ಫೆ.21ಕ್ಕೆ ಆರೋಗ್ಯ ತಪಾಸಣೆ ಉಚಿತ ಶಿಬಿರ

KannadaprabhaNewsNetwork |  
Published : Feb 18, 2024, 01:31 AM IST
ಪೋಟೋ ಶೀರ್ಷಿಕೆ: 17ಎಸ್ ಎನ್ ಕೆ01 | Kannada Prabha

ಸಾರಾಂಶ

ಆಯುಷ್ಮಾನ್‌ ಭಾರತ ಕಾರ್ಡ್ ಹೊಂದಿರುವವರಿಗೆ ಕೆಎಲ್‌ಇನಲ್ಲಿ ₹5 ಲಕ್ಷದ ವರೆಗೆ ಉಚಿತ ಚಿಕಿತ್ಸೆ ವ್ಯವಸ್ಥೆ ಇದ್ದು, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಆರೋಗ್ಯ ಕರ್ನಾಟಕದ ಕಾರ್ಡಿನ ಬಗ್ಗೆ ಮಾಹಿತಿ ನೀಡಿ ನೋಂದಣಿ ಮಾಡಿಕೊಡಲಾಗುವುದು. ಆಸಕ್ತರು ಶಿಬಿರಕ್ಕೆ ಬರುವಾಗ ತಪ್ಪದೇ ತಮ್ಮ ಪಡಿತರ ಕಾರ್ಡ್, ಆಧಾರ್‌ ಕಾರ್ಡ್ ಮತ್ತು ಮೊಬೈಲ್ ತೆಗೆದುಕೊಂಡು ಬರಬೇಕು ಆಯೋಜಕರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಸಂಕೇಶ್ವರ

ಅಮಿತ ಅಣ್ಣಾ ಪ್ರಭಾಕರ ಕೋರೆ ಅಭಿಮಾನಿ ಬಳಗ ಹಾಗೂ ಕೆಎಲ್‌ಇ ಡಾ. ಪ್ರಭಾಕರ್ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಫೆ.21 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಸಮೀಪದ ಕೆಎಲ್‌ಇ ಸಿಬಿಎಸ್‌ಸಿ ಶಾಲೆ ಕಮತನೂರು ಗೇಟ್‌ನಲ್ಲಿ ಆರೋಗ್ಯ ಉಚಿತ ತಪಾಸಣೆ ಬೃಹತ್ ಶಿಬಿರ ಹಮ್ಮಿಳ್ಳಲಾಗಿದೆ ಎಂದು ಡಾ. ಅಲ್ಲಮಪ್ರಭು ಕುಡಚಿ ತಿಳಿಸಿದರು. ಕೆಎಲ್‌ಇ ಸಿಬಿಎಸ್‌ಸಿ ಶಾಲೆಯಲ್ಲಿ ಪತ್ರಿಕಾಗೋಷ್ಠಿ ಮಾಹಿತಿ ನೀಡಿದ ಅವರು, ಬಡವರಿಗೆ, ಗ್ರಾಮೀಣ ಭಾಗದವರಿಗೆ ಗುಣಮಟ್ಟದ ಆರೋಗ್ಯ ಚಿಕಿತ್ಸೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಕೆಎಲ್‌ಇ ಆಸ್ಪತ್ರೆಯಿಂದ ಹೃದಯರೊಗ, ಮೂತ್ರಕೋಶ, ಗ್ಯಾಸ್ಕೋ, ನೇತ್ರ, ಶಸ್ತ್ರ ಚಿಕಿತ್ಸೆ, ಶ್ವಾಸಕೋಶ, ಎಲುಬು ಕೀಲು, ಕಿವಿ, ಮೂಗು, ಕ್ಯಾನ್ಸರ್, ಚಿಕ್ಕ ಮಕ್ಕಳು, ಚರ್ಮರೋಗ, ದಂತರೋಗ, ಭೌತಿಕ, ಆಯುರ್ವೇದ, ಹೋಮಿಯೋಪತಿ ಸೇರಿದಂತೆ ಇತರ ಚಿಕಿತ್ಸೆಗಳ 130ಕ್ಕೂ ಅಧಿಕ ತಜ್ಞ ವೈದ್ಯರು ಆಗಮಿಸಿ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಹಾಗೂ ಶುಗರ್ ಮತ್ತು ಹಿಮೋಗ್ಲೋಬಿನ್, ಬಿಪಿ ಇಸಿಜಿ, ಇಕೋ ಉಚಿತ ತಪಾಸನೆ ನಡೆಯಲಿದ್ದು, ಉಚಿತ ಔಷಧಿ ನೀಡಲಾಗುವುದು ಎಂದರು.ಆಯುಷ್ಮಾನ್‌ ಭಾರತ ಕಾರ್ಡ್ ಹೊಂದಿರುವವರಿಗೆ ಕೆಎಲ್‌ಇನಲ್ಲಿ ₹5 ಲಕ್ಷದ ವರೆಗೆ ಉಚಿತ ಚಿಕಿತ್ಸೆ ವ್ಯವಸ್ಥೆ ಇದ್ದು, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಆರೋಗ್ಯ ಕರ್ನಾಟಕದ ಕಾರ್ಡಿನ ಬಗ್ಗೆ ಮಾಹಿತಿ ನೀಡಿ ನೋಂದಣಿ ಮಾಡಿಕೊಡಲಾಗುವುದು. ಆಸಕ್ತರು ಶಿಬಿರಕ್ಕೆ ಬರುವಾಗ ತಪ್ಪದೇ ತಮ್ಮ ಪಡಿತರ ಕಾರ್ಡ್, ಆಧಾರ್‌ ಕಾರ್ಡ್ ಮತ್ತು ಮೊಬೈಲ್ ತೆಗೆದುಕೊಂಡು ಬರಬೇಕು ಆಯೋಜಕರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಹಿರಾಶುಗರ್ಸ್‌ ನಿರ್ದೇಶಕ ಅಪ್ಪಾಸಾಹೇಬ ಶಿರಕೋಳಿ, ಪುರಸಭೆ ಸದಸ್ಯ ಸುನೀಲ ಪರ್ವತರಾವ, ಸಂಜಯ ಶಿರಕೋಳಿ, ಮುಖಂಡ ರೋಹನ್ ನೇಸರಿ, ಆನಂದ ಸಂಸುದ್ದಿ, ಮೊಯಿನಲಿ ನದಾಫ, ಶಶಿಕಾಂತ ಗಡಕರಿ, ಪ್ರವೀಣ ಮಿಶ್ರಕೋಟಿ, ಬಸವರಾಜ ಪಾಟೀಲ, ಗಣೇಶ ನಡದಗಲ್ಲಿ, ಚೇತನ ಸಂಕೇಶ್ವರಿ, ಪ್ರಿನ್ಸಿಪಾಲ್ ಬಸವರಾಜ ಕಡೇಮನಿ ಇದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ