ಕಲಾ ಪ್ರದರ್ಶನಕ್ಕೆ ಕಲಾಕೃತಿಗಳ ಆಹ್ವಾನ

KannadaprabhaNewsNetwork | Published : Sep 12, 2024 1:53 AM

ಸಾರಾಂಶ

ಸೆಪ್ಟೆಂಬರ್ 17 ರಿಂದ 30 ರೊಳಗೆ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ಸಂಸ್ಥೆಯ ಕಛೇರಿ ಅವಧಿಯಲ್ಲಿ ಸಲ್ಲಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಮಹೋತ್ಸವ ಸಂಬoಧ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ವತಿಯಿಂದ ಸಿದ್ದಾರ್ಥನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ಸಂಸ್ಥೆಯ ಆವರಣದಲ್ಲಿ ಅ. 4 ರಿಂದ 7 ರವರೆಗೆ ನಡೆಯುವ ರಾಜ್ಯ ಮಟ್ಟದ ದಸರಾ ಕಲಾ ಪ್ರದರ್ಶನಕ್ಕೆ ಕಲಾಕೃತಿಗಳನ್ನು ಆಹ್ವಾನಿಸಲಾಗಿದೆ. ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಕಲೆ, ಛಾಯಾಚಿತ್ರ, ಅನ್ವಯ ಕಲೆ ವಿಭಾಗಗಳಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ವಿಭಾಗಗಳಿರುತ್ತದೆ. ಕಲಾಕೃತಿಗಳನ್ನು ಸೆಪ್ಟೆಂಬರ್ 17 ರಿಂದ 30 ರೊಳಗೆ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ಸಂಸ್ಥೆಯ ಕಛೇರಿ ಅವಧಿಯಲ್ಲಿ ಸಲ್ಲಿಸಬೇಕು. ಎಲ್ಲಾ ವಿಭಾಗಗಳಲ್ಲಿ ಅತ್ಯುತ್ತಮ ಮೂರು ಕಲಾಕೃತಿಗಳಿಗೆ ಬಹುಮಾನ ನೀಡಲಾಗುವುದು. ಕಲಾಕೃತಿಗಳನ್ನು ಸಲ್ಲಿಸುವ ಕಲಾವಿದರು ಸಂಪೂರ್ಣ ವಿವರವನ್ನು ಸ್ವಯಂ ದೃಢೀಕರಣದೊಂದಿಗೆ ಉಪಸಮಿತಿಗೆ ತಲುಪಿಸಬೇಕು. ಕಲಾಕೃತಿಯು ಅಕ್ಟೋಬರ್ 2023 ರ ನಂತರ ರಚಿಸಿರಬೇಕು ಹಾಗೂ ಬಹುಮಾನ ಪಡೆದ ಕಲಾಕೃತಿಯಾಗಿರಬಾರದು. ಒಂದು ವಿಭಾಗಕ್ಕೆ ಎರಡು ಕಲಾಕೃತಿಗಳನ್ನು ಪ್ರದರ್ಶನಕ್ಕೆ ಕಳುಹಿಸಬಹುದು. ಯಾವುದೇ ಒಂದು ವಿಭಾಗದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಕಲಾಕೃತಿಯು 1x1 ಅಡಿಗಿಂತ ಚಿಕ್ಕದು, 3x3 ಅಡಿಗಿಂತ ದೊಡ್ಡದಿರಬಾರದು. ಶಿಲ್ಪವು 20 ಕಿ.ಜಿ ಗಿಂತ ಕಡಿಮೆ ಭಾರವಾಗಿರಬೇಕು. ಚಿತ್ರಕಲಾಕೃತಿಯನ್ನು ಫ್ರೇಮ್ನೊಂದಿಗೆ ಮತ್ತು ಶಿಲ್ಪಕೃತಿಯನ್ನು ಪೀಠದೊಂದಿಗೆ ಕಳುಹಿಸಬೇಕು. ಶಿಲ್ಪವು ದುರ್ಬಲ (Fragile) ಮಾಧ್ಯಮದಿಂದ ನಿರ್ಮಿತವಾಗಿರಬಾರದು. ಕಲಾ ಪ್ರದರ್ಶನ ಮುಗಿದ ನಂತರ ಅಕ್ಟೋಬರ್ 8 ರಿಂದ 14 ರೊಳಗೆ ಕಲಾಕೃತಿಗಳನ್ನು ಹಿಂಪಡೆಯಬೇಕು. ಅರ್ಜಿ ನಮೂನೆಯನ್ನು https://cavamysore.karnataka.gov.in ಅಥವಾ https://mysore.nic.in ವೆಬ್ ಸೈಟ್ ಮೂಲಕ ಪಡೆಯಬಹುದು.

ಹೆಚ್ಚಿನ ವಿವರಗಳಿಗಾಗಿ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿಯ ಚಂದ್ರಶೇಖರ ಎ.ಪಿ ಅವರ ಮೊ.ಸಂ:9844595568 ಮತ್ತು ರವಿಮೂರ್ತಿ.ಕೆ ಅವರ ಮೊ.ಸಂ: 9844082579 ಅನ್ನು ಸಂರ್ಪಕಿಸಬಹುದು ಎಂದು ಮೈಸೂರು ದಸರಾ ಮಹೋತ್ಸವದ ಲಲಿತಕಲೆ ಮತ್ತು ಕರಕುಶಲ ಉಪಸಮಿತಿಯ ಕಾರ್ಯಾಧ್ಯಕ್ಷರು ತಿಳಿಸಿದ್ದಾರೆ.

Share this article