ಆರೋಗ್ಯ ವಿಚಾರಗಳ ನಿರ್ಲಕ್ಷ್ಯ ಸಲ್ಲದು: ರಾಮಮೂರ್ತಿ

KannadaprabhaNewsNetwork | Published : Feb 21, 2024 2:03 AM

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್‌ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ ಹಾಗೂ ಶ್ರೀ ದೇವರ ದಾಸಿಮಯ್ಯ ಮಿತ್ರ ಮಂಡಲಿ ನೇಕಾರರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ 29ನೇ ಮಾಸಿಕ ಮಧುಮೇಹ ರೆಟಿನೋಪತಿ ತಪಾಸಣಾ ಶಿಬಿರವನ್ನು ಸಂಘದ ಅಧ್ಯಕ್ಷ ಎ.ರಾಮಮೂರ್ತಿ ಉದ್ಘಾಟಿಸಿದರು.

ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್‌ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ ಹಾಗೂ ಶ್ರೀ ದೇವರ ದಾಸಿಮಯ್ಯ ಮಿತ್ರ ಮಂಡಲಿ ನೇಕಾರರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ 29ನೇ ಮಾಸಿಕ ಮಧುಮೇಹ ರೆಟಿನೋಪತಿ ತಪಾಸಣಾ ಶಿಬಿರವನ್ನು ಸಂಘದ ಅಧ್ಯಕ್ಷ ಎ.ರಾಮಮೂರ್ತಿ ಉದ್ಘಾಟಿಸಿದರು.

ಅವರು ಮಾತನಾಡಿ, ಬಹುಮುಖ್ಯವಾಗಿ ಬಡ ಹಾಗೂ ಮಧ್ಯಮ ವರ್ಗದ ನೇಕಾರ ಕುಟುಂಬಗಳು ವಾಸಿಸುವ ಪ್ರದೇಶಗಳಲ್ಲಿ ಆರೋಗ್ಯ ಜಾಗೃತಿಗೆ ಹೆಚ್ಚಿನ ಒತ್ತು ನೀಡಿ ಲಯನ್ಸ್‌ ಕ್ಲಬ್‌ ಸಹಯೋಗದಲ್ಲಿ ಪ್ರತಿವರ್ಷವೂ ಮೆಗಾ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ. ಜನತೆ ಇಂದು ಆರೋಗ್ಯ ಸಂಬಂಧಿತ ವಿಚಾರಗಳನ್ನು ನಿರ್ಲಕ್ಷ್ಯ ಮಾಡದೆ ಗಮನ ಹರಿಸುವುದು ಅಗತ್ಯ. ಯಾವುದೇ ಆರೋಗ್ಯ ಸಮಸ್ಯೆಯನ್ನೂ ಆರಂಭಿಕ ಹಂತದಲ್ಲೇ ಉತ್ತಮ ಚಿಕಿತ್ಸೆ ಮೂಲಕ ಬಗೆಹರಿಸಿಕೊಳ್ಳುವ ಅವಕಾಶವಿದ್ದು, ಈ ಹಂತದಲ್ಲಿ ಉದಾಸೀನ ಧೋರಣೆ ಸಲ್ಲದು ಎಂದರು.

ಗ್ರಾಪಂ ಅಧ್ಯಕ್ಷ ದೊಡ್ಡನಂಜುಂಡಪ್ಪ ಮಾತನಾಡಿ, ಈ ಭಾಗದ ಜನತೆಗೆ ಆರೋಗ್ಯ ಜಾಗೃತಿ ಮೂಡಿಸುವ ಉತ್ತಮ ಕೆಲಸವನ್ನು ಮಾಡುತ್ತಿರುವ ಸಂಘಟನೆಗಳ ಕಾರ್ಯ ಶ್ಲಾಘನೀಯ. ಒತ್ತಡದ ಬದುಕಿನಲ್ಲಿ ಆರೋಗ್ಯ ಸಂರಕ್ಷಣೆ ಬಹುದೊಡ್ಡ ಸವಾಲಾಗಿದೆ. ಜನರು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಲಯನ್ಸ್‌ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ ಅಧ್ಯಕ್ಷ ಡಾ.ಎಂ.ಶ್ರೀನಿವಾಸರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್‌ ಪ್ರಾಂತೀಯ ಅಧ್ಯಕ್ಷ ಎಂ.ಆರ್.ಶ್ರೀನಿವಾಸ್, ವಲಯ ಅಧ್ಯಕ್ಷ ಎಲ್.ಎನ್.ಪ್ರದೀಪ್‌ಕುಮಾರ್, ಲಯನ್ಸ್‌ ಕ್ಲಬ್ ಉಪಾಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ಕಾರ್ಯದರ್ಶಿ ಮುಖೇಶ್, ಮಧುಮೇಹ ವಿಭಾಗದ ಮುಖ್ಯಸ್ಥ ಪ್ರಸನ್ನಕುಮಾರ್, ಎಲ್.ಎನ್.ನಾಗರಾಜ್, ಹರ್ಷ, ಮಂಜುನಾಥ್, ಕೆ.ಸಿ.ನಾಗರಾಜ್, ಶ್ರೀ ದೇವರ ದಾಸಿಮಯ್ಯ ಮಿತ್ರ ಮಂಡಲಿ ನೇಕಾರರ ಸಂಘದ ಉಪಾಧ್ಯಕ್ಷರಾದ ರಾಮಣ್ಣ, ಸೋಮಶೇಖರ್, ಕಾರ್‍ಯದರ್ಶಿ ರಾಮಚಂದ್ರ, ಖಜಾಂಚಿ

ಮುನಿನಾರಾಯಣಸ್ವಾಮಿ, ಸಹ ಕಾರ್ಯದರ್ಶಿ ವಿಜಯಕುಮಾರ್, ನಿರ್ದೇಶಕರಾದ ಲಕ್ಷ್ಮೀಕಾಂತ, ಬಾಬು, ಅನಿಲ್‌ಕುಮಾರ್, ಮಧುಚಂದ್ರ, ಜಯರಾಮ್, ನಾರಾಯಣಸ್ವಾಮಿ, ಅಶೋಕ್, ಶೋಭಾ, ಆರ್.ಶೋಭಾ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.ಬಾಕ್ಸ್‌...........

530 ಫಲಾನುಭವಿಗಳು ಭಾಗಿ:

ಮೆಗಾ ಆರೋಗ್ಯ ತಪಾಸಣಾ ಶಿಬಿರ ಮತ್ತು ಮಧುಮೇಹ ರೆಟಿನೋಪತಿ ತಪಾಸಣಾ ಶಿಬಿರದಲ್ಲಿ ಒಟ್ಟಾರೆ 530ಕ್ಕೂ ಹೆಚ್ಚು ಫಲಾನುಭವಿಗಳು ತಪಾಸಣೆಗೊಳಗಾದರು. ಸಾಮಾನ್ಯ ಆರೋಗ್ಯ ತಪಾಸಣೆ, ಕೀಲು-ಮೂಳೆ ರೋಗ, ಸ್ತ್ರೀ ರೋಗಗಳು, ಮಕ್ಕಳ ಆರೋಗ್ಯ ಸಮಸ್ಯೆ, ಕಣ್ಣಿನ ತಪಾಸಣೆ, ಮಧುಮೇಹ ತಪಾಸಣೆ, ರೆಟಿನೋಪತಿ ತಪಾಸಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಫಲಾನುಭವಿಗಳನ್ನು ತಜ್ಞ ವೈದ್ಯರು ತಪಾಸಣೆ ನಡೆಸಿ ವೈದ್ಯಕೀಯ ಸಲಹೆ ನೀಡಿ, ಔಷಧಗಳನ್ನು ವಿತರಿಸಿದರು. 18ಕೆಡಿಬಿಪಿ2-

ದೊಡ್ಡಬಳ್ಳಾಪುರದ ದರ್ಗಾಜೋಗಿಹಳ್ಳಿಯಲ್ಲಿ ಲಯನ್ಸ್‌ ಸಂಸ್ಥೆ ಹಾಗೂ ಶ್ರೀದೇವರ ದಾಸಿಮಯ್ಯ ಮಿತ್ರ ಮಂಡಲಿ ನೇಕಾರರ ಸಂಘದಿಂದ ಮೆಗಾ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

Share this article