ಅಭಿವೃದ್ಧಿಯತ್ತ ಸಾಗುತ್ತಿದೆ ಕೊರಟಗೆರೆಯ ಗೊರವನಹಳ್ಳಿ ಮಹಾಲಕ್ಷ್ಮೀ ಕ್ಷೇತ್ರ

KannadaprabhaNewsNetwork | Published : Nov 29, 2024 1:00 AM

ಸಾರಾಂಶ

ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ಸಿರಿದೇವಿಗೆ ಕಾರ್ತಿಕ ಮಾಸದ ಕಡೆಯ ಶುಕ್ರವಾರ ಬ್ರಹ್ಮರಥೋತ್ಸವ ಮತ್ತು ಲಕ್ಷ ದೀಪೋತ್ಸವದ ಕಾರ್ಯಕ್ರಮಕ್ಕೆ ನಡೆಯಲಿದೆ.

ಇಂದು ಶ್ರೀ ಮಹಾಲಕ್ಷ್ಮೀ ಸಿರಿದೇವಿಗೆ ಬ್ರಹ್ಮರಥೋತ್ಸವ, ಲಕ್ಷ ದೀಪೋತ್ಸವ । ಪ್ರವಾಸಿಗರ ಆಕರ್ಷಣೆ ತಾಣ

ಕನ್ನಡಪ್ರಭ ವಾರ್ತೆ ಕೊರಟಗೆರೆತಾಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ಸಿರಿದೇವಿಗೆ ಕಾರ್ತಿಕ ಮಾಸದ ಕಡೆಯ ಶುಕ್ರವಾರ ಬ್ರಹ್ಮರಥೋತ್ಸವ ಮತ್ತು ಲಕ್ಷ ದೀಪೋತ್ಸವದ ಕಾರ್ಯಕ್ರಮಕ್ಕೆ ನಡೆಯಲಿದೆ.ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ನೇತೃತ್ವದಲ್ಲಿ ದೇವಾಲಯದ ಸಿಬ್ಬಂದಿ, ಪೊಲೀಸ್ ಇಲಾಖೆ ಮತ್ತು ಗ್ರಾಪಂಯ ಸಹಕಾರದಿಂದ ಭಕ್ತರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಮಹಾಲಕ್ಷ್ಮೀ ದೇವಾಲಯದ ಬಲಭಾಗದಲ್ಲಿ ತೀತಾ ಜಲಾಶಯ ಮತ್ತು ಶ್ರೀಲಕ್ಷ್ಮೀ ಮೂಡಿಬಂದ ಅಬ್ಬಯ್ಯನ ಕೆರೆ, ಎಡಭಾಗದಲ್ಲಿ ಕಮಲಮ್ಮ ಅಜ್ಜಿಯ ದಿವ್ಯಾ ಬೃಂದಾವನ. ದೇವಿಯ ಎಡಭಾಗದಲ್ಲಿ ಮಂಚಾಲ ನಾಗಪ್ಪ, ಈಗ ಹುತ್ತ ಬೆಳೆದಿದೆ. ಹಿಂಭಾಗದಲ್ಲಿ ಆಧಿಶಕ್ತಿ ಹಾಗೂ ದಕ್ಷಿಣದಲ್ಲಿ ಒಣಿನಾಗನ ಶಿಲೆ ಮತ್ತು ದೇವಿಯ ಕಮಲ ಪಾದವಿದೆ. ಜಲಾಶಯದ ಕೆಳಗಿನ ಹುಣಸೆ ಮರದಲ್ಲಿ ಗಣಪತಿಯ ಶೀಲೆಯು ಪ್ರವಾಸಿಗರಿಗೆ ಕಾಣುತ್ತದೆ.ಪ್ರವಾಸಿಗರ ಸ್ವರ್ಗ ತೀತಾ ಜಲಾಶಯ:ತೀತಾ ಜಲಾಶಯ ಕಳೆದ ಎರಡು ತಿಂಗಳಿಂದ ತುಂಬಿ ಹರಿಯುತ್ತಿದೆ. ದೇವರಾಯನದುರ್ಗದ ತಪ್ಪಲಿನಲ್ಲಿ ಹುಟ್ಟಿ ಹರಿಯುವ ಜಯಮಂಗಳಿ ನದಿಪಾತ್ರದ ಏಕೈಕ ಜಲಾಶಯ ಇದಾಗಿದೆ. ಕೊರಟಗೆರೆ ಕ್ಷೇತ್ರದ ಸಾವಿರಾರು ರೈತ ಕುಟುಂಬಗಳ ನೀರಾವರಿಗೆ ಜಲಾಶಯವೇ ಆಸರೆ. ಜಲಾಶಯದ ಸೊಬಗು ಮತ್ತು ಕೋಡಿಯ ದೃಶ್ಯವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಾ ಮಲೆನಾಡಿನ ಸೊಬಗನ್ನು ನಾಚಿಸುತ್ತೀದೆ. ಮಹಾಲಕ್ಷ್ಮೀಯ ಬ್ರಹ್ಮರಥೋತ್ಸವ ಮತ್ತು ಲಕ್ಷದೀಪೋತ್ಸವು ಸಿದ್ದರಬೇಟ್ಟದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ, ಎಲೆರಾಂಪುರದ ಡಾ.ಹನುಮಂತನಾಥ ಸ್ವಾಮೀಜಿ ಮತ್ತು ತಗ್ಗಿಹಳ್ಳಿಯ ರಾಮಾನಂದಾ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಜರುಗಲಿದೆ. ಕಾರ್ಯಕ್ರಮಕ್ಕೆ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮಧುಗಿರಿ ಎಸಿ ಗೋಟೊರು ಶಿವಪ್ಪ, ತಹಸೀಲ್ದಾರ್ ಮಂಜುನಾಥ.ಕೆ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ.

ಶ್ರೀ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಜಿ. ವಾಸುದೇವ, ಕಾರ್ಯದರ್ಶಿ ಚಿಕ್ಕನರಸಯ್ಯ, ಖಜಾಂಚಿ ಮಂಜುನಾಥ. ಜಿ.ಎಲ್, ಧರ್ಮದರ್ಶಿ ಡಾ.ಲಕ್ಷ್ಮೀಕಾಂತ. ಟಿ.ಎಸ್, ನಟರಾಜು. ಟಿ.ಆರ್, ಶ್ರೀಪ್ರಸಾದ್. ಎಸ್, ರವಿರಾಜೇಅರಸ್, ಮುರಳೀಕೃಷ್ಣ. ಆರ್, ಓಂಕಾರೇಶ್, ಆರ್. ಜಗದೀಶ್, ರಾಮಲಿಂಗಯ್ಯ, ನರಸರಾಜು, ಲಕ್ಷ್ಮೀನರಸಯ್ಯ, ಎನ್.ಜಿ.ನಾಗರಾಜು ಮತ್ತು ವಿಶೇಷ ಅಧಿಕಾರಿ ಕೇಶವಮೂರ್ತಿ, ಮತ್ತು ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಯ್ಯ ನೇತೃತ್ವದ ಆಡಳಿತ ಮಂಡಳಿ ದೇವಾಲಯದ ಅಭಿವೃದ್ದಿಗೆ ಹಗಲುರಾತ್ರಿ ಎನ್ನದೇ ಶ್ರಮಿಸುತ್ತೀದೆ.

ಆರ್ಕಷಿಸುತ್ತಿದೆ ಹೂವು, ದೀಪಾಲಂಕಾರ

ಮಹಾಲಕ್ಷ್ಮೀ ಪುಣ್ಯ ಕ್ಷೇತ್ರದಲ್ಲಿ ಕಾರ್ತಿಕ ಮಾಸದ ಕಡೆ ಶುಕ್ರವಾರ ಲಕ್ಷದಿಪೋತ್ಸವದ ಪ್ರಯುಕ್ತ ದೇವಾಲಯಕ್ಕೆ ಹೂವಿನ ಅಲಂಕಾರ, ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಮಹಾಲಕ್ಷ್ಮೀ ದೇವಿಗೆ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಹೋಮ-ಹವನ, ಮಧ್ಯಾಹ್ನ ೧೨-೩೫ ಕ್ಕೆ ಬ್ರಹ್ಮರಥೋತ್ಸವ, ಸಂಜೆ ೬ಗಂಟೆಗೆ ಲಕ್ಷದೀಪೋತ್ಸವ, ರಾತ್ರಿ ೭ಗಂಟೆಗೆ ಗೊರವನಹಳ್ಳಿ, ಗೊಲ್ಲರಹಟ್ಟಿ ಮತ್ತು ನರಸಯ್ಯನಪಾಳ್ಯದ ಗ್ರಾಮಸ್ಥರಿಂದ ಆರತಿ ಸೇವೆ ಮತ್ತು ರಾತ್ರಿ ೮ಗಂಟೆಗೆ ಮುತ್ತಿನ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಜರುಗಲಿದೆ.

ಗೊರವನಹಳ್ಳಿ ಮಹಾಲಕ್ಷ್ಮೀ ಸನ್ನಿಧಾನದಲ್ಲಿ ಬೆಳಿಗ್ಗೆಯಿಂದ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಮತ್ತು ಹೋಮಹವನ ಜರುಗಲಿದೆ. ಗೊರವನಹಳ್ಳಿ, ನರಸಯ್ಯನಪಾಳ್ಯ ಮತ್ತು ಗೊಲ್ಲರಹಟ್ಟಿ ಗ್ರಾಮಸ್ಥರಿಂದ ಸಂಜೆ ಆರತಿಸೇವೆ ಮತ್ತು ರಾತ್ರಿ ಮುತ್ತಿನ ಪಲ್ಲಕ್ಕಿ ಉತ್ಸವ. ದೇವಿಗೆ ವಿಶೇಷ ಹೂವಿನ ಅಂಕಾರವನ್ನ ಮಾಡಲಾಗುತ್ತದೆ. ಸುಬ್ರಹ್ಮಣ್ಯಶರ್ಮ. ಪ್ರಧಾನ ಅರ್ಚಕ. ಗೊರವನಹಳ್ಳಿ ಕ್ಷೇತ್ರ. ದೂರದ ಜಿಲ್ಲೆಗಳಿಂದ ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸರತಿ ಸಲಿನಲ್ಲಿ ದರ್ಶನದ ವ್ಯವಸ್ಥೆ, ಎಲ್ಲರಿಗೂ ಪ್ರಸಾದ ಸೇವೆ ಹಾಗೂ ವಾಹನಗಳ ಪಾರ್ಕಿಂಗ್ ಸೌಲಭ್ಯ ಇದೆ. ₹೯ ಕೋಟಿ ವೆಚ್ಚದ ಮಹಾಲಕ್ಷ್ಮೀ ದಾಸೋಹ ಭವನ ಲೋಕಾರ್ಪಣೆಗೆ ಸಿದ್ದವಿದೆ. ₹೧ ಕೋಟಿ ೨೦ ಲಕ್ಷದಲ್ಲಿ ದೇವಾಲಯ ಸುತ್ತಾ ಪ್ರಕಾರ ಮತ್ತು ಕಲ್ಯಾಣ ಮಂಟಪದ ದುರಸ್ಥಿ ಕಾಮಗಾರಿ ಪ್ರಗತಿಯಲ್ಲಿದೆ. ಬಿ.ಜಿ.ವಾಸುದೇವ. ಅಧ್ಯಕ್ಷ ಶ್ರೀಮಹಾಲಕ್ಷ್ಮಿ ಟ್ರಸ್ಟ್ ಗೊರವನಹಳ್ಳಿ

Share this article