ಅನ್ನದಾತರ ಆತ್ಮಹತ್ಯೆ ತಡೆಗೆ ಸರ್ಕಾರ ಮುಂದಾಗಲಿ: ಮಲ್ಲಿಕಾರ್ಜುನ ಬಳ್ಳಾರಿ

KannadaprabhaNewsNetwork |  
Published : Jul 15, 2025, 11:45 PM IST
ಮ | Kannada Prabha

ಸಾರಾಂಶ

ರಾಜ್ಯದಲ್ಲಿ ಹಾವೇರಿಯಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮಾಹಿತಿ ಲಭ್ಯವಾಗಿದೆ. ಸರ್ಕಾರ ಇದಕ್ಕೆ ನಿಖರವಾದ ಕಾರಣವನ್ನು ಹುಡುಕುವುದನ್ನು ಬಿಟ್ಟು ದೊಡ್ಡ ಪ್ರಮಾಣದ ಪರಿಹಾರ ನೀಡಿದ್ದೇವೆ, ಅದೇಗೆ ಆತ್ಮಹತ್ಯೆಗಳಾಗುತ್ತವೆ ಎಂಬುದಾಗಿ ಹಗುರವಾಗಿ ಮಾತನಾಡುತ್ತಿರುವುದು ದುರಂತದ ಸಂಗತಿ ಎಂದು ರೈತ ಮುಖಂಡರು ಆರೋಪಿಸಿದರು.

ಬ್ಯಾಡಗಿ: ಜಿಲ್ಲೆಯಲ್ಲಿ ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿಸಿಸಿ ಸ್ಥಾಪನೆ ಮಾಡದೇ, ₹5 ಲಕ್ಷ ಬಡ್ಡಿ ರಹಿತ ಸಾಲ ಸೌಲಭ್ಯ ಸೇರಿದಂತೆ ನೀರಾವರಿ ಸೌಲಭ್ಯ, ಬೆಂಬಲ ಬೆಲೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸದೇ ಸರ್ಕಾರವೇ ಅಪ್ರತ್ಯಕ್ಷವಾಗಿ ರೈತರನ್ನು ಹತ್ಯೆ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಹಾವೇರಿಯಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮಾಹಿತಿ ಲಭ್ಯವಾಗಿದೆ. ಸರ್ಕಾರ ಇದಕ್ಕೆ ನಿಖರವಾದ ಕಾರಣವನ್ನು ಹುಡುಕುವುದನ್ನು ಬಿಟ್ಟು ದೊಡ್ಡ ಪ್ರಮಾಣದ ಪರಿಹಾರ ನೀಡಿದ್ದೇವೆ, ಅದೇಗೆ ಆತ್ಮಹತ್ಯೆಗಳಾಗುತ್ತವೆ ಎಂಬುದಾಗಿ ಹಗುರವಾಗಿ ಮಾತನಾಡುತ್ತಿರುವುದು ದುರಂತದ ಸಂಗತಿ ಎಂದರು.

ನಿಯಮಾವಳಿ ಸಡಿಲಿಸಿ: ಗಂಗಣ್ಣ ಎಲಿ ಮಾತನಾಡಿ, ರೈತ ಆತ್ಮಹತ್ಯೆ ಮಾಡಿಕೊಂಡ 90 ದಿನಗಳಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕೆನ್ನುವುದು, 6 ತಿಂಗಳಲ್ಲಿ ಜಿಲ್ಲಾಧಿಕಾರಿಗಳ ಅನುಮೋದನೆಯೊಂದಿಗೆ ಸರ್ಕಾರಕ್ಕೆ ಸಲ್ಲಿಸಬೇಕೆನ್ನುವುದು ಹಾಗೂ ಮೃತ ರೈತನಿಗೆ ಅದೇ ಆರ್ಥಿಕ ವರ್ಷದಲ್ಲಿ ಪರಿಹಾರ ಪಡೆದುಕೊಳ್ಳಬೇಕೆನ್ನುವ ನಿಯಮಗಳು ಬಹಳಷ್ಟು ವಿಚಿತ್ರವಾಗಿವೆ. ಹಾಗಿದ್ದರೇ ಜನವರಿ ಅಥವಾ ಫೆಬ್ರವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಗತಿಯೇನು ಎಂದು ಪ್ರಶ್ನಿಸಿದರು.

ತಿಂಗಳು ಬೇಕು:

ಚಿಕ್ಕಪ್ಪ ಛತ್ರದ ಪೊಲೀಸ್ ಇಲಾಖೆಯಲ್ಲಿ ಎಫ್‌ಐಆರ್ ಆದ ತಕ್ಷಣವೇ ಕೃಷಿ ಇಲಾಖೆ ಮತ್ತು ತಹಸೀಲ್ದಾರ್ ಕಚೇರಿ ಅಧಿಕಾರಿಗಳು ತಾವೇ ಖುದ್ದಾಗಿ ರೈತನ ಪತ್ನಿಯಿಂದ ಅರ್ಜಿಯನ್ನು ಪಡೆದುಕೊಳ್ಳುವಂತೆ ತಿದ್ದುಪಡಿ ಮಾಡಬೇಕು. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳಲ್ಲಿ ಎಫ್‌ಎಸ್ಎಲ್ ವರದಿ ಪಡೆದುಕೊಳ್ಳಲು ಕನಿಷ್ಠ 3 ತಿಂಗಳು ಅವಧಿ ಬೇಕಾಗುತ್ತದೆ, ಅಷ್ಟಕ್ಕೂ ಸಂಪ್ರದಾಯ ಹಾಗೂ ವಿಧಿ ವಿಧಾನಗಳಂತೆ ಮೃತನ ಪತ್ನಿ ಮನೆಯಿಂದ ಹೊರಬರಲು ಕನಿಷ್ಠ ತಿಂಗಳು ಬೇಕಾಗುತ್ತದೆ. ಇಂತಹ ಕನಿಷ್ಠ ಸಾಮಾನ್ಯ ಜ್ಞಾನವನ್ನು ಹೊಂದಿರದ ಸರ್ಕಾರದಿಂದ ರೈತರು ಇನ್ನೇನು ನಿರೀಕ್ಷಿಸಲು ಸಾಧ್ಯವೆಂದರು.

ಪ್ರಕಾಶ ಸಿದ್ದಪ್ಪನವರ ಮಾತನಾಡಿದರು. ಈ ಸಂದರ್ಭದಲ್ಲಿ ಮೌನೇಶ ಕಮ್ಮಾರ, ಜಾನ್ ಪುನೀತ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV

Latest Stories

ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ
ಚಿಕ್ಕಬಳ್ಳಾಪುರಕ್ಕೂ ಬರಲಿದೆ ಕುಸುಮ್‌ ಯೋಜನೆ
ಆರೋಗ್ಯ ಇಲಾಖೆ ಸಿಬ್ಬಂದಿಗೆ ಹೆಪಟೈಟಿಸ್ ಬಿ ಲಸಿಕೆ