ಸರ್ಕಾರಿ ಯೋಜನೆ ಜವಾಬ್ದಾರಿಯಿಂದ ಬಳಸಿದಾಗ ಸಾರ್ಥಕ: ಸಚಿವ ಮಧು

KannadaprabhaNewsNetwork |  
Published : Jan 30, 2024, 02:02 AM IST
ಪೊಟೊ: 29ಎಸ್‌ಎಂಜಿಕೆಪಿ02ಶಿವಮೊಗ್ಗ ಸ್ಪಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಿರ್ಮಿಸಿರುವ ತುಂಗಾ ರಿವರ್ ಫ್ರಂಟ್ ಪ್ರಾಜೆಕ್ಟ್ ಹಾಗೂ ಸಾರ್ವಜನಿಕ ಬೈಸಿಕಲ್ ಯೋಜನೆಯನ್ನು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ಜನರು ಕಟ್ಟುವ ಕಂದಾಯದ ಹಣದಿಂದಲೇ ನಿರ್ಮಾಣವಾಗಿರುವ ಸ್ಮಾರ್ಟ್‍ಸಿಟಿ ಯೋಜನೆಗಳ ಜವಾಬ್ದಾರಿ ನಮ್ಮೆಲ್ಲರ ಮೇಲೆ ಹಾಗೂ ಸಾರ್ವಜನಿಕರ ಮೇಲಿದೆ. ತುಂಗಾ ನದಿ ಉತ್ತರದಂಡೆ ಪಾದಚಾರಿ ಸೇತುವೆ, ವಾಯುವಿಹಾರ, ಸಾರ್ವಜನಿಕ ಬೈಸಿಕಲ್ ಯೋಜನೆ ಮುಂತಾದವುಗಳನ್ನು ಸಾರ್ವಜನಿಕರು ಜವಾಬ್ದಾರಿಯಿಂದ ಬಳಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ತುಂಗಾ ನದಿ ಉತ್ತರದಂಡೆ ಪಾದಚಾರಿ ಸೇತುವೆ, ವಾಯುವಿಹಾರ, ಸಾರ್ವಜನಿಕ ಬೈಸಿಕಲ್ ಯೋಜನೆ ಮುಂತಾದವುಗಳನ್ನು ಸಾರ್ವಜನಿಕರು ಜವಾಬ್ದಾರಿಯಿಂದ ಬಳಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗ ಸ್ಪಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಿರ್ಮಿಸಿರುವ ತುಂಗಾ ರಿವರ್ ಫ್ರಂಟ್ ಪ್ರಾಜೆಕ್ಟ್ ಹಾಗೂ ಸಾರ್ವಜನಿಕ ಬೈಸಿಕಲ್ ಯೋಜನೆಯನ್ನು ಸೋಮವಾರ ಸಾರ್ವಜನಿಕರಿಗೆ ಮುಕ್ತಗೊಳಿಸಿ ಅವರು ಮಾತನಾಡಿ, ಜನರು ಕಟ್ಟುವ ಕಂದಾಯದ ಹಣದಿಂದಲೇ ನಿರ್ಮಾಣವಾಗಿರುವ ಸ್ಮಾರ್ಟ್‍ಸಿಟಿ ಯೋಜನೆಗಳ ಜವಾಬ್ದಾರಿ ನಮ್ಮೆಲ್ಲರ ಮೇಲೆ ಹಾಗೂ ಸಾರ್ವಜನಿಕರ ಮೇಲಿದೆ. ಈ ಯೋಜನೆ ಉಪಯೋಗವನ್ನು ಎಲ್ಲರೂ ಪಡೆಯಬೇಕು. ಸಾರ್ವಜನಿಕರು ತುಂಗಾ ನದಿ ಉದ್ಯಾನವನದಲ್ಲಿ ಓಡಾಡಬೇಕು. ಆಗ ಮಾತ್ರ ಆರೋಗ್ಯವೂ ವೃದ್ಧಿಸಿ, ಉದ್ಯಾನವನ ನಿರ್ಮಾಣ ಸಾರ್ಥಕ ಆಗುತ್ತದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ತಲಾ ಶೇ.50 ಅನುದಾನದಲ್ಲಿ ಕೆಲಸಗಳು ನಡೆದಿದ್ದು, ತುಂಗಾ ರಿವರ್ ಫ್ರಂಟ್ ಪ್ರಾಜೆಕ್ಟ್‌ ಅನ್ನು ₹103 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಾರ್ವಜನಿಕರು ಈ ಯೋಜನೆಗಳನ್ನು ತಮ್ಮ ಆಸ್ತಿ ಎಂದು ಅರಿತು ಸ್ವಚ್ಛತೆ ಹಾಗೂ ಕಾಳಜಿಯಿಂದ ನೋಡಿಕೊಳ್ಳಬೇಕು. ಉದ್ಯಾನವನದಲ್ಲಿ ಮಹಿಳೆಯರು, ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ರಕ್ಷಣಾ ವ್ಯವಸ್ಥೆ, ಸಿಸಿಟಿವಿ ಅವಳವಡಿಸುವುದು, ರಾತ್ರಿವೇಳೆ ವಿದ್ಯುತ್‌ ದೀಪ ಸೇರಿದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಉದ್ಯಾನವನ ನಿರ್ವಹಣೆಗಾಗಿ ಸಾರ್ವಜನಿಕರಿಗೆ ಹೊರೆಯಾಗದಂತೆ ಪ್ರವೇಶ ಶುಲ್ಕ ತೆಗೆದುಕೊಳ್ಳುವ ಬಗ್ಗೆ ಸ್ಮಾರ್ಟ್‍ಸಿಟಿ ಎಂ.ಡಿ.ಯವರು ನಿರ್ಧರಿಸುವರು. ಇಲ್ಲಿ ಹಸಿರು, ಸ್ವಚ್ಛತೆ, ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನಿಡಬೇಕು. ಅಂಗಡಿ, ಜಾಹೀರಾತು, ಮಳಿಗೆಗಳಿಗೆ ಅವಕಾಶ ನೀಡಿ, ಪ್ರವಾಸೋದ್ಯಮ ಉತ್ತೇಜಿಸಬೇಕು. ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದು ಹೇಳಿದರು.

ನಗರದ ಹೃದಯಭಾಗ ಶಿವಪ್ಪ ನಾಯಕ ವೃತ್ತದಲ್ಲಿ ಪಾಲಿಕೆಗೆ ಹೊಂದಿಕೊಂಡಂತೆ ಹೂವು-ಹಣ್ಣು ಮಾಕುಟ್ಟೆಗಾಗಿ 118 ಮಳಿಗೆ, ಮಲ್ಟಿಲೆವೆಲ್ ಕಾರ್‌ ಪಾರ್ಕಿಂಗ್‍ಗೆ ಒಟ್ಟು 172 ಕಾರು ಮತ್ತು 78 ಬೈಕ್ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಸ್ಮಾರ್ಟ್‍ಸಿಟಿ ಕಾಮಗಾರಿಗಳು ಉತ್ತಮವಾಗಿವೆ. ಇಂದು ಸಾರ್ವಜನಿಕರಿಗೆ ಮುಕ್ತಗೊಳಿಸುವ ಕಾರ್ಯ ನಡೆದಿದೆ. ಈ ಸ್ಪಾರ್ಟ್‍ಸಿಟಿ ಯೋಜನೆ ಮಂಜೂರಾತಿ ಮತ್ತು ಅನುಷ್ಠಾನದಲ್ಲಿ ಅನೇಕರ ನಾಯಕರ ಪ್ರಯತ್ನ ಮತ್ತು ಶ್ರಮವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತು ಮಾಜಿ ಸದಸ್ಯ ಆಯನೂರು ಮಂಜುನಾಥ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಯೋಗೇಶ್, ಗನ್ನಿ ಶಂಕರ್, ಧೀರರಾಜ್ ಹೊನ್ನವಿಲೆ, ಶಬನಾ ಖಾನಂ, ಸ್ವತಂತ್ರ ನಿರ್ದೇಶಕಿ ಲಕ್ಷ್ಮೀ ಗೋಪಿನಾಥ್, ಸ್ಮಾರ್ಟ್‌ ಸಿಟಿ ಎಂ.ಡಿ. ಕೆ.ಮಾಯಾಣ್ಣಗೌಡ, ಮುಖ್ಯ ಎಂಜಿನಿಯರ್‌ಗಳಾದ ರಂಗನಾಥ ಮತ್ತಿತರರು ಇದ್ದರು.

- - -

ಕೋಟ್‌ ನಗರ ಪಾಲಿಕೆ ವ್ಯಾಪ್ತಿಯ 6 ವಾರ್ಡ್‍ಗಳಲ್ಲಿ ಪೂರ್ಣ ಪ್ರಮಾಣ ಮತ್ತು 9 ವಾರ್ಡುಗಳಲ್ಲಿ ಭಾಗಶಃ ಸ್ಮಾರ್ಟ್‍ಸಿಟಿ ಕೆಲಸಗಳು ಆಗಿವೆ. ಮುಂದಿನ ಹಂತದಲ್ಲಿ ಇತರೇ ವಾರ್ಡುಗಳನ್ನು ಪರಿಗಣಿಸಲಾಗುವುದು

- ಎಸ್‌.ಎನ್‌.ಚನ್ನಬಸಪ್ಪ, ಶಾಸಕ, ಶಿವಮೊಗ್ಗ ನಗರ ಕ್ಷೇತ್ರ

- - - -29ಎಸ್‌ಎಂಜಿಕೆಪಿ02:

ಶಿವಮೊಗ್ಗ ಸ್ಪಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಿರ್ಮಿಸಿರುವ ತುಂಗಾ ರಿವರ್ ಫ್ರಂಟ್ ಪ್ರಾಜೆಕ್ಟ್ ಹಾಗೂ ಸಾರ್ವಜನಿಕ ಬೈಸಿಕಲ್ ಯೋಜನೆಯನ್ನು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ