ಸಮಾಜದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಿ: ಮಾಜಿ ಶಾಸಕ

KannadaprabhaNewsNetwork | Published : Jul 10, 2024 12:34 AM

ಸಾರಾಂಶ

ಜೇವರ್ಗಿ ಪಟ್ಟಣದ ಚರಚಕ್ರವರ್ತಿ ಷಣ್ಮುಖ ಶಿವಯೋಗಿಗಳ ಮಠದ ಆವರಣದಲ್ಲಿ ಹಮ್ಮಿಕೊಂಡ ಅಖಿಲ ಭಾರತ ವೀರಶೈವ ಮಹಾಸಭೆ ತಾಲೂಕು ಘಟಕದ ಪದಾಧಿಕಾರಿಗಳನ್ನು ಮಂಗಳವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಜೇವರ್ಗಿ

ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಮಾಜದ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ ಸಂಘಟನೆಗೆ ಆದ್ಯತೆ ನೀಡಬೇಕು. ಸಮಾಜದ ಒಳ ಪಂಗಡದ ಮುಖಂಡರು ತನು, ಮನ, ಧನ ಸಹಕಾರ ನೀಡಿ ಸಮಾಜದ ಏಳ್ಗೆಗೆ ಶ್ರಮಿಸಬೇಕೆಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು.

ಪಟ್ಟಣದ ಚರಚಕ್ರವರ್ತಿ ಷಣ್ಮುಖ ಶಿವಯೋಗಿಗಳ ಮಠದ ಆವರಣದಲ್ಲಿ ಹಮ್ಮಿಕೊಂಡ ಅಖಿಲ ಭಾರತ ವೀರಶೈವ ಮಹಾಸಭೆ ತಾಲೂಕು ಘಟಕದ ಪದಾಧಿಕಾರಿಗಳನ್ನು ಮಂಗಳವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ, ಸಂಘಟಿತ ಹೋರಾಟದಿಂದ ಸಮಾಜದ ಅಭಿವೃದ್ಧಿ ಸಾಧ್ಯ ಆನಿಟ್ಟಿನಲ್ಲಿ ಸಮಾಜದ ಬಾಂಧವರು ಹಿರಿಯರ ಸಲಹೆ ಸೂಚನೆ ಮೇರೆಗೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು. ಜೇವರ್ಗಿ ಪಟ್ಟಣದಲ್ಲಿ ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ ವಾಗಿದೆ ಎಂದರು.

ಮಹಾಸಭೆಯ ಮಾಜಿ ತಾಲೂಕು ಅಧ್ಯಕ್ಷ ರಾಜಶೇಖರ ಸೀರಿ ಮಾತನಾಡಿ, ನೂತನ ಅಧ್ಯಕ್ಷ ಸಿದ್ದು ಸಾಹು ಅಂಗಡಿ ಅವರ ಕೈಜೋಡಿಸಿ ತಾಲೂಕಿನಲ್ಲಿ ವೀರಶೈವ ಸಮಾಜದ ಹಾಸ್ಟೆಲ್ ನಿರ್ಮಾಣ ಮಾಡಿ ಸಮಾಜದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಸಭೆಯಲ್ಲಿ ಶರಣಬಸವ ಕಲ್ಲಾ, ಷಣ್ಮುಖಪ್ಪ ಸಾಹು ಗೋಗಿ, ಸಂಗಣ್ಣಗೌಡ ಗುಳ್ಯಾಳ, ಮಹಾಂತ ಸಾಹು ಹರವಾಳ, ಸಕ್ರೆಪ್ಪಗೌಡ ಹರನೂರ, ಬಸವರಾಜ ಸಾಸಾಬಾಳ, ಈರಯ್ಯ ಘಂಟಿಮಠ, ಧೂಳೇಶ ಪಾಟೀಲ್, ಶರಣಬಸವ ಅವರಾದ, ಶಿವಾನಂದ ಮುಧೋಳ, ಗುಂಡಣ್ಣ ಜಾನಕಿ, ಶಿವಕುಮಾರ ಕಲ್ಲಾ, ರವಿ ಕೋಳಕೂರ, ಚನ್ನು ತಾಳಿಕೋಟಿ, ವಿಶ್ವನಾಥ ಇಮ್ಮಣ್ಣಿ, ಸಂಗನಗೌಡ ಅವರಾದ, ಸಮರ್ಥ ದೇವರಮನಿ, ಸಂಗನಗೌಡ ಮಾಲಿಪಾಟೀಲ್ ಆಂದೋಲಾ, ಭೀಮಾಶಂಕರ ಕಟ್ಟಿಸಂಗಾವಿ, ಸುರೇಶ ದೇಸಾಯಿ, ಮಹಾಲಿಂಗಯ್ಯ ಇತರರಿದ್ದರು.

ನೂತನ ಪದಾಧಿಕಾರಿಗಳು: ಅಖಿಲ ಭಾರತ ವೀರಶೈವ ಮಹಾಸಭೆಯ ತಾಲೂಕು ಘಟಕದ ನೂತನ ಅಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ೭ ಜನ ಮಹಿಳಾ ಸದಸ್ಯರು ಮತ್ತು ೧೪ ಜನ ಪುರುಷ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.

ಸಿದ್ದು ಸಾಹು ಅಂಗಡಿ ಅವರನ್ನು ತಾಲೂಕು ಘಟಕದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ತಮ್ಮಣ್ಣಗೌಡ ಪಾಟೀಲ್, ಗುರುಲಿಂಗಯ್ಯ ಯನಗುಂಟಿ, ವಿಜಯಕುಮಾರ ಕಲ್ಲಾ, ಮಲ್ಲಿಕಾರ್ಜುನ ಬಿರಾದಾರ, ರೇವಣಸಿದ್ದಪ್ಪ ಅಂಕಲಕೋಟಿ, ರಾವುತಪ್ಪ ಕೆಲ್ಲೂರ, ಆನಂದ ಯತ್ನಾಳ, ಪ್ರಶಾಂತ ಬಿಜಾಪುರ, ಲಿಂಗರಾಜ ಪಟ್ಟಣಶೆಟ್ಟಿ, ಗೌಡಪ್ಪಗೌಡ ಅಂಬರಖೇಡ, ಸಿದ್ದಣ್ಣ ಸಿಕೇದ, ಬಾಪುಗೌಡ ಕಲ್ಲಹಂಗರಗಾ, ಹಣಮಂತರಾಯ ಹಡಪದ, ವಿಜಯಲಕ್ಷ್ಮೀ ಶಿವಣಕರ್, ರಾಜಶ್ರೀ ಗುಗ್ಗರಿ, ಸಂಗೀತಾ ಘಂಟಿಮಠ, ಸುವರ್ಣ ರಾಂಪೂರ, ಸಿದ್ದಮ್ಮ ಪಾಟೀಲ್, ಬಸಮ್ಮ ಹೂಗಾರ, ರೇಣುಕಾ ಪಡಶೆಟ್ಟಿ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಶರಣಪ್ಪ ಕಮತಗಿ. ಮತ್ತು ರಾಜಶೇಖರ ಅಂಗಡಿ ತಿಳಿಸಿದ್ದಾರೆ.

Share this article