ಜಿಲ್ಲಾ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ವೀರಭದ್ರಪ್ಪ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಆಗ್ರಹ । ಕ್ಯಾನ್ಸರ್ ರೋಗಿಗಳಿಗೆ ಬೆಳಕುಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಯ ಹಿಮ್ಸ್ ಸಂಸ್ಥೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ವಿವಿಧ ಚಿಕಿತ್ಸಾ ವಿಧಾನಗಳು ಲಭ್ಯತೆಯಿದೆ. ಈಗ ಕ್ಯಾನ್ಸರ್ ಕೇಂದ್ರ ಹಿಮ್ಸ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡಲು ತುರ್ತು ಆದೇಶ ಮಾಡಬೇಕು ಎಂದು ಜಿಲ್ಲಾ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ವೈ.ಎಸ್. ವೀರಭದ್ರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಕೆ. ಮಂಜುನಾಥ್ ಒತ್ತಾಯಿಸಿದರು.ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ೨೦೨೩ರ ನವೆಂಬರ್ ತಿಂಗಳಲ್ಲಿ ಹಾಸನದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕ್ಯಾನ್ಸರ್ ಸಂಬಂಧಿತ ತಪಾಸಣೆ ಹಾಗೂ ಚಿಕಿತ್ಸೆಗಳ ಕೇಂದ್ರ ಸ್ಥಾಪನೆಯಾಗಿದೆ. ಕ್ಯಾನ್ಸರ್ ಚಿಕಿತ್ಸೆಯೂ ಹಿಮ್ಸ್ ಸಿಬ್ಬಂದಿಯ ನೇಮಕಾತಿಯ ಮೂಲಕವೇ ಪ್ರಾರಂಭವಾಗಿದೆ. ೨೦೧೯ ರಿಂದ ಇಂದಿನ ವರೆಗೆ ಪೂರ್ಣ ಪ್ರಮಾಣದ ಸಲಹಾ ಕೇಂದ್ರ ಹಾಗೂ ಪೂರ್ಣ ಪ್ರಮಾಣದ ಉಚಿತ ಕಿಮೋಥೆರಪಿ ಚಿಕಿತ್ಸಾ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಹಸ್ರಾರು ಕ್ಯಾನ್ಸರ್ ರೋಗಿಗಳ ಬಾಳಿನಲ್ಲಿ ದಾರಿ ದೀಪವಾಗಿ ಬೆಳಕು ನೀಡುವಲ್ಲಿ ಸಫಲವಾಗಿದೆ ಎಂದು ಹೇಳಿದರು.
ಹಿರಿಯ ನಾಗರಿಕರ ವೇದಿಕೆ ಸದಸ್ಯ ಜಗದೀಶ್ ಮಾತನಾಡಿ, ‘ಹಿಮ್ಸ್ ಸಿಬ್ಬಂಧಿಯ ಹಾಗೂ ಎಸ್.ವಿ.ವೈ.ಎಂ. ನ ಈ ನಿಸ್ವಾರ್ಥ ಸೇವೆಯೂ ಹಾಸನದ ಅನೇಕ ಸಂಸಾರಗಳಲ್ಲಿ ಸಾಚಿತ್ವನದ ಬೆಳಕಾಗಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿ ಉಚಿತವಾಗಿ ಸೇವೆ ಸಲ್ಲಿಸುತ್ತಿದೆ. ಇನ್ನೊಂದು ತಿಂಗಳೊಳಗೆ ಕಾರಣಾಂತರಗಳಿಂದ ಮತ್ತೊಮ್ಮೆ ನೆನೆಗುದಿಗೆ ಬಿದ್ದಿದ್ದ ರೇಡಿಯೋಥೆರಪಿ ಚಿಕಿತ್ಸೆಯನ್ನು ಪೂರ್ಣ ಹಾಗೂ ಇನ್ನೂ ಉತ್ತಮ ಪ್ರಮಾಣದಲ್ಲಿ ಬಾಬಾ ಟ್ರಾನ್-೩ ಎಂಬ ಟೆಲಿಕೋಬಟ್ ವಿಕಿರಣ ಚಿಕಿತ್ಸೆ ಯಂತ್ರದ ಮೂಲಕ ನೀಡಲು ಸಿದ್ಧತೆ ನಡೆಯುತ್ತಿದೆ’ ಎಂದು ಹೇಳಿದರು.ಇದೇ ಕೇಂದಕ್ಕೆ ಇನ್ನೂ ಹೆಚ್ಚುವರಿ ಹಾಗೂ ಪರಿಪೂರ್ಣವಾದ ರೇಡಿಯೋ ಥೆರಪಿ ಚಿಕಿತ್ಸೆ ದೊರಕಿಸಿಕೊಡಲೆಂದು ಲೀನಿಯರ್ ಹಾಗೂ ಬ್ರೇಕಿ ಥೆರಪಿ ಚಿಕಿತ್ಸೆಗಳು ಈ ಹಿಂದೆ ೨೦೧೮ ರಲ್ಲಿ ಸರ್ಕಾರಕ್ಕೆ ಕೋರಿ ಬರೆಯಲಾಗಿದ್ದ ಯೋಜನೆ ಪರಿಪೂರ್ಣವಾಗದೆ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದಕ್ಕಾಗಿ ಸರ್ಕಾರದಿಂದ ೧೮.೨೫ ಕೋಟಿ ರು. ಆದೇಶ ಸಿಕ್ಕಿದ್ದರೂ ಇದರಲ್ಲಿ ೫ ಕೋಟಿ ರು. ಹಿಮ್ಸ್‌ಗೆ ಈಗಾಗಲೇ ಬಂದಿರುತ್ತದೆ. ಕೊರೋನಾ ಸ್ಥಿತಿಗಳಿಂದಾಗಿ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಇದರ ವೆಚ್ಚ ೧೮.೨೫ ಕೋಟಿ ರು.ನಿಂದ ಸುಮಾರು ೩೭ ಕೋಟಿ ರು.ಗೆ ಜಿಗಿದಿತ್ತು. ಇದರ ಬಗ್ಗೆ ಹಿಮ್ಸ್ ನಿರ್ದೇಶಕ ಹಾಗೂ ಡಿಎಂಇ ಮತ್ತು ಎಲ್ಲಾ ವಿಶೇಷ ತಜ್ಞರ ಜತೆ ಅನೇಕ ಸಭೆಗಳು ನೆಡೆದವು. ಇತ್ತೀಚೆಗೆ ನಡೆದ ಸಭೆಯಲ್ಲಿ ಯೋಜನೆ ಮುಂದುವರಿಕೆಗೆ ಬೇಕಾದ ೩೭ ಕೋಟಿ ರು. ಅನ್ನು ಪುನಃ ಪರಿಶೀಲಿಸಿ ನೀಡುವುದಕ್ಕಾಗಿ ಮೂರು ಜನರ ಸಮಿತಿಗೆ ಕೋರಲಾಗಿದೆ. ಆದ್ದರಿಂದ ಒಪ್ಪಿಗೆಯ ಹಚಿತದಲ್ಲಿರುವ ಬಾಬಾ ಟ್ರಾನ್-೩೧ ಎಂಬ ರೇಡಿಯೋ ಥೆರಪಿ ಕೋಬಾಲ್ಟ್ ಮಿಷನ್ ಅನ್ನು ಶೀಘ್ರವೇ ಲೋಕಾರ್ಪಣೆ ಮಾಡಿಸಲು ತಮ್ಮಲ್ಲಿ ಮನವಿ ಮಾಡುತ್ತೇವೆ ಎಂದು ಹೇಳಿದರು.ಈಗಾಗಲೇ ಹಿಮ್ಸ್ ಕ್ಯಾನ್ಸರ್ ಕೇಂದ್ರದ ಮುಖ್ಯಸ್ಥ ಡಾ. ರವಿಕಿರಣ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆ ತೆರವಾಗಲಿರುವ ಸ್ಥಾನ ಹಾಗೂ ಇತರ ಖಾಲಿ ಇರುವ ಸ್ಥಾನಗಳಿಗೆ ಶೀಘ್ರ ನೇಮಕ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಹಿರಿಯ ನಾಗರಿಕರ ವೇದಿಕೆ ಉಪಾಧ್ಯಕ್ಷ ಬಾಳ್ಳುಗೋಪಾಲ್, ಸದಸ್ಯರಾದ ಮಹಾಲಕ್ಷ್ಮಿ ದೊಡ್ಡಯ್ಯ, ಡಾ.ಹೇಮಾಲತಾ, ಖಜಾಂಚಿ ಕೆ. ರಮೇಶ್ ಇದ್ದರು.ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ವೀರಭದ್ರಪ್ಪ.