ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ
ಬರುವ ನವಂಬರ್ ನಲ್ಲಿ ಸಾಗರ ಪ್ರಾಂತ್ಯದ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ಈ ಸಮಾವೇಶದಲ್ಲಿ ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಸಾಗರ-ಹೊಸನಗರ-ಸೊರಬ-ತೀರ್ಥಹಳ್ಳಿ ಆಡಿಕೆ ಬೆಳೆಗಾರರೊಂದಿಗೆ ಸಮಾಲೋಚಿಸಿ ಕೈಗೊಳ್ಳಬಹುದಾದ ನಿರ್ಣಾಯದ ಕುರಿತು ಆಡಿಕೆ ಬೆಳೆಗಾರರ ಪೂರ್ವಭಾವಿ ಸಭೆ ರಿಪ್ಪನ್‍ಪೇಟೆಯ ಶಿವಮಂದಿರದಲ್ಲಿ ಬುಧವಾರ ಜರುಗಿತು.ಈ ವೇಳೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಡಿಕೆ ಸೇವನೆಯಿಂದ ಮಾರಕ ರೋಗ ಹರಡುವುದೆಂಬ ತಪ್ಪು ನಿರ್ಧಾರವನ್ನು ಕೈಬಿಟ್ಟು, ಸಂಶೋಧನೆ ನಡೆಸಿ ಬೆಳೆಗಾರರ ಹಿತ ರಕ್ಷಣೆ ಕಾಪಾಡಬೇಕು ಎಂದರು.
ಚಿಕ್ಕಮಂಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಕಾಫಿ ಬೆಳೆಗಾರ ರೈತರಿಗೆ ಒಂದು ಹೆಕ್ಟರ್ ಜಮೀನು ಮಂಜೂರು ಮಾಡುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಹೇಳಿಕೆಯನ್ನುಆದರಿಸಿ ಮಂಜೂರಾತಿ ಪ್ರಕ್ರಿಯೆ ಆರಂಭಿಸಲಾಗಿದ್ದು, ಅದೇ ನಿಯಮದಡಿ ಶಿವಮೊಗ್ಗ ಜಿಲ್ಲೆಯ ಇತರ ತಾಲೂಕುಗಳಲ್ಲಿ ಕೆಪಿಟಿಸಿಎಲ್ ಮತ್ತು ಗ್ರಾಮಠಾಣಾ ಸೊಪ್ಪಿನ ಬೆಟ್ಟ ಹೀಗೆ ಆರಣ್ಯ ಜಮೀನಿನಲ್ಲಿ ಸಾಗುವಳಿ ಮಾಡುವ ರೈತರಿಗೆ ಭೂಮಿಯ ಹಕ್ಕು ನೀಡುವುದು, ಅಡಿಕೆ ಬೆಳೆಗಳಲ್ಲಿ ಕಾಣಿಸಿಕೊಂಡಿರುವ ಮಾರಕ ರೋಗಗಳಾದ ಎಲೆಚುಕ್ಕೆ ರೋಗ ಬೇರು ಹುಳು ಹತ್ತು ಹಲವು ರೋಗಗಳಿಂದಾಗಿ ರೈತರು ದಿಕ್ಕು ತಪ್ಪುವಂತಾಗಿದ್ದಾರೆ ಎಂದರು.ಹೊರ ದೇಶದಿಂದ ಭಾರತಕ್ಕೆ ಬರುತ್ತಿರುವ ಆಡಿಕೆ ತಡೆಯುವುದು ಸೇರಿ ಹಲವು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸುವ ಉದ್ದೇಶದಿಂದ ನವಂಬರ್‌ನಲ್ಲಿ ಸಾಗರದಲ್ಲಿ ಆಡಿಕೆ ಬೆಳೆಗಾರರ ಸಮಾವೇಶವನ್ನು ಆಯೋಜಿಸಲಾಗಿದೆ.
ಈ ಸಮಾವೇಶದಲ್ಲಿ ಕೇಂದ್ರ ಸಚಿವರು ಮತ್ತು ರಾಜ್ಯ ಸಚಿವರನ್ನು ಆಹ್ವಾನಿಸಿ ಆವರಿಗೆ ನಮ್ಮ ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ, ಆಡಿಕೆ ಹಾನಿ ಕಾರಕವಲ್ಲ ಎಂಬ ಬಗ್ಗೆ ಮನವರಿಕೆ ಮಾಡುವ ಮೂಲಕ ಅಡಿಕೆ ಬೆಳೆಗಾರ ಸಮಸ್ಯೆಗೆ ಶಾಶ್ವತ ಪರಿಕಲ್ಪಿಸುವಂತೆ ಆಗ್ರಹಿಸಲು ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.ಅಲ್ಲದೆ ಶೀಘ್ರದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಂಘಟನೆಯ ಕುರಿತು ಎಚ್ಚರಿಸಲು ಸುಮಾರು 12 ಸಾವಿರಕ್ಕೂ ಆಧಿಕ ಆಡಿಕೆ ಬೆಳೆಗಾರ ಬೃಹತ್ ಜಾಗೃತಿ ಜಾಥಾ ನಡೆಸಲಾಗುವುದು. ಜಾಥಾಕ್ಕೂ ಹೆಚ್ಚಿನ ಬೆಂಬಲ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಸಾಗರ ಪ್ರಾಂತ್ಯದ ಆಡಿಕೆ ಬೆಳೆಗಾರ ಸಂಘದ ಮುಖಂಡ ಯು.ಎಚ್.ರಾಮಪ್ಪ, ಎಚ್.ಎಂ.ವರ್ತೇಶ್ ಗೌಡ, ಬೆಳಂದೂರು ಬಿ.ಎಚ್.ನಾಗಭೂಷಣ, ಎಚ್.ಎಸ್.ರವಿ ಹಾಲುಗುಡ್ಡೆ, ಡಿ.ಈ.ಮಧುಸೂದನ್,ಡಿ.ವಿ.ಬಸವರಾಜ ದೊಂಬೆಕೊಪ್ಪ,ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ತಲು, ದೇವೇಂದ್ರಪ್ಪಗೌಡ ನೆವಟೂರು,ರಾಜೇಂದ್ರಗೌಡರು, ಕೆ.ಎನ್.ರಾಜಶೇಖರ, ಲಿಂಗಪ್ಪ, ಡಿ.ಎಸ್. ಕರುಣೇಶ ಹಾಗೂ ಹಲವು ರೈತರು ಭಾಗವಹಿಸಿದರು.