ಬಸವನ ವಿಚಾರಧಾರೆ ವಿದೇಶಗಲ್ಲಿ ಪಸರಿಸುತ್ತಿರುವುದು ಹೆಮ್ಮ: ಲಿಂಗಣ್ಣ

KannadaprabhaNewsNetwork | Published : Mar 8, 2024 1:46 AM

ಸಾರಾಂಶ

ಸಿಂದಗಿ: ಬಸವಣ್ಣನವರ ವಿಚಾರ ಧಾರೆಗಳು ವಿದೇಶಗಳಲ್ಲು ಪಸರಿಸುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರ ಎಂದು ನ್ಯೂಜಿಲೆಂಡ್‌ನ ಬಸವ ಸಮಿತಿ ಸಂಸ್ಥಾಪಕ ಲಿಂಗಣ್ಣ ಕಲಬುರ್ಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಪಟ್ಟಣದ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿರುವ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಿಂದಗಿ: ಬಸವಣ್ಣನವರ ವಿಚಾರ ಧಾರೆಗಳು ವಿದೇಶಗಳಲ್ಲು ಪಸರಿಸುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರ ಎಂದು ನ್ಯೂಜಿಲೆಂಡ್‌ನ ಬಸವ ಸಮಿತಿ ಸಂಸ್ಥಾಪಕ ಲಿಂಗಣ್ಣ ಕಲಬುರ್ಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಪಟ್ಟಣದ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿರುವ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಸವಣ್ಣನವರ ವಚನಗಳಲ್ಲಿ ವೈಜ್ಞಾನಿಕತೆ ಇದೆ. ನ್ಯೂಜಿಲೆಂಡ್‌ನಲ್ಲಿ ಬಸವ ಸಮಿತಿ ಸ್ಥಾಪಿಸಿ ಬಸವಣ್ಣನವರ ಮತ್ತು ಶರಣರ ವಿಚಾರಗಳನ್ನು ಅಲ್ಲಿನ ಜನತೆಗೆ ನೀಡುತ್ತಿರುವುದು ಸಂತಸ ತಂದಿದೆ ಎಂದರು.

ಎಚ್‌ಜಿ ಕಾಲೇಜ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಮಾತನಾಡಿ, ಗೋಲಗೇರಿ ಗೊಲ್ಲಾಳ ಒಬ್ಬ ಮುಗ್ದ ಭಕ್ತ. ತನ್ನ ಭಕ್ತಿಯ ಮನೋಭಾವದಿಂದ ಶಿವನನ್ನು ಒಲಿಸಿಕೊಂಡು ಮಾದರಿಯಾದವನು. ಅವರ ವಚನಗಳು ಕೆಲವೇ ಕೆಲವು ಲಭ್ಯವಾದರು ಸಂದೇಶಗಳ ಸಾರ ವಿಸ್ತಾರವಾಗಿದೆ ಎಂದರು.

ಜಾನಪದ ಸಾಹಿತಿ ಡಾ.ಎಂ.ಎಂ ಪಡಶೆಟ್ಟಿ ಅವರು ತಿಂಥಣಿ ಮೌನೇಶ್ವರ ವಚನಗಳ ಕುರಿತಾಗಿ ಮಾತನಾಡಿರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಡಾ.ಶರಣಬಸವ ಜೋಗೂರ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಲಿಂಗಣ್ಣ ಕಲಬುರ್ಗಿ ರನ್ನು ಗೌರವಿಸಲಾಯಿತು. ಶಿವಪ್ಪ ಗವಸಾನಿ, ಬಿ.ಎಸ್.ಹಣಮಶೆಟ್ಟಿ, ಪ್ರಾಚಾರ್ಯ ಜೆ.ಸಿ.ನಂದಿಕೋಲ ವೇದಿಕೆ ಮೇಲಿದ್ದರು. ಡಾ.ಚನ್ನಪ್ಪ ಕಟ್ಟಿ, ಎಮ್.ಎಸ್.ಹೈಯಾಳಕರ, ಶಿವಾನಂದ ಕಲಬುರ್ಗಿ, ಸಂಗಪ್ಪ ಕತ್ತಿ, ಶರಣಗೌಡ ಪಾಟೀಲ, ಶಿವುಕುಮಾರ ಶಿವಶಿಂಪಿಗೇರ, ಮಹಾನಂದಾ ಬಮ್ಮಣ್ಣಿ, ಡಾ.ಸೀಮಾ ವಾರದ, ಸುಜಾತಾ ಕಿಣಗಿ, ದ್ರಾಕ್ಷಾಯಣಿ ಪಾಟೀಲ, ಬಸಯ್ಯ ಮಠಪತಿ, ಭೀಮಾಶಂಕರ ಅರಳಗುಂಡಗಿ, ಎಸ್.ಎಮ್.ಪೂಜಾರಿ, ಪ್ರಸನ್ನ ಜೋಗೂರ, ವಿಶ್ವನಾಥ ನಂದಿಕೋಲ, ಕಲ್ಲಪ್ಪ ತಾರಾಪೂರ, ಸಿದ್ದಲಿಂಗ ಕಿಣಗಿ, ದಾನಯ್ಯ ಮಠಪತಿ, ಆರ್.ಎ.ಹಾಲಕೇರಿ, ಪ್ರಶಾಂತ ಕುಲಕರ್ಣಿ, ಸಿ.ಜಿ.ಕತ್ತಿ, ವಿದ್ಯಾ ಮೊಗಲಿ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಇದ್ದರು.

Share this article