ಹರ್ ಘರ್ ತಿರಂಗಾ ಅಭಿಯಾನ: ಚುಕ್ಕೆ ಚಿತ್ತಾರದಲ್ಲಿ ಭಾರತ

KannadaprabhaNewsNetwork | Published : Aug 15, 2024 1:59 AM

ಸಾರಾಂಶ

ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ನಗರದ ಗ್ಲಾಸ್ ಹೌಸ್‍ನಲ್ಲಿ ಬುಧವಾರ ರಂಗೋಲಿ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ 52 ವಿವಿಧ ಬಗೆಯ ರಂಗೋಲಿ ಚಿತ್ತಾರಗಳನ್ನು ಬಿಡಿಸಲಾಗಿತ್ತು. ಈ ಪೈಕಿ ಅತ್ಯುತ್ತಮವಾಗಿ ಬಿಡಿಸಿದ ರಂಗೋಲಿಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಬಹುಮಾನ ವಿತರಿಸಿದರು.

- ಗಡಿ ಕಾಯುವ ಸೈನಿಕ, ಗಂಡನಿಗಾಗಿ ಕಾದ ಗರ್ಭಿಣಿ ರಂಗೋಲಿಗೆ ಪ್ರಥಮ ಬಹುಮಾನ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ನಗರದ ಗ್ಲಾಸ್ ಹೌಸ್‍ನಲ್ಲಿ ಬುಧವಾರ ರಂಗೋಲಿ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ 52 ವಿವಿಧ ಬಗೆಯ ರಂಗೋಲಿ ಚಿತ್ತಾರಗಳನ್ನು ಬಿಡಿಸಲಾಗಿತ್ತು. ಈ ಪೈಕಿ ಅತ್ಯುತ್ತಮವಾಗಿ ಬಿಡಿಸಿದ ರಂಗೋಲಿಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಬಹುಮಾನ ವಿತರಿಸಿದರು.

ಸ್ಪರ್ಧೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಮಹಿಳೆಯರು, ಗೃಹಿಣಿಯರು, ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ರಂಗೋಲಿಯಲ್ಲಿ ತ್ರಿವರ್ಣದಲ್ಲಿ ಬಿಡಿಸಲಾಗಿದ್ದು ಒಬ್ಬೊಬ್ಬರು ಒಂದೊಂದು ದೇಶಭಕ್ತಿ ಕಲ್ಪನೆಯೊಂದಿಗೆ ರಂಗೋಲಿ ಬಿಡಿಸಿದ್ದರು.

ವಿವಿಧ ದೇಶ ಭಕ್ತಿ ಮೂಡಿಸುವ 52 ಚಿತ್ತಾರಗಳಲ್ಲಿ ಅತ್ಯುತ್ತಮ ಕಲ್ಪನೆ ಮತ್ತು ಚನ್ನಾಗಿ ಬಿಡಿಸಿದ ಹಳೆ ಚಿಕ್ಕನಹಳ್ಳಿ ನಾಗಮ್ಮ ಹಾಗೂ ಒಂದೆಡೆ ದೇಶ ಕಾಯುವ ಸೈನಿಕರು, ಮತ್ತೊಂದೆಡೆ ತನ್ನ ಗಂಡನಿಗಾಗಿ ಕಾಯುತ್ತಿರುವ ಗರ್ಭಿಣಿ ಚಿತ್ರವು ದೇಶಭಕ್ತಿ ಮತ್ತು ಮನಮಿಡಿಯುವಂತಿತ್ತು. ಸ್ಪರ್ಧೆಯಲ್ಲಿ ಈ ರಂಗೋಲಿ ಪ್ರಥಮ ಬಹುಮಾನ ಗಳಿಸಿತು.

ಎರಡನೇ ಬಹುಮಾನಕ್ಕೆ ಸಂಧ್ಯಾ ಬಿಡಿಸಿದ ವಿವಿಧತೆಯಲ್ಲಿ ಏಕತೆಯ ಗೌರವ, ಮೇರಾ ಭಾರತ್ ಮಹಾನ್ ರಂಗೋಲಿ ಮತ್ತು ತೃತೀಯ ಬಹುಮಾನವಾಗಿ ಸೌಭಾಗ್ಯ ಬಿಡಿಸಿದ ನನ್ನ ಧ್ವಜ ಸದಾ ಮೇಲೆ ಮತ್ತು ವನಜಾಕ್ಷಿ, ಮಂಜುಳಾ, ಸುಶೀಲಾ ಬಿಡಿಸಿದ ರಂಗೋಲಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ, ತೋಟಗಾರಿಕೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ತೀರ್ಪುಗಾರರಾಗಿ ಕೆ.ಆರ್.ವಸಂತ, ಶಾಂತಯ್ಯ ಮಠ್, ರೇಷ್ಮಾ ಪರ್ವೀನ್ ಕಾರ್ಯ ನಿರ್ವಹಿಸಿದರು.

- - - -14ಕೆಡಿವಿಜಿ17:

ದಾವಣಗೆರೆ ಗಾಜಿನ ಮನೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನದಡಿ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯ ಚಿತ್ತಾರಗಳನ್ನು ಡಿಸಿ ಗಂಗಾಧರಸ್ವಾಮಿ, ಜಿಪಂ ಸಿಇಒ ಸುರೇಶ ಇಟ್ನಾಳ್‌ ವೀಕ್ಷಿಸಿದರು. -14ಕೆಡಿವಿಜಿ18:

ದಾವಣಗೆರೆ ಗಾಜಿನ ಮನೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನದಡಿ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು ಪಾಲ್ಗೊಂಡು ಕಲಾವಂತಿಕೆ ಮೆರೆದರು.

Share this article