ದಾಬಸ್‌ಪೇಟೆ: ಕಾಂಗ್ರೆಸ್ ಸಮಾಜದ ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುತ್ತಿರುವ ಏಕೈಕ ಪಕ್ಷ. ನಾವು ಜಾತ್ಯತೀತರು ಎನ್ನುವ ಜೆಡಿಎಸ್ ಕೋಮುವಾದಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದು ನಾಚಿಕೆಗೇಡು ಎಂದು ಶಾಸಕ ಶ್ರೀನಿವಾಸ್ ಹೀಯಾಳಿಸಿದರು.
ಸೋಂಪುರ ಹೋಬಳಿಯ ಶಿವಗಂಗೆಯಲ್ಲಿ ಹಮ್ಮಿಕೊಂಡಿದ್ದ ಹೊನ್ನೇನಹಳ್ಳಿ ಹಾಗೂ ಶಿವಗಂಗೆ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕಷ್ ನುಡಿದಂತೆ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಲಕ್ಷಾತಂರ ಜನರ ಮನೆಗಳು ಬೆಳಗುತ್ತಿವೆ. ಈ ಯೋಜನೆಗಳ ಮಹತ್ವವನ್ನು ಅರಿತು ಲೋಕಸಭೆ ಚುನಾವಣೆಯಲ್ಲಿ ರಕ್ಷಾರಾಮಯ್ಯಗೆ ಮತ ಹಾಕುವಂತೆ ಮುಖಂಡರು ಮತದಾರರ ಮನವೊಲಿಸಬೇಕು ಎಂದರು.ಕಳೆದ ಹತ್ತು ತಿಂಗಳ ಹಿಂದೆಯಷ್ಟೇ ಕ್ಷೇತ್ರದ ಶಾಸಕನಾಗಿದ್ದೇನೆ. ಆದರೂ ಮಂತ್ರಿಗಳ ಬೆನ್ನು ಬಿದ್ದು 1000 ಕೋಟಿ ಅನುದಾನ ತಂದಿದ್ದು ಈಗಾಗಲೇ ಕೆಲವು ಕಡೆ ಕಾಮಗಾರಿಗಳು ನಡೆಯುತ್ತಿವೆ. 15 ವರ್ಷಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಂದೂ ಶಾಶ್ವತ ಕಾಮಗಾರಿ ಮಾಡಿಲ್ಲವೆಂದು ಜನರಿಗೆ ತಿಳಿಸಬೇಕಿದೆ ಎಂದರು.
ಕಾಂಗ್ರೆಸ್ ಮುಖಂಡ ಗೋವಿಂದರಾಜು ಮಾತನಾಡಿ, ಸೋಂಪುರ ಹೋಬಳಿಯಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಲೀಡ್ ಬಂದಿದೆ. ಈ ಚುನಾವಣೆಯಲ್ಲಿಯೂ ಹೆಚ್ಚು ಮತ ಹಾಕಿ ಶಾಸಕರ ಕೈ ಬಲಪಡಿಸುತ್ತೇವೆ ಎಂದರು.ಸಭೆಯಲ್ಲಿ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಮಾಜಿ ಗ್ರಾಪಂ ಅಧ್ಯಕ್ಷರಾದ ಅಗಳಕುಪ್ಪೆ ಗೋವಿಂದರಾಜು, ಅಂಚೆಮನೆ ಪ್ರಕಾಶ್, ವೀರಸಾಗರ ಗಂಗರುದ್ರಯ್ಯ, ಬರಗೇನಹಳ್ಳಿ ನಾರಾಯಣ್, ಹೊಸನಿಜಗಲ್ ಸಿದ್ದರಾಜು, ಹನುಮಂತರಾಜು, ಲಕ್ಕೂರು ಸಿದ್ದರಾಜು, ಸುರೇಶ್, ಗ್ರಾಪಂ ಸದಸ್ಯರಾದ ದಿನೇಶ್ ನಾಯಕ್, ಮನುಪ್ರಸಾದ್, ಪಾರ್ಥಸಾರಥಿ, ಜಗದೀಶ್, ರಾಜಣ್ಣ, ಮಹದೇವಯ್ಯ ಕಾರ್ಯಕರ್ತರಿದ್ದರು.ಪೋಟೋ 1 : ಶಿವಗಂಗೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಹೊನ್ನೇನಹಳ್ಳಿ ಹಾಗೂ ಶಿವಗಂಗೆ ಗ್ರಾಪಂ ವ್ಯಾಪ್ತಿಯ ಮುಖಂಡರ ಸಭೆಯಲ್ಲಿ ಶಾಸಕ ಶ್ರೀನಿವಾಸ್ ಮಾತನಾಡಿದರು.