ಧಾರ್ಮಿಕ ವಿಚಾರಗಳಿಂದ ಆರೋಗ್ಯ ಸುಧಾರಣೆ ಸಾಧ್ಯ

KannadaprabhaNewsNetwork |  
Published : Jan 16, 2025, 12:50 AM IST
ಪಟ್ಟಣದ ಬನಶಂಕರಿ ದೇವಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆಯಂದು ಶ್ರೀ ಬನಶಂಕರಿ ದೇವಿ ರಥೋತ್ಸವ, ಶ್ರೀ ವೀರಭದ್ರೇಶ್ವರ ಸ್ವಾಮಿ ಷರಭೀ ಗುಗ್ಗಳ ಮತ್ತು ಶ್ರೀ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ಧರ್ಮಸಭೆಯ ಸಾನಿಧ್ಯವನ್ನು ಹೊನ್ನಾಳಿ ಹಿರೇಕಲ್ಮಠದ ಶ್ರೀ ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. | Kannada Prabha

ಸಾರಾಂಶ

ಪ್ರತಿ ಮನುಷ್ಯ ಜೀವನದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕು. ಆ ಮೂಲಕ ವಿಚಾರ ಧಾರೆಗಳನ್ನು ಕೇಳುತ್ತಿದ್ದರೆ, ಅದರ ಪ್ರತಿಫಲವಾಗಿ ಉತ್ತಮ ಆರೋಗ್ಯ ಲಭಿಸುತ್ತದೆ ಎಂದು ಹೊನ್ನಾಳಿ ಹಿರೇಕಲ್ಮಠದ ಶ್ರೀ ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.

- ಶ್ರೀ ಆಂಜನೇಯ ಜಾತ್ರೋತ್ಸವ ಧರ್ಮಸಭೆಯಲ್ಲಿ ಹಿರೇಕಲ್ಮಠ ಶ್ರೀ ಅಭಿಮತ - - - ಕನ್ನಡಪ್ರಭ ವಾರ್ತೆ ನ್ಯಾಮತಿ

ಪ್ರತಿ ಮನುಷ್ಯ ಜೀವನದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕು. ಆ ಮೂಲಕ ವಿಚಾರ ಧಾರೆಗಳನ್ನು ಕೇಳುತ್ತಿದ್ದರೆ, ಅದರ ಪ್ರತಿಫಲವಾಗಿ ಉತ್ತಮ ಆರೋಗ್ಯ ಲಭಿಸುತ್ತದೆ ಎಂದು ಹೊನ್ನಾಳಿ ಹಿರೇಕಲ್ಮಠದ ಶ್ರೀ ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಪಟ್ಟಣದ ಬನಶಂಕರಿ ದೇವಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆಯಂದು ಶ್ರೀ ಬನಶಂಕರಿ ದೇವಿ ರಥೋತ್ಸವ, ಶ್ರೀ ವೀರಭದ್ರೇಶ್ವರ ಸ್ವಾಮಿ ಷರಭೀ ಗುಗ್ಗಳ ಮತ್ತು ಶ್ರೀ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ಧರ್ಮಸಭೆ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಪರಿಪೂರ್ಣವಾಗಿ ಭಗವಂತನ ಸೇವೆ ಮಾಡಬೇಕು. ದಿವ್ಯಜ್ಞಾನ ಹೊಂದಿರುವ ಋಷಿ, ಮುನಿಗಳ ಕಾಲಿಗೆ ನಮಸ್ಕರಿಸುವ ಸಂಸ್ಕಾರದಿಂದ, ದೇವರ ಮೇಲೆ ನಂಬಿಕೆ ಬಲಗೊಳ್ಳುವುದು. ಗುರುಗಳ ಆಶೀರ್ವಾದ ಬದುಕಿಗೆ ದಾರಿದೀಪವಾಗುತ್ತದೆ ಎಂದು ಆಶೀರ್ವಚನ ನೀಡಿದರು.

ಶ್ರೀ ಬನಶಂಕರಿ ದೇವಸ್ಥಾನ ಮುಖಂಡರಾದ ನುಚ್ಚಿನ ಎನ್‌.ಜೆ.ವಾಗೀಶ್‌ ಮಾತನಾಡಿ, ಸುಮಾರು 22 ವರ್ಷಗಳಿಂದ ಹೊನ್ನಾಳಿ ಲಿಂಗೈಕ್ಯ ಶ್ರೀ ಒಡೆಯರ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಕೃಪಾಶೀರ್ವಾದಿಂದ ಯಾವುದೇ ಅಡಚಣೆ ಇಲ್ಲದೇ, ಭಕ್ತರ ಸಹಕಾರದಿಂದ ವಿವಿಧ ಧರ್ಮಗಳ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತ, ದೇವಸ್ಥಾನ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ದೇವಸ್ಥಾನ ಸೇವಾ ಸಮಿತಿ ಮುಖಂಡರಾದ ಎನ್‌.ಡಿ. ಪಂಚಾಕ್ಷರಪ್ಪ, ಪೂಜಾರ್‌ ಚಂದ್ರಶೇಖರ್‌, ಕುಂಬಾರ ಚನ್ನಪ್ಪ, ಹೊಸಮನೆ ಮಲ್ಲಿಕಾರ್ಜುನಪ್ಪ ಕುಂಬಾರ, ಹಲಗೇರಿ ವಿರೇಶ್‌, ಹವಳದ ಲಿಂಗರಾಜು, ಕಳ್ಳಿ ನಟರಾಜ್‌ ನುಚ್ಚಿನ, ನುಚ್ಚಿನ ಗಣೇಶ್‌, ನವುಲೆ ಗಂಗಾಧರ್‌, ವಿಶಾಲಾಕ್ಷಮ್ಮ, ಬಿದರಗಡ್ಡೆ ಸತೀಶ್‌ ಮತ್ತಿತರರಿದ್ದರು.

- - - (-ಫೋಟೋ:)

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ