ಆಧುನಿಕ ಕೃಷಿ ಪದ್ಧತಿಯಿಂದ ಉತ್ತಮ ಇಳುವರಿ: ಡಾ. ಎಸ್.ಎ. ಗದ್ದನಕೇರಿ

KannadaprabhaNewsNetwork |  
Published : Jun 12, 2025, 06:11 AM ISTUpdated : Jun 12, 2025, 06:12 AM IST
ರಾಣಿಬೆನ್ನೂರು ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ರಟ್ಟೀಹಳ್ಳಿ ತಾಲೂಕಿನ ಶಿರಗುಂಬಿ ಗ್ರಾಮದಲ್ಲಿ ಮುಂಗಾರು ಹಂಗಾಮಿನ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಜರುಗಿತು. | Kannada Prabha

ಸಾರಾಂಶ

ವಿವಿಧ ಬೆಳೆಗಳಲ್ಲಿ ಬರುವ ಕೀಟಗಳ ಬಾಧೆ, ಸಮಗ್ರ ಕೀಟ ನಿರ್ವಹಣಾ ಕ್ರಮಗಳು ಹಾಗೂ ಸಾವಯವ ಪದ್ಧತಿಯಲ್ಲಿ ಸಸ್ಯಮೂಲ ಕೀಟನಾಶಕಗಳ ಬಳಕೆ ಬಗ್ಗೆ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಎ.ಎಚ್. ಬಿರಾದಾರ ರೈತರಿಗೆ ಮಾಹಿತಿ ನೀಡಿದರು.

ರಾಣಿಬೆನ್ನೂರು: ಆಧುನಿಕ ಕೃಷಿ ಅಳವಡಿಕೆಯಿಂದ ರೈತರು ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ. ಎಸ್.ಎ. ಗದ್ದನಕೇರಿ ತಿಳಿಸಿದರು.ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಕೃಷಿ, ತೋಟಗಾರಿಕೆ, ಪಶುಪಾಲನಾ ಇಲಾಖೆಗಹಳ ಆಶ್ರಯದಲ್ಲಿ ರಟ್ಟೀಹಳ್ಳಿ ತಾಲೂಕಿನ ಶಿರಗುಂಬಿ, ಗುಂಡಗಟ್ಟಿ, ಕೋಡಿಹಳ್ಳಿ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಮುಂಗಾರು ಹಂಗಾಮಿನ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಲ್ಲಿ ಮಾತನಾಡಿದರು.

ನೈಸರ್ಗಿಕ ಕೃಷಿ, ಕೃಷಿ ಯಂತ್ರೋಪಕರಣಗಳ ಬಳಕೆ ಹಾಗೂ ವಿವಿಧ ಬೆಳೆಗಳ ವೈವಿಧ್ಯತೆ ಕುರಿತು ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು. ವಿವಿಧ ಬೆಳೆಗಳಲ್ಲಿ ಬರುವ ಕೀಟಗಳ ಬಾಧೆ, ಸಮಗ್ರ ಕೀಟ ನಿರ್ವಹಣಾ ಕ್ರಮಗಳು ಹಾಗೂ ಸಾವಯವ ಪದ್ಧತಿಯಲ್ಲಿ ಸಸ್ಯಮೂಲ ಕೀಟನಾಶಕಗಳ ಬಳಕೆ ಬಗ್ಗೆ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಎ.ಎಚ್. ಬಿರಾದಾರ ರೈತರಿಗೆ ಮಾಹಿತಿ ನೀಡಿದರು. ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ. ಸಂತೋಷ ಎಚ್.ಎಂ., ಸಂರಕ್ಷಣೆಯ ವಿಷಯತಜ್ಞೆ ಡಾ. ಬಸಮ್ಮ ಹಾದಿಮನಿ, ಐಸಿಎಆರ್ ವಿಜ್ಞಾನಿ ಡಾ. ಮಣಿಮರನ್, ಕೃಷಿ ಇಲಾಖೆ ಅಧಿಕಾರಿ ಜಿ.ಎಂ. ಬತ್ತಿಕೊಪ್ಪದ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಗೀತಾ ಗೌಡರ, ಉಪಾಧ್ಯಕ್ಷ ಸುಧಾಮಣ್ಣ ಮಂಡಣ್ಣನವರ, ವಿವಿಧ ಗ್ರಾಮಗಳ ರೈತ/ರೈತ ಮಹಿಳೆಯರು ಉಪಸ್ಥಿತರಿದ್ದರು.ಪರಿಸರ ಹಾನಿಯಿಂದ ಮನುಕುಲಕ್ಕೆ ಧಕ್ಕೆ

ಹಾನಗಲ್ಲ: ಪರಿಸರಕ್ಕೆ ಧಕ್ಕೆ ಮಾಡುವ ಮನುಷ್ಯನಿಗೆ ಇದು ಮಾನವಕುಲದ ಬೆಳವಣಿಗೆಗೆ ಧಕ್ಕೆ ಎಂಬ ಅರಿವು ಮೂಡಿದರೆ ಮಾತ್ರ ಬದಲಾವಣೆ ಸಾಧ್ಯ. ಕಳೆದ ೪೪ ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇದಕ್ಕಾಗಿ ಜನಜಾಗೃತಿ ಮೂಡಿಸುತ್ತಿದೆ ಎಂದು ಸಂಸ್ಥೆಯ ತಾಲೂಕು ಕೃಷಿ ಮೇಲ್ವಿಚಾರಕ ಮಹಾಂತೇಶ ಹರ್ಕುಣಿ ತಿಳಿಸಿದರು.

ತಾಲೂಕಿನ ಹೆಜ್ಜಿಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಆಯೋಜಿಸಿದ್ದ ಪರಿಸರ ದಿನಾಚರಣೆ ಹಾಗೂ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಇಡೀ ರಾಜ್ಯದಲ್ಲಿ ಕೆರೆ ಹೂಳೆತ್ತುವುದು, ಕೃಷಿ ಅಭಿವೃದ್ಧಿಪಡಿಸುವುದು, ಪರಿಸರ ಸಂರಕ್ಷಿಸುವುದು, ಮಂದಿರಗಳ ಜೀರ್ಣೋದ್ಧಾರವೂ ಸೇರಿದಂತೆ ಸಮಾಜಮುಖಿ ಕಾರ್ಯದಲ್ಲಿ ಮುಂದಿದೆ. ಸರ್ಕಾರದ ಜತೆಗೆ ಸಂಸ್ಥೆಯೂ ಒಂದು ಭಾಗವಾಗಿ ಜನಹಿತಕ್ಕೆ ಮುಂದಾಗಿದೆ ಎಂದರು.ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಜಯವಂತಪ್ಪ ಬೆಳಗಲ, ಕಾರ್ಯದರ್ಶಿ ನೀಲಪ್ಪ ತಿಳವಳ್ಳಿ, ಸಾಹಿತಿ ಮಾರುತಿ ಶಿಡ್ಲಾಪೂರ ಗ್ರಾಪಂ ಸದಸ್ಯ ಜಗದೀಶ ಹಿರೇಕಣಗಿ, ಅಣ್ಣಪ್ಪ ಸಣ್ಣಮನಿ, ಸುರೇಶ ಮಲಗುಂದ, ನಿಂಗಪ್ಪ ಹಳೆಕೋಟಿ, ಒಕ್ಕೂಟದ ಅಧ್ಯಕ್ಷೆ ಸುನಂದಾ ಹಳೆಕೋಟಿ, ಮಮತಾ ಕಾರಕೂನ, ರಾಧಾ ಸಾಬರದ, ಕನ್ನಪ್ಪ ಬಂಕಾಪುರ, ಕೇತೇಶ ಹಿರೇಕಣಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಸಸಿ ನೆಡುವುದು: ಕಾರ್ಯಕ್ರಮದ ನಂತರ ಗ್ರಾಮದ ಬಸವೇಶ್ವರ ದೇವಸ್ಥಾನದ ಸುತ್ತ ವಿವಿಧ ಹಣ್ಣಿನ ಗಿಡಗಳನ್ನು ನೆಡುವುದರ ಮೂಲಕ ಧರ್ಮಸ್ಥಳ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಸಸಿಗಳನ್ನು ಕಾಪಾಡುವ ಜವಾಬ್ದಾರಿ ಪ್ರಕಟಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ