ಭಟ್ಕಳ: ಇಲ್ಲಿನ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಗರ ರಸ್ತೆಯಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನ ವನದಲ್ಲಿ ಬುಧವಾರ ಪತ್ರಕರ್ತರು ಜತೆಗೂಡಿ ಗಿಡ ನೆಡುವುದರೊಂದಿಗೆ ಒಂದು ವಾರ ಕಾಲ ನಡೆಸಲಾಗುವ ವನಮಹೋತ್ಸವಕ್ಕೆ ಚಾಲನೆ ನೀಡಿದರು.
ಪ್ರತಿಯೊಬ್ಬರೂ ವರ್ಷಂಪ್ರತಿ ಒಂದು ಗಿಡವಾದರೂ ನೆಟ್ಟು ಅದನ್ನು ಪೋಷಿಸುವ ಕೆಲಸ ಮಾಡಬೇಕು. ಭಟ್ಕಳ ವಲಯದ ಅರಣ್ಯ ವ್ಯಾಪ್ತಿಯಲ್ಲಿ ಒಂದು ವಾರದಲ್ಲಿ 3 ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದ ಅವರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯತೆ ಆಗಬೇಕು. ಉತ್ತಮ ವಾತಾವರಣಕ್ಕೆ ಶೇ. 33ರಷ್ಟು ಹಸಿರು ಹೊದಿಕೆ ಅಗತ್ಯವಿದೆ.
ಆದರೆ ನಾವು ಶೇ. 20ರಿಂದ 22ರಷ್ಟು ಮಾತ್ರ ಹಸಿರು ಹೊದಿಕೆಯನ್ನು ಹೊಂದಿದ್ದೇವೆ. ವಾತಾವರಣ ಮತ್ತು ಹವಾಮಾನದ ವೈಪರೀತ್ಯ ಕಡಿಮೆ ಮಾಡಲು ಗಿಡಮರಗಳನ್ನು ಹೆಚ್ಚೆಚ್ಚು ಬೆಳೆಸುವುದು ಇಂದಿನ ಅನಿವಾರ್ಯವಾಗಿದೆ ಎಂದರು.ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ, ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ಟ, ಅಧ್ಯಕ್ಷ ರಾಘವೇಂದ್ರ ಹೆಬ್ಬಾರ, ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ, ಉಪಾಧ್ಯಕ್ಷರಾದ ವಿಷ್ಣು ದೇವಡಿಗ, ಎಂ.ಆರ್. ಮಾನ್ವಿ, ಖಚಾಂಚಿ ಮೋಹನ ನಾಯ್ಕ, ಸದಸ್ಯರಾದ ಸತೀಶಕುಮಾರ ನಾಯ್ಕ, ನಸೀಮುಲ್ ಘನಿ, ಫಯ್ಯಾಜ್ ಮುಲ್ಲಾ, ಅರ್ಜುನ್ ಮಲ್ಯಾ, ಉದಯ ನಾಯ್ಕ, ಈಶ್ವರ ನಾಯ್ಕ,ಲೋಕೇಶ ನಾಯ್ಕ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.