ಪರಿಸರ ಸಮತೋಲನ ಕಾಪಾಡಲು ಸಹಕರಿಸಿ

KannadaprabhaNewsNetwork | Published : Jul 29, 2024 12:47 AM

ಸಾರಾಂಶ

ಮಾಗಡಿ: ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನಡೆವ ಕಾರ್ಯಕ್ರಮಕ್ಕೆ ನಾಗರಿಕರು ಸಹಕರಿಸಬೇಕು ಎಂದು ರೋಟರಿ ಮಾಗಡಿ ಸೆಂಟ್ರಲ್ ಅಧ್ಯಕ್ಷ ಲಕ್ಷ್ಮಿಪ್ರಸಾದ್ ಹೇಳಿದರು.

ಮಾಗಡಿ: ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನಡೆವ ಕಾರ್ಯಕ್ರಮಕ್ಕೆ ನಾಗರಿಕರು ಸಹಕರಿಸಬೇಕು ಎಂದು ರೋಟರಿ ಮಾಗಡಿ ಸೆಂಟ್ರಲ್ ಅಧ್ಯಕ್ಷ ಲಕ್ಷ್ಮಿಪ್ರಸಾದ್ ಹೇಳಿದರು.

ಪಟ್ಟಣದ ಶ್ರೀನಿಧಿ ಬಡಾವಣೆಯಲ್ಲಿ ಮಾಗಡಿ ರೋಟರಿ ಸೆಂಟ್ರಲ್, ಕುದೂರು ರೋಟರಿ ಸೆಂಟ್ರಲ್ ಸಹಯೋಗದಲ್ಲಿ 200 ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಾಯುವಿಹಾರಿಗಳಿಗೆ, ಸ್ಥಳೀಯ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಗಿದೆ. ಸಾರ್ವಜನಿಕರು ಈ ಕಾರ್ಯಕ್ಕೆ ಕೈಜೋಡಿಸಿ, ಪರಿಸರ ಸಮತೋಲನಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ರೋಟರಿ ಕುದೂರು ಸೆಂಟ್ರಲ್ ಅಧ್ಯಕ್ಷ ಎಂ.ಜಿ.ಮಹೇಶ್ ಮಾತನಾಡಿ, ಆ.4ರಂದು ಕುದೂರಿನ ಹೆಸರಾಂತ ಭೈರವ ಬೆಟ್ಟದ ತಪ್ಪಲಿನಲ್ಲಿ ರೋಟರಿ ವತಿಯಿಂದ 5 ಸಾವಿರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಈಗಾಗಲೇ ರೋಟರಿ ಸೆಂಟರ್‌ನಿಂದ ಸಾಕಷ್ಟು ಗಿಡಗಳನ್ನು ಬೆಳೆಸುತ್ತಿದ್ದು, ಕೋಟಿ ವೃಕ್ಷ ಯೋಜನೆಯಡಿ ಮುಂದಿನ ವಾರ ಕುದೂರಿನಲ್ಲಿ ರೈತರಿಗೆ ಉಚಿತವಾಗಿ ಎರಡು ಸಾವಿರ ತೆಂಗಿನ ಸಸಿಗಳನ್ನು ವಿತರಣೆ ಮಾಡುವ ಗುರಿಯಿದೆ ಎಂದು ತಿಳಿಸಿದರು.

ರೋಟರಿ ಮಾಜಿ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ಪ್ರತಿ ವರ್ಷವೂ ರೋಟರಿಯಿಂದ ತಾಲೂಕಿನಲ್ಲಿ 200ಕ್ಕೂ ಹೆಚ್ಚು ಸಸಿ ನೆಡಲಾಗುತ್ತಿದೆ. ಈ ಬಾರಿ ಸಿಎಸ್ಆರ್ ಅನುದಾನದಡಿ ಅರಣ್ಯ ಇಲಾಖೆಗೆ 5 ಎಕರೆ ಕಾಡು ಜಾಗವನ್ನು ಗುರುತಿಸಿ ಕೊಡುವಂತೆ ಕೇಳಿಕೊಂಡಿದ್ದು, ಮೂರು ವರ್ಷ ಸಂಪೂರ್ಣ ನಿರ್ವಹಣೆಯನ್ನು ರೋಟರಿಯೇ ಮಾಡಲಿದೆ. ಅಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಲಿದ್ದೇವೆ. ನಮ್ಮ ಬಡಾವಣೆಯಲ್ಲಿ ಸಸಿ ನೆಟ್ಟಿದ್ದು, ರೋಟರಿಯಿಂದ ಸಂಪೂರ್ಣ ನಿರ್ವಹಣೆ ಮಾಡಲಾಗುತ್ತದೆ ಎಂದು ವಿವರಿಸಿದರು.

ಈ ವೇಳೆ ಮಾಗಡಿ ರೋಟರಿ ಸೆಂಟ್ರಲ್ ಕಾರ್ಯದರ್ಶಿ ಮೋಹನ್ ಕುಮಾರ್, ರೋಟೇರಿಯನ್‌ಗಳಾದ ನಾಗೇಶ್, ಮಾಂತೇಶ್, ವಿನೋದ್, ಶಿವು, ಅಶ್ವಥ್ ನಾಗರಾಜ್, ಶಂಕರ್, ಲ್ಯಾಬ್ ಲೋಕೇಶ್, ಉಮೇಶ್, ರೋಟರಿ ಕುದುರು ಸೆಂಟ್ರಲ್ ಕಾರ್ಯದರ್ಶಿ ಹರೀಶ್ ಪಟೇಲ್, ಖಜಾಂಚಿ ಲೋಕೇಶ್, ಜಂಟಿ ಕಾರ್ಯದರ್ಶಿ ಓಂ ಪ್ರಕಾಶ್, ಧರ್ಮ ಪಾಲ್, ಸೋಮಶೇಖರ್, ಸಂತೋಷ್, ರಾಮ್ ಪ್ರಸಾದ್, ಸಿದ್ದರಾಜು , ಗಂಗರಾಜು, ಕೃಷ್ಣಮೂರ್ತಿ ಇತರರಿದ್ದರು.

Share this article