ಭತ್ತ, ಕಬ್ಬಿಗೆ ₹3500, ಮೆಕ್ಕೆಗೆ ₹3 ಸಾವಿರ ದರ ನೀಡಿ

KannadaprabhaNewsNetwork |  
Published : Nov 08, 2025, 01:15 AM IST
7ಕೆಡಿವಿಜಿ6-ದಾವಣಗರೆ ಡಿಸಿ ಕಚೇರಿ ಎದುರು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹರಿಹರ, ದಾವಣಗೆರೆ ತಾಲೂಕು ಘಟಕಗಳ ಮುಖಂಡರು, ರೈತರು ಪ್ರತಿಭಟಿಸುತ್ತಿರುವುದು. | Kannada Prabha

ಸಾರಾಂಶ

ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ₹3500, ಟನ್‌ ಕಬ್ಬಿಗೆ ₹3500, ಮೆಕ್ಕೆಜೋಳಕ್ಕೆ ₹3 ಸಾವಿರ ದರ ನಿಗದಿಪಡಿಸಿ, ತಾಲೂಕು-ಜಿಲ್ಲಾ ಕೇಂದ್ರದಲ್ಲಿ ಖರೀದಿ ಕೇಂದ್ರ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ದಾವಣಗೆರೆ- ಹರಿಹರ ತಾಲೂಕು ಘಟಕಗಳಿಂದ ನಗರದಲ್ಲಿ ಶುಕ್ರವಾರ ಪ್ರತಿಭಟಿಸಲಾಯಿತು.

- ಪ್ರತಿಭಟನೆಯಲ್ಲಿ ಸರ್ಕಾರಕ್ಕೆ ರೈತ ಸಂಘಟನೆಗಳ ಒತ್ತಾಯ

- ತಾಲೂಕು, ಜಿಲ್ಲಾ ಕೇಂದ್ರದಲ್ಲಿ ಖರೀದಿ ಕೇಂದ್ರ ಸ್ಥಾಪಿಸಲು ಆಗ್ರಹ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ₹3500, ಟನ್‌ ಕಬ್ಬಿಗೆ ₹3500, ಮೆಕ್ಕೆಜೋಳಕ್ಕೆ ₹3 ಸಾವಿರ ದರ ನಿಗದಿಪಡಿಸಿ, ತಾಲೂಕು-ಜಿಲ್ಲಾ ಕೇಂದ್ರದಲ್ಲಿ ಖರೀದಿ ಕೇಂದ್ರ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ದಾವಣಗೆರೆ- ಹರಿಹರ ತಾಲೂಕು ಘಟಕಗಳಿಂದ ನಗರದಲ್ಲಿ ಶುಕ್ರವಾರ ಪ್ರತಿಭಟಿಸಲಾಯಿತು.

ಹರಿಹರ ತಾಲೂಕು ಮಲೆಬೆನ್ನೂರು ಪಟ್ಟಣದ ನೀರಾವರಿ ಇಲಾಖೆಯಿಂದ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್ ರ್ಯಾಲಿಯಲ್ಲಿ ಆಗಮಿಸಿದ್ದ ರೈತರು ದಾವಣಗೆರಯೆ ಜಿಲ್ಲಾಧಿಕಾರಿ ಕಚೇರಿ ಎದುರು ಘೋಷಣೆ ಕೂಗಿ, ಜಿಲ್ಲಾಡಳಿತ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಪ್ರತಿಭಟನೆಯಲ್ಲಿ ಸಂಘದ ಮುಖಂಡರು ಮಾತನಾಡಿ, ಸರ್ಕಾರವು ಪ್ರತಿ ಕ್ವಿಂ. ಭತ್ತಕ್ಕೆ ₹3500, ಕಬ್ಬಿಗೆ 3500 ರು., ಮೆಕ್ಕೆಜೋಳಕ್ಕೆ 3 ಸಾವಿರ ರು. ಬೆಂಬಲ ಬೆಲೆ ಘೋಷಣೆ ಮಾಡಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ರೈತರಿಗೆ ಆಗುತ್ತಿರುವ ಶೋಷಣೆ, ಅನ್ಯಾಯ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ಬ್ರಿಟಿಷರ ಕಾಲದ ಕಾನೂನುಗಳೇ ಇಂದಿಗೂ ಜಾರಿಯಲ್ಲಿವೆ. ಭತ್ತ, ಮೆಕ್ಕೆಜೋಳ, ರಾಗಿ, ಜೋಳ, ಹೆಸರು, ಉದ್ದು, ಕಡಲೆ ಇತರೆ ವ್ಯಾಪಾರಸ್ಥರು ಇಂದಿಗೂ ಸೂಟ್ ಹೆಸರಿನಲ್ಲಿ ತೆಗೆದುಕೊಳ್ಳುವುದನ್ನು ಮೊದಲು ನಿಲ್ಲಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಬ್ಯಾಂಕ್‌ಗಳಿಂದ ರೈತರಿಗೆ ಆಗುತ್ತಿರುವ ಕಿರುಕುಳ ನಿಲ್ಲಬೇಕು. ರೈತರ ವಿಚಾರದಲ್ಲಿ ಕಾಳಜಿ, ಬದ್ಧತೆಯನ್ನು ಸರ್ಕಾರಗಳು ತೋರಲಿ ಎಂದು ತಾಕೀತು ಮಾಡಿದರು.

ಸಂಘದ ಮುಖಂಡರಾದ ಎಚ್.ಬಿ.ಬಸವರಾಜಪ್ಪ, ಹಾಳೂರು ನಾಗರಾಜಪ್ಪ, ಇ.ನಿಂಗಪ್ಪ, ಜಿ.ರಂಗನಗೌಡ ಹಾಲಿವಾಣ, ತಿಪ್ಪೇಸ್ವಾಮಿ, ಪಿ.ಶಂಭುಲಿಂಗಪ್ಪ, ಕುಂಬಳೂರು ಅಂಜಿನಪ್ಪ, ಜಿಗಳಿ ಕೆ.ಎಚ್.ಮಾಲತೇಶ, ಹಾಲಿವಾಣ ಕೆ.ಪಿ.ವಿಜಯ್, ಎಚ್.ವೀರಪ್ಪ, ಡಿ.ರೇವಣಸಿದ್ದಪ್ಪ, ಕೆ.ವಿ.ರುದ್ರಮುನಿ ಇತರರು ಇದ್ದರು.

- - -

-7ಕೆಡಿವಿಜಿ6:

ದಾವಣಗರೆ ಡಿಸಿ ಕಚೇರಿ ಎದುರು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹರಿಹರ, ದಾವಣಗೆರೆ ತಾಲೂಕು ಘಟಕಗಳ ಮುಖಂಡರು, ರೈತರು ಪ್ರತಿಭಟಿಸುತ್ತಿರುವುದು.

PREV

Recommended Stories

ಬ್ರಾಹ್ಮಣ ಸಮುದಾಯಕ್ಕೆ ಸೌಲಭ್ಯ ನೀಡಲು ಬದ್ಧ : ಸಚಿವ ದಿನೇಶ್‌ ಗುಂಡೂರಾವ್‌
ಬೆಂಗಳೂರು ನಗರದ 6 ಆರ್‌ಟಿಒ ಕಚೇರಿ ಮೇಲೆ ದಾಳಿ: ಹಲವು ಅಕ್ರಮ ಪತ್ತೆ