ಮಾಗಡಿ: ಒಂದು ವಾರದಿಂದ ನಿರಂತರ ಸುರಿಯುತ್ತಿರುವ ಮಳೆಗೆ ಸಾಕಷ್ಟು ಹಾನಿ ಉಂಟಾಗಿದ್ದು, ತಾಲೂಕು ಆಡಳಿತ ಮಳೆ ಹಾನಿ ಹಿನ್ನೆಲೆಯಲ್ಲಿ ವಾರ್ ರೂಂ ತೆರೆದಿದೆ. ಸಾರ್ವಜನಿಕರು ಮಳೆ ಹಾನಿಗೆ ದೂ: 9164970009 ಇಲ್ಲಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು ಎಂದು ತಹಸೀಲ್ದಾರ್ ಶರತ್ ಕುಮಾರ್ ತಿಳಿಸಿದರು.
ಮಾಗಡಿ -ಬೆಂಗಳೂರು ಮುಖ್ಯರಸ್ತೆ ನಿರ್ವಹಿಸುತ್ತಿರುವ ಕೆಶಿಪ್ ಎಡವಟ್ಟಿನಿಂದ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ತಾಲೂಕಿನ ಬಾಚೇನಟ್ಟಿ ಸಮೀಪದ ಮಾಗಡಿ ಕೆಂಪೇಗೌಡಹಳ್ಳಿ ಬಾಡೂಟ ಹೋಟೆಲ್‌ಗೆ ನೀರು ನುಗ್ಗಿ ಎರಡೂವರೆ ಲಕ್ಷ ಮೌಲ್ಯದ ದಿನಸಿ ಹಾಳಾಗಿದೆ. ಜೊತೆಗೆ ಹೋಟೆಲ್‌ನಲ್ಲಿದ್ದ ಫ್ರಿಡ್ಜ್, ಎಲೆಕ್ಟ್ರಿಕ್ ವಸ್ತುಗಳು ಹಾನಿಯಾಗಿ ನಷ್ಟ ಉಂಟಾಗಿದೆ ಎಂದು ಹೋಟೆಲ್ ಮಾಲೀಕ ಶಿವಮೂರ್ತಿ ತಿಳಿಸಿದ್ದಾರೆ.
ರಸ್ತೆ ಅಭಿವೃದ್ಧಿಗಾಗಿ ಹೋಟಲ್‌ನಿಂದ 13 ಅಡಿ ರಸ್ತೆ ಎತ್ತರ ಮಾಡಿದ್ದು ಈಗ ವರದೇನಹಳ್ಳಿ ಕಡೆಯಿಂದ ಬರುವ ನೀರು ನೇರವಾಗಿ ನಮ್ಮ ಹೋಟೆಲ್‌ಗೆ ನುಗ್ಗುತ್ತೆ. ಇಲ್ಲೊಂದು ದೊಡ್ಡ ಮೋರಿ ನಿರ್ಮಿಸಿಕೊಡುವಂತೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಗೆ ಮನವಿ ಮಾಡಿದೆವು. 2019ರಿಂದಲೂ ಪ್ರತಿ ವರ್ಷ ಮಳೆಗಾಲದಲ್ಲಿ ನಾವು ಈ ರೀತಿಯ ತೊಂದರೆ ಮತ್ತು ನಷ್ಟ ಅನುಭವಿಸುತ್ತಿದ್ದೇವೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ನಮಗಾಗಿರುವ ನಷ್ಟ ಪರಿಹಾರವನ್ನು ಕೆಶಿಫ್ ಕಟ್ಟಿಕೊಡಬೇಕು. ಅಲ್ಲದೆ, ಮಳೆ ನೀರು ಹೋಟೆಲ್‌ಗೆ ಬರದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಕೆಶಿಪ್ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಶಿವಮೂರ್ತಿ ಎಚ್ಚರಿಕೆ ನೀಡಿದ್ದಾರೆ.ಅಧಿಕಾರಿಗಳ ಭೇಟಿ:
22ಮಾಗಡಿ2 :
ಮಾಗಡಿ ತಾಲೂಕಿನ ಬಾಚೇನಟ್ಟಿ ಸಮೀಪದಲ್ಲಿರುವ ಮಾಗಡಿ ಕೆಂಪೇಗೌಡಹಳ್ಳಿ ಬಾಡೂಟ ಹೋಟೆಲ್‌ಗೆ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಹೋಟೆಲ್ ಒಳಗೆ ನುಗ್ಗಿರುವ ನೀರು.