ಕನ್ನಡಪ್ರಭ ವಾರ್ತೆ, ತರೀಕೆರೆ
ಸೋಮವಾರ ಪಟ್ಟಣದ ಅಂಚೆ ಪ್ರತಿಷ್ಠಾನದಿಂದ ಮೂರನೇ ವರ್ಷದ ವಾರ್ಷಿಕೋತ್ಸವ, ಶ್ರೀ ದತ್ತ ಜಯಂತಿ, ಶ್ರೀ ದತ್ತ ಹೋಮ, ಭಜನೆ ಮತ್ತು ಪೂರ್ಣಾಹುತಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀ ದತ್ತ ಗುರುಗಳು ವಿಶ್ವಗುರು, ಶ್ರೀ ಸದಾಶಿವನೇ ಆಗಿದ್ದಾರೆ, ಶ್ರೀ ಕೃಷ್ಣ ದೇವರಿಗೆ ಮಾರ್ಗಶಿರ ಮಾಸ ಬಹು ಇಷ್ಟವಾದ ಮಾಸವಾಗಿದ್ದು, ಚಂದ್ರ ಮೃಗಶಿರಾ ನಕ್ಷತ್ರದ
ಜೊತೆ ಸೇರುತ್ತಾನೆ ಹಾಗಾಗಿ ಮಾರ್ಗಶಿರ ಮಾಸ ತುಂಬಾ ಶ್ರೇಷ್ಠ. ಶ್ರೀ ದತ್ತಾತ್ರೇಯರು ಜನಿಸಿದ್ದು ಮಾರ್ಗಶಿರ ಮಾಸದ ಪೂರ್ಣಿಮ ದಿವಸವೇ ಅಗಿದ್ದು ಶ್ರೀ ದತ್ತ ಜಯಂತಿ ಅಚರಣೆ ಅರ್ಥಪೂರ್ಣವಾಗಿದೆ ಎಂದು ಹೇಳಿದರು.ಭಗವಂತನು ಸ್ವಯಂ ಪ್ರಕಾಶಿತನಾಗಿದ್ದು ಅತ್ರಿ ಮಹರ್ಷಿಗಳ ಪತ್ನಿ ಅನುಸೂಯ ಅವರ ಅಪೇಕ್ಷೆಯಂತೆ ಅವರಲ್ಲಿ ಜನ್ಮ ತಾಳುತ್ತಾನೆ, ಭಕ್ತರ ಮೇಲೆ ಆಪಾರ ಅನುಕಂಪ ಇದ್ದು ಅವರ ಸರಳವಾದ ಧರ್ಮಾನು ಷ್ಠಾನವನ್ನೇ ಒಪ್ಪಿಕೊಂಡು ಭಕ್ತರಿಗೆ ಆಶೀರ್ವದಿಸುತ್ತಾರೆ. ಭಕ್ತರ ಉದ್ದಾರಕ್ಕಾಗಿ ಸದ್ಗುರು ರೂಪದಲ್ಲಿ ಎಲ್ಲ ಕಾಲದಲ್ಲಿಯೂ ಭಕ್ತರನ್ನು ಆಶೀರ್ವದಿಸುತ್ತಾರೆ. ನಾವು ಗುರುವಿನಲ್ಲಿ ಸಂಪೂರ್ಣವಾಗಿ ನಂಬಿಕೆ ಹೊಂದಿದ್ದು ಶರಣಾದಾಗ ಮಾತ್ರ ಸೌಖ್ಯ ಮತ್ತು ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು.
ಅಂಚೆ ಪ್ರತಿಷ್ಠಾನದ ಅಧ್ಯಕ್ಷ ಎ.ವಿ.ನಾಗಭೂಷಣ್ ಮಾತನಾಡಿ ಸಮಾಜದ ಎಲ್ಲರನ್ನೂ ಒಳಗೊಂಡಂತೆ ಅಂಚೆ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ, ಸಮಾಜ ಸೇವೆಯೇ ಪ್ಪತಿಷ್ಠಾನದ ಉದ್ದೇಶ. ಹಿರಿಯ ಸಮಾಜ ಸೇವಕರನ್ನು ಗೌರವಿಸಲಾಗುತ್ತಿದೆ. 16 ವರ್ಷಗಳಿಂದ ಪ್ರತಿಭಾ ಪುರಸ್ಕಾರ ಸಮಾರಂಭ ಪ್ರತಿಷ್ಟಾನದ ದಿಂದ ನಡೆಸಲಾಗುತ್ತಿದೆ, ಸಹಕರಿಸುತ್ತಿರುವ ಸರ್ವರಿಗೂ ಕೃತಜ್ಞತೆ ತಿಳಿಸಿದರು.
ಅಂಚೆ ಪ್ರತಿಷ್ಠಾನದಿಂದ ನಿವೃತ್ತ ಪ್ರಾಚಾರ್ಯ ಕೆ.ವಿ.ಚಂದ್ರಮೌಳಿ ಮತ್ತು ಪುರಸಭೆ ಸದಸ್ಯ ಟಿ.ಜಿ.ಆಶೋಕ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ತರೀಕೆರೆಯಲ್ಲಿ ಅಂಚೆ ಪ್ರತಿಷ್ಠಾನ ವತಿಯಿಂದ ಏರ್ಪಾಡಾಗಿದ್ದ ಪ್ರತಿಷ್ಠಾನದ ಮೂರನೇ ವರ್ಷದ ವಾರ್ಷಿಕೋತ್ಸವ, ಶ್ರೀ ದತ್ತ ಜಯಂತಿ ಕಾರ್ಯಕ್ರಮದ ಉದ್ಗಾಟನೆಯನ್ನುಸಖರಾಯಪಟ್ಟಣದ ನಿವೃತ್ತ ಪ್ರಾಚಾರ್ಯರಾದ ಕೆ.ವಿ.ಚಂದ್ರಮೌಳಿ ನೆರವೇರಿಸಿದರು. ನಿವೃತ್ತ ಕನ್ನಡ ಉಪನ್ಯಾಸಕ ಎ.ವಿ.ಸೂರ್ಯ ನಾರಾಯಣ ಸ್ವಾಮಿ, ಪ್ರತಿಷ್ಠಾನದ ಅಧ್ಯಕ್ಷ ಎ.ವಿ.ನಾಗಭೂಷಣ್, ಪುರಸಭೆ ಸದಸ್ಯ ಟಿ.ಜಿ.ಅಶೋಕ ಕುಮಾರ್, ಅಜ್ಜಂಪುರ ರೇವಣ್ಣ ಇದ್ದಾರೆ.