಣ್ಣ ಆಗ್ರಹ

KannadaprabhaNewsNetwork |  
Published : Mar 16, 2024, 01:46 AM IST
ವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಶಾಸಕ ಎಚ್ ಡಿ ರೇವಣ್ಣ ಮಾತನಾಡಿದರು | Kannada Prabha

ಸಾರಾಂಶ

ಇನ್ನು ಮುಂದಾದರೂ ರೈತರಿಗೆ ನಿಗದಿತ ಸಮಯಕ್ಕೆ ವಿದ್ಯುತ್‌ ನೀಡಬೇಕು ಎಂದು ಶಾಸಕ ಎಚ್ ಡಿ ರೇವಣ್ಣ ಆಗ್ರಹಿಸಿದರು. ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡರ ಅಭಿವೃದ್ಧಿ ಕಾರ್ಯಗಳ ಪ್ರಶ್ನೆ ಕನ್ನಡಪ್ರಭ ವಾರ್ತೆ ಅರಸೀಕೆರೆ

ರೈತರು 18 ತಿಂಗಳಿಂದ ಸಂಕಷ್ಟದಲ್ಲಿದ್ದಾರೆ. 20,000 ಟಿಸಿಗಳಿಗಾಗಿ ರೈತರಿಂದ ಹಣ ಕಟ್ಟಿಸಿಕೊಂಡು ಈವರೆಗೆ ಈ ಸರ್ಕಾರಕ್ಕೆ ಟಿಸಿ ಕೊಡಲಾಗಿಲ್ಲ. ಇನ್ನು ಮುಂದಾದರೂ ರೈತರಿಗೆ ನಿಗದಿತ ಸಮಯಕ್ಕೆ ವಿದ್ಯುತ್‌ ನೀಡಬೇಕು ಎಂದು ಶಾಸಕ ಎಚ್ ಡಿ ರೇವಣ್ಣ ಆಗ್ರಹಿಸಿದರು.

ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ 25000 ಕೋಟಿ ರು. ಸಾಲ ಮನ್ನಾ ಮಾಡಿದ್ದರು. ರೈತರಿಗೆ ಯಾವ ಸಮಯದಲ್ಲಿ ವಿದ್ಯುತ್ ಅನ್ನು ಕೊಡುತ್ತೀರಿ ಎಂಬ ಮಾಹಿತಿಯನ್ನು ನೀಡಿ ನಿಗದಿತ ವೇಳೆಯಲ್ಲಿ ವಿದ್ಯುತ್ ನೀಡಿ. ಮಳೆ ಇಲ್ಲದೆ ಬರಗಾಲವಿದ್ದು ಕೊಳವೆ ಬಾವಿಗಳನ್ನೇ ಅವಲಂಬಿಸುವಂತಾಗಿದೆ. ನಾನು ಸಚಿವನಾಗಿದ್ದ ವೇಳೆ ಅರಸೀಕೆರೆಗೆ ಹೋಬಳಿ ಕೇಂದ್ರಗಳಿಗೆ ಬೆಸ್ಕಾಂ ಉಪ ವಿಭಾಗವನ್ನು ಮಂಜೂರು ಮಾಡಿಸಿದೆ. ಅರಸೀಕೆರೆ, ಬಾಣಾವರಕ್ಕೆ ಪ್ರಥಮ ದರ್ಜೆ ಕಾಲೇಜನ್ನು ಸಹ ಒದಗಿಸಿ ಕೊಟ್ಟಿದ್ದೇನೆ’ ಎಂದು ಪರೋಕ್ಷವಾಗಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಕಾರ್ಯ ಪ್ರಶ್ನಿಸಿದರು.

‘ಜಾವಗಲ್ ಕಣಕಟ್ಟೆ ರಸ್ತೆಗೆ 1500 ಕೋಟಿ ರು. ವೆಚ್ಚ ಮಂಜೂರು ಮಾಡಿಸಿದ್ದು ಯಾರು? 530 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಕೇಂದ್ರ ಸರ್ಕಾರದ್ದಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ಗ್ರಾಮದ ಮನೆ ಮನೆಗೆ ಒದಗಿಸುವ ಮಹತ್ವಾಕಾಂಕ್ಷೆ ಯೋಜನೆ ಅನುಷ್ಠಾನಕ್ಕೆ ತಂದಿದ್ದು ಯಾರು? ಈಶ್ವರಪ್ಪ ಲೋಕೋಪಯೋಗಿ ಸಚಿವರಾಗಿ ಯೋಜನೆಯನ್ನು ನಗರದ ಹೋಲ್ಡ್ ಮಿಡ್ಲ್ ಸ್ಕೂಲ್ ಮೈದಾನದಲ್ಲಿ ಉದ್ಘಾಟಿಸಿದ್ದಾರೆ. ನಂತರ ಕಾಂಗ್ರೆಸ್‌ನವರು ಕಮಿಷನ್‌ ಅಸೆಗೆ ಪುನರ್ ಟೆಂಡರ್‌ ಮಾಡಿದ್ದಾರೆ’ ಎಂದು ಛೇಡಿಸಿದರು.

ಸುಳ್ಳು ಹೇಳಿ ತೋಟದಲ್ಲಿ ಮಲಗಿ ಜನರನ್ನು ಮೋಸ ಮಾಡಿದಂತಲ್ಲ, ಅಂದು ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿದ್ದರು. ಇವರಿಂದ ಪರಿಹಾರ ಕೊಡಿಸಲು ಸಾಧ್ಯವಾಗಲಿಲ್ಲ. ಸುಳಿ ಬಿದ್ದು ತೆಂಗು ಬೆಳೆ ನಾಶವಾಗಿ ಸಂಕಷ್ಟವನ್ನು ಎದುರಿಸುತ್ತಿದ್ದ ಬೆಳೆಗಾರರಿಗೆ ಪರಿಹಾರ ನೀಡಲು ಕುಮಾರಸ್ವಾಮಿಯ ಬರಬೇಕಾಯಿತು ಎಂದು ಹೇಳಿದರು

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸಾವಿರಾರು ಕೋಟಿ ರು. ಅನುದಾನವನ್ನು ಅರಸೀಕೆರೆ ಕ್ಷೇತ್ರಕ್ಕೆ ತಂದಿದ್ದೀನಿ ಎಂದು ಪುಸ್ತಕವನ್ನು ಮುದ್ರಿಸಿ ಹಂಚಿದ್ದಾರೆ. ಆಗ ದೇವೇಗೌಡ, ರೇವಣ್ಣ ಎನ್ನುತ್ತಿದ್ದ ಇವರು ಈಗ ಸಿದ್ದರಾಮಯ್ಯನವರ ಕಾಲದಲ್ಲಿ ಮಾತ್ರ ಅಭಿವೃದ್ಧಿಯಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ನಗರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಗಿರೀಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್‌, ಬಿ.ಜಿ.ನಿರಂಜನ್, ಅಶೋಕ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಣಾವರ ಅಶೋಕ್, ನಗರಸಭಾ ಸದಸ್ಯ ಈಶಣ್ಣ, ಜೆಡಿಎಸ್ ಮುಖಂಡರಾದ ಹರ್ಷವರ್ಧನ್, ಕುಡಕುಂದಿ ಕುಮಾರ್‌, ಬಸವಲಿಂಗಪ್ಪ, ರಮೇಶ್, ಬಿಜೆಪಿ ಮುಖಂಡರಾದ ಲಾಳನಕೆರೆ ಯೋಗೀಶ್‌, ಪ್ರವೀಣ್, ಗಣೇಶ್ ಇದ್ದರು. ಅರಸೀಕೆರೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಶಾಸಕ ಎಚ್.ಡಿ.ರೇವಣ್ಣ ಮಾತನಾಡಿದರು

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ