ಮಳೆಗೆ ಸೋರುತ್ತಿದೆ ಸರ್ಕಾರಿ ಆಸ್ಪತ್ರೆ: ರೋಗಿಗಳ ಪರದಾಟ

KannadaprabhaNewsNetwork |  
Published : Jul 10, 2024, 12:35 AM IST
ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಯ  ಹೊರ ರೋಗಿಗಳ ನೋಂದಣಿ ವಿಭಾಗದಲ್ಲಿ ಮಳೆಯ ನೀರು ಸೋರುತ್ತಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ | Kannada Prabha

ಸಾರಾಂಶ

ನರಸಿಂಹರಾಜಪುರ, ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹೊರ ರೋಗಿ ನೋಂದಣಿ ವಿಭಾಗದಲ್ಲಿ ಮಳೆ ನೀರು ಸೋರುತ್ತಿದ್ದು ನೋಂದಣಿ ಮಾಡಿಸಲು ಬಂದ ಸಾರ್ವಜನಿಕರಿಗೆ, ರೋಗಿಗಳ ಮೈ ಮೇಲೆ ಮಳೆ ಹನಿ ಬೀಳುತ್ತಿದ್ದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂ.ಎನ್.ನಾಗೇಶ್ ತಿಳಿಸಿದ್ದಾರೆ.

ಶಾಸಕರು ಗಮನ ಹರಿಸಲು ಬಿಜೆಪಿ ಮುಖಂಡ ಎಂ.ಎನ್.ನಾಗೇಶ್ ಆಗ್ರಹ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹೊರ ರೋಗಿ ನೋಂದಣಿ ವಿಭಾಗದಲ್ಲಿ ಮಳೆ ನೀರು ಸೋರುತ್ತಿದ್ದು ನೋಂದಣಿ ಮಾಡಿಸಲು ಬಂದ ಸಾರ್ವಜನಿಕರಿಗೆ, ರೋಗಿಗಳ ಮೈ ಮೇಲೆ ಮಳೆ ಹನಿ ಬೀಳುತ್ತಿದ್ದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂ.ಎನ್.ನಾಗೇಶ್ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿ, ಸರ್ಕಾರಿ ಆಸ್ಪತ್ರೆ ಕಟ್ಟಡ ಸೋರುತ್ತಿದೆ. ಜನರು ಆರ್.ಸಿಸಿ ಕಟ್ಟಡದೊಳಗೇ ಮಳೆ ನೀರಿನಲ್ಲಿ ನೆನೆದು ಕೊಂಡೇ ತಮ್ಮ ಹೆಸರು ನೋಂದಾಯಿಸಬೇಕಾದ ಪರಿಸ್ಥಿತಿ ಬಂದಿದೆ. ಎಲ್ಲಾ ವೈದ್ಯರ ಕೊಠಡಿ ಹೊರಗೆ ಹೊರ ರೋಗಿಗಳಿ ಗೆಂದು ಆಸನ ಹಾಕಲಾಗಿದೆ. ಈ ಆಸನಗಳ ಮೇಲೂ ನೀರು ಬೀಳುತ್ತಿರುವುದರಿಂದ ರೋಗಿಗಳು ಕುರ್ಚಿಗಳ ಮೇಲೆ ಕೂರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಶಾಸಕರು ಗಮನ ಹರಿಸಿ ಸಮಸ್ಯೆ ಬಗೆಹರಿಸಿ ಆಸ್ಪತ್ರೆಯಲ್ಲಿ ಮಳೆಯ ನೀರು ಸೋರದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಆಸ್ಪತ್ರೆ ಸ್ಥಿರ ದೂರವಾಣಿ ಇಲ್ಲದೆ ಮೂರು ವರ್ಷ ಆಗಿದೆ. ಈ ಬಗ್ಗೆಯೂ ಶಾಸಕರು ಗಮನಹರಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರಿದ್ದು ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ. ಶಿಕ್ಷಣಕ್ಕೆ ಹಾಗೂ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತೇವೆ ಎಂದು ಕ್ಷೇತ್ರದ ಶಾಸಕರು ಆಗಾಗ್ಗೆ ಹೇಳಿಕೆ ನೀಡುತ್ತಿದ್ದಾರೆ. ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆ ಮುಖ್ಯ ಕಟ್ಟಡವೇ ಸೋರುತ್ತಿದ್ದು ರೋಗಿಗಳು ಪರದಾಡುತ್ತಿರುವುದರಿಂದ ತಕ್ಷಣ ಶಾಸಕರು ಸ್ಪಂದಿಸಿ ಮಂದಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

--- ಬಾಕ್ಸ್ ---

ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್ ಕನ್ನಡಪ್ರಭದೊಂದಿಗೆ ಮಾತನಾಡಿ,ಸರ್ಕಾರಿ ಆಸ್ಪತ್ರೆ ಮೇಲ್ಚಾವಣಿ ದುರಸ್ತಿಗೆ ಶಾಸಕರ ಅನುದಾನದಲ್ಲಿ 5 ಲಕ್ಷ ರು. ಬಿಡುಗಡೆಯಾಗಿದ್ದು ಶೀಘ್ರದಲ್ಲೇ ದುರಸ್ತಿ ಕಾಮಗಾರಿ ನಡೆಯಲಿದೆ. ಶಾಸಕರ ಅನುದಾನದಲ್ಲಿ ಆರೋಗ್ಯಕ್ಕೆ ಪೂರಕ ಎಲ್ಲಾ ನಿರ್ವಹಣೆಗೆ 10 ಲಕ್ಷ ರು. ಮೀಸಲಿಡಲಾಗಿದೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ