ಭೈರವಿ ನಾಟ್ಯಶಾಲೆಯ ವರ್ಣ ಕಾರ್ಯಾಗಾರ ಯಶಸ್ವಿ ಸಮಾಪನ

KannadaprabhaNewsNetwork |  
Published : Jun 08, 2025, 02:39 AM ISTUpdated : Jun 08, 2025, 02:40 AM IST
11 | Kannada Prabha

ಸಾರಾಂಶ

ಕಲಿಕಾರ್ಥಿಗಳಿಗೆ ಹೆಚ್ಚಿನ ರೀತಿಯಲ್ಲಿ ಮನದಟ್ಟು ಮಾಡಿಸಲು ಗುರು ಸತ್ಯನಾರಾಯಣ ರಾಜು ಅವರೇ ಅಷ್ಟರಾಗ ಮಾಲಿಕಾ ವರ್ಣವನ್ನು ಅಭಿನಯಿಸಿ ಪ್ರಸ್ತುತ ಪಡಿಸಿದರು

ಕನ್ನಡಪ್ರಭ ವಾರ್ತೆ ಮೈಸೂರು ಭೈರವಿ ನಾಟ್ಯಶಾಲೆ ಆಯೋಜಿಸಿದ್ದ ವರ್ಣ ಕಾರ್ಯಾಗಾರವು ವಿಜಯನಗರದ ತ್ರಿಪುರ ಪಾಠಶಾಲೆಯಲ್ಲಿ ಯಶಸ್ವಿಯಾಗಿ ಸಮಾಪನಗೊಂಡಿತು. ನೃತ್ಯ ಗುರುಗಳಾದ ಶೀಲಾ ಶ್ರೀಧರ್, ಡಾ. ತುಳಸಿ ರಾಮಚಂದ್ರ, ಬದರಿ ದಿವ್ಯ ಭೂಷಣ್ ಉಪಸ್ಥಿತಿಯಲ್ಲಿ ಚಾಲನೆಗೊಂಡ ಕಾರ್ಯಾಗಾರದಲ್ಲಿ ವಿಶ್ವಖ್ಯಾತಿಯ ಭರತನಾಟ್ಯ ವಿದ್ವಾಂಸ, ಬೆಂಗಳೂರಿನ ಸಂಸ್ಕೃತಿ-

ಟೆಂಪಲ್ ಆಫ್ ಆರ್ಟ್ಸ್ ನೃತ್ಯ ಸಂಸ್ಥೆಯ ಗುರು ಸತ್ಯನಾರಾಯಣ ರಾಜು ಅವರು ಅಷ್ಟರಾಗಮಾಲಿಕ ವರ್ಣವನ್ನು ಸೂಕ್ಷ್ಮವಾಗಿ ವಿವರಿಸಿದರು. ಮೂರು ದಿನಗಳ ಕಾರ್ಯಾಗಾರದಲ್ಲಿ ಅವರು ಪ್ರಾತ್ಯ ಪ್ರಾತ್ಯಕ್ಷಿಕೆ ಸಹಿತವಾಗಿ ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮಾಡಿದ್ದು, ಗಮನ ಸೆಳೆಯಿತು.

ಕಲಿಕಾರ್ಥಿಗಳಿಗೆ ಹೆಚ್ಚಿನ ರೀತಿಯಲ್ಲಿ ಮನದಟ್ಟು ಮಾಡಿಸಲು ಗುರು ಸತ್ಯನಾರಾಯಣ ರಾಜು ಅವರೇ ಅಷ್ಟರಾಗ ಮಾಲಿಕಾ ವರ್ಣವನ್ನು ಅಭಿನಯಿಸಿ ಪ್ರಸ್ತುತ ಪಡಿಸಿದರು.ಬಹಳ ಅಚ್ಚುಕಟ್ಟಾದ ನೃತ್ಯ, ಲೀಲಾಜಾಲವಾಗಿ ಮೂಡಿಬಂದ ಅಭಿನಯಕ್ಕೆ ಶಿಬಿರಾರ್ಥಿಗಳು ಮಂತ್ರಮುಗ್ಧರಾಗಿದ್ದರು. ಸೂಕ್ಷ್ಮವಾದ ಸಂಚಾರಿ ಭಾವಗಳು ಎಲ್ಲರನ್ನೂ ಭಾವನಾ ಲೋಕಕ್ಕೆ ಕೊಂಡೊ ಯ್ದಿದ್ದವು. 8 ಜಾತಿಗಳನ್ನು ಒಳಗೊಂಡ ವರ್ಣವನ್ನು ಅವರು ಮನೋಜ್ಞವಾಗಿ ಪಡ ಮೂಡಿಸಿದರು.

ಕವಿ ಎಚ್ಎಸ್ವಿ ಸಂಸ್ಕರಣೆ- ಇತ್ತೀಚಿಗೆ ನಿಧನರಾದ ಖ್ಯಾತ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರನ್ನು ನೆನೆದ ವಿದ್ವಾನ್ ಸತ್ಯನಾರಾಯಣ ರಾಜು ಅವರ ಎರಡು ಭಾವಗೀತೆಗೆ ಜೀವ - ಭಾವ ತುಂಬಿ ಅಭಿನಯವನ್ನು ಹೊರ ಹೊಮ್ಮಿಸಿದರು.ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು, ಪ್ರಸ್ತುತಿಯ ಸಮಯದಲ್ಲಿ ಎಲ್ಲರ ಕಣ್ಣು ಒದ್ದೆಯಾದವು. ಇಷ್ಟು ಕಾಲ ಒಟ್ಟಿಗಿದ್ದು.., ಗೀತೆಗೆ ನೃತ್ಯ ವನ್ನು ಮಾಡುವ ಸಂದರ್ಭದಲ್ಲಿಯು ವಿದ್ವಾನ್ ಸತ್ಯನಾರಾಯಣ ರಾಜು ಅವರು ಕಲಾ ರಸಿಕರನ್ನು ಮಂತ್ರ ಮುಗ್ಧಗೊಳಿಸಿದರು.ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಗದ್ ವಿಖ್ಯಾತ ವಿದುಷಿ, ಪದ್ಮಶ್ರೀ ಪುರಸ್ಕೃತರಾದ ಚಿತ್ರಾ ವಿಶ್ವೇಶ್ವರನ್ ಮಾತನಾಡಿ, ಕಲಾ ಅಭಿವ್ಯಕ್ತಿಯು ಯುವ ಪೀಳಿಗೆಯಲ್ಲಿ ಬೇ ರೂರಬೇಕು ಎಂದರೆ ಗುರು ಪರಂಪರೆ ಅನುಸರಣೆ ಬಹಳ ಮುಖ್ಯ ಎಂದರು.

ದೈನಂದಿನ ನೃತ್ಯ ತರಗತಿಗಳ ಜೊತೆ ಜೊತೆಗೆ ಪ್ರಖ್ಯಾತ ಕಲಾವಿದರಿಂದ ಕಾರ್ಯಾಗಾರಗಳನ್ನು ಆಗಾಗ ಆಯೋಜನೆ ಮಾಡುವುದು ಉನ್ನತ ಮಠದ ಕಲಿಕೆಗೆ ಪೂರಕವಾಗಲಿದೆ ಎಂದರು. ನಂತರ ಅವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ಹಿಮ್ಮೇಳ ಕಲಾವಿದರ ಸಹಕಾರ: ಕಾರ್ಯಕ್ರಮಕ್ಕೆ ಜೀವ ತುಂಬಿದ ಹಿಮ್ಮೇಳದಲ್ಲಿ ವಸುಧಾ ಬಾಲಕೃಷ್ಣ - ಹಾಡುಗಾರಿಕೆ, ಭರತ್ ನಾರಾಯಣ್ - ನಟುವಾಂಗ, ವಿನಯ್ ನಾಗರಾಜ್ - ಮೃದಂಗ, ಕಾರ್ತಿಕ್ ಸಾತವಲ್ಲಿ - ಕೊಳಲು ಗಮನ ಸೆಳೆದರು. ತ್ರಿಪುರ ಪಾಠ ಶಾಲೆಯ ವಿದುಷಿ ಗೌರಿ ಸೇತುರಾಮ್ ಅವರಿಗೆ ಕಾರ್ಯಕ್ರಮ ಆಯೋಜಕರಾದ ಭರತ್ ನಾರಾಯಣ ಗೌರವಿಸಿದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ