ರಟ್ಟೀಹಳ್ಳಿ: ಸಹಕಾರಿ ಕ್ಷೇತ್ರ ಹಾಗೂ ಕೆಎಂಎಫ್ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಹಾವೆಮುಲ್ ನೂತನ ನಿರ್ದೇಶಕ ಎ.ಕೆ. ಪಾಟೀಲ್ ಅಭಿಪ್ರಾಯಪಟ್ಟರು.ಪಟ್ಟಣದ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಹಕಾರಿ ಕ್ಷೇತ್ರಗಳು ಹಾಗೂ ಹಾಲು ಒಕ್ಕೂಟ ಸಂಘಗಳು ಪ್ರಮುಖ ಉದ್ದೇಶ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವುದು. ಆ ನಿಟ್ಟಿನಲ್ಲಿ ಸಹಕಾರಿ ಸಂಘಗಳ ಮೂಲಕ ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಮತ್ತೆ ಸಾಲ ಮರುಪಾವತಿ ಮಾಡಿದರೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯವಾಗುವುದು ಎಂದರು.
ಇತ್ತೀಚೆಗೆ ನಡೆದ ಕೆಎಂಫ್ ಚುನಾವಣೆಯಲ್ಲಿ ತಾಲೂಕಿನಿಂದ ನನ್ನನ್ನು ಆಯ್ಕೆ ಮಾಡಿದ್ದು, ಸಂತೋಷ ಉಂಟು ಮಾಡಿದ್ದು, ಶಕ್ತಿಮೀರಿ ಜಿಲ್ಲೆಯ ಹಾಲು ಒಕ್ಕೂಟದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.ರಟ್ಟೀಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂದೀಪ ಪಾಟೀಲ್ ಮಾತನಾಡಿ, ನೂತನವಾಗಿ ಕೆಎಂಎಫ್ ನಿರ್ದೇಶಕರಾಗಿ ಆಯ್ಕೆಯಾದ ಎ.ಕೆ. ಪಾಟೀಲ್ ಅವರು ನಿರ್ದೇಶಕ ಸ್ಥಾನಕ್ಕೆ ಅತ್ಯಂತ ಸೂಕ್ತ ವ್ಯಕ್ತಿ. ತಾಲೂಕಿನಲ್ಲಿ ಒಟ್ಟು 47 ಹಾಲಿನ ಸೊಸೈಟಿಗಳಿವೆ. ಎಲ್ಲ ಸೊಸೈಟಿಗಳನ್ನು ಹಂತ- ಹಂತವಾಗಿ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ರಾಮಪ್ಪ ಸಾವಕ್ಕನವರ, ಸದಸ್ಯರಾದ ದೊಡ್ಡಗೌಡ ಪಾಟೀಲ, ಗಣೇಶ ಅಡ್ಮನಿ, ವೀರನಗೌಡ ಪ್ಯಾಟಿಗೌಡ್ರ, ಪಿ.ಡಿ. ಬಸನಗೌಡ್ರ, ವಸಂತ ದ್ಯಾವಕ್ಕಳವರ, ಗಣೇಶ ವೇರ್ಣೆಕರ್, ಕಮಲಮ್ಮ ಬೆನ್ನೂರ, ಗೀತಾ ಪುಟ್ಟಣ್ಣನವರ, ಪಂಚಾಕ್ಷರಯ್ಯ ಕಬ್ಬಿಣಕಂತಿಮಠ, ರಮೇಶ ಭೀಮಪ್ಪನವರ, ಕಾರ್ಯದರ್ಶಿ ಚಂದ್ರಣ್ಣ ಮಳಗೊಂಡರ, ಮಾಲತೇಶ ಪಾಟೀಲ್, ರಾಜು ಬೆನ್ನೂರ, ಯೋಗಿ ಮುಂತಾದವರು ಇದ್ದರು.ಶ್ರದ್ಧಾಭಕ್ತಿಯ ರಾಮನವಮಿ
ಹಾನಗಲ್ಲ: ಇಲ್ಲಿನ ಶಂಕರಮಠದ ಬಳಿಯ ಶ್ರೀರಾಮ ದೇವರ ದೇವಸ್ಥಾನದಲ್ಲಿ ಶ್ರದ್ಧೆ, ಭಕ್ತಿಯಿಂದ ರಾಮನವಮಿ ಆಚರಿಸಲಾಯಿತು.ಮುಕುಂದ ಭಟ್ ಕಾಗಿನೆಲೆ, ಗಂಗಾಧರ ಶಾಸ್ತ್ರಿ ಕಾಶಿಕರ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯ, ಧಾರ್ಮಿಕ ವಿಧಿವಿಧಾನಗಳು, ತೊಟ್ಟಿಲೋತ್ಸವ, ರಾಮತಾರಕ ಜಪ ನೆರವೇರಿದವು.ಶಾಸಕ ಶ್ರೀನಿವಾಸ ಮಾನೆ ದೇವಸ್ಥಾನಕ್ಕೆ ಭೇಟಿ ನೀಡಿ ರಾಮದೇವರ ದರ್ಶನ ಪಡೆದರು. ಪ್ರಮುಖರಾದ ಪ್ರಮೋದ ದೇಸಾಯಿ, ಘನಶಾಮ್ ದೇಶಪಾಂಡೆ, ಉದಯ ದೇಸಾಯಿ, ವಿನಯ ಬಂಕನಾಳ, ವಿದ್ಯಾಶಂಕರ ದೇಶಪಾಂಡೆ, ಲಕ್ಷ್ಮೀಬಾಯಿ ದೇಸಾಯಿ, ಮುರುಳೀಧರ ಕಾಮನಹಳ್ಳಿ ಸೇರಿದಂತೆ ಇತರರು ಇದ್ದರು.