ಕನ್ನಡಪ್ರಭ ವಾರ್ತೆ ಕಲಬುರಗಿ
12ನೇ ಶತಮಾನದ ಶರಣರ ವಚನಗಳನ್ನು ನಾವಿಂದು ನೋಡುತ್ತೇವೆ ಓದುತ್ತೀವೆ ಎಂದರೆ ವಚನ ಸಾಹಿತ್ಯವನ್ನು ಸಂಶೋಧನೆ ಮಾಡಿ ಅದಕ್ಕೆ ಒಂದು ರೂಪ ಕೊಟ್ಟು. ಬೆಳಕಿಗೆ ತಂದ ವಚನ ಪಿತಾಮಹ ಫಗು ಹಳಕಟ್ಟಿವರ ಶ್ರಮ ನಾವು ಮರೆವಂತಿಲ್ಲ ಎಂದು ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಆಳಂದ ವಿಧಾನಸಭೆ ಶಾಸಕ ಬಿ.ಆರ್. ಪಾಟೀಲ್ ಅವರು ಹೇಳಿದರು.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯ್ತಿ, ಕಲಬುರಗಿ ಇವರ ಆಶ್ರಯದಲ್ಲಿ ಡಾ. ಫ.ಗು. ಹಳಕಟ್ಟಿಯವರ 145ನೇ ಜನ್ಮದಿನ ‘ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’ಯ ಮಂಗಳವಾರದಂದು ಇಲ್ಲಿನ ಎಸ್.ಎಂ. ಪಂಡಿತ ರಂಗ ಮಂದಿರದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಕಲ್ಯಾಣದಲ್ಲಿ ಕ್ರಾಂತಿಯಾದಾಗ ಅದೆಷ್ಟೋ ವಚನಗಳ ತಾಡೋಲೆಗಳು ಬೆಂಕಿಗೆ ಸುಟ್ಟು. ಹೊದವು ಅಳಿದುಳಿದ ವಚನದ ತಾಡೋಲೆಗಳನ್ನು ರಕ್ಷಿಸಿದರು ಹರಿದ ಸುಟ್ಟು. ಹೋದ ವಚನದ ತಾಡೋಲೆಗಳನ್ನು ಸಂಗ್ರಹಿಸಿ ಸಂಶೋಧನೆ ಮಾಡಿ ವಚನ ಸಾಹಿತ್ಯ ಬೆಳಕಿಗೆ ತಂದರು ನಂತರ ವಚನ ಸಾಹಿತ್ಯವನ್ನು ಈಗಿನ ಯುವ ಪೀಳಿಗೆಯವರಿಗೆ ಮುಖ್ಯವಾಗಿ ಅವರ ಬಗ್ಗೆ ಸೆಮಿನಾರ, ಡಿಬೇಟ್, ಚರ್ಚೆ ಸಂವಾದ ಮಾಡಿಸಬೇಕು ಎಂದರು.ಮೀನಾಕ್ಷಿ ಬಾಳಿ ವಿಶೇಷ ಉಪನ್ಯಾಸ ನೀಡಿದರು. ದಕ್ಷಿಣ ಕಲಬುರಗಿ ವಿಧಾನಸಭಾ ಶಾಸಕ ಅಲ್ಲಮ ಪ್ರಭು ಪಾಟೀಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ದತ್ತಪ್ಪ ಸಾಗನೂರ, ಸೇರಿದಂತೆ ವಚನ ಸಾಹಿತ್ಯ ಸಮಿತಿ ಅಧ್ಯಕ್ಷರು ಶರಣಪ್ಪ ನಾಗಪ್ಪ ಜೆನವೇರಿ, ಸಮಾಜ ಮುಖಂಡರಾದ ರವೀಂದ್ರ ಶಹಾಬಾದಿ, ವಡ್ಡಣಗೇರೆ ಹಾಗೂ ಶಂಕರ ಹೂಗಾರವರು ನಾಡಗೀತೆ ಹಾಡಿದರು. ವಿನೋದ ಜೆನವೇರಿ ವಂದಿಸಿದರು.