ಕನ್ನಡಪ್ರಭ ವಾರ್ತೆ ಬೆಂಗಳೂರು
ಮಲಗುವ ಕೋಣೆಯಲ್ಲಿ ರಹಸ್ಯ ಕ್ಯಾಮೆರಾವಿಟ್ಟು ಲೈಂಗಿಕ ಕ್ರಿಯೆಯ ದೃಶ್ಯಾವಳಿ ಚಿತ್ರೀಕರಿಸಿ ತನ್ನ ಪತ್ನಿ ಮೇಲೆ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯೊಬ್ಬನ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪುಟ್ಟನೇನಹಳ್ಳಿ ಸಮೀಪದ ನಿವಾಸಿ ಸೈಯದ್ ಇನಾಮುಲ್ ವಿರುದ್ಧ ಆರೋಪ ಬಂದಿದ್ದು, ಈ ಬಗ್ಗೆ ಆತನ ಪತ್ನಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಸ್ನೇಹಿತರ ಜತೆ ಲೈಂಗಿಕ ಕ್ರಿಯೆಗೆ ಒತ್ತಾಯಕಳೆದ ವರ್ಷ ಸಂತ್ರಸ್ತೆ ಜತೆ ಸೈಯದ್ ವಿವಾಹವಾಗಿದ್ದು, ಮದುವೆ ಬಳಿಕ ಪುಟ್ಟೇನಹಳ್ಳಿ ಸಮೀಪ ದಂಪತಿ ನೆಲೆಸಿದ್ದರು. ಖಾಸಗಿ ಕಂಪನಿಯಲ್ಲಿ ಆತ ಕೆಲಸ ಮಾಡುತ್ತಿದ್ದ. ಮದುವೆ ನಂತರ ಕೌಟುಂಬಿಕ ವಿಚಾರವಾಗಿ ಸತಿ-ಪತಿ ಮಧ್ಯೆ ಮನಸ್ತಾಪ ಮೂಡಿದೆ. ಇದೇ ವಿಷಯವಾಗಿ ಮನೆಯಲ್ಲಿ ಆಗಾಗ್ಗೆ ಜಗಳವಾಗುತ್ತಿದ್ದವು. ಮಲಗುವ ಕೋಣೆಯಲ್ಲಿ ರಹಸ್ಯ ಕ್ಯಾಮೆರಾವಿಟ್ಟು ತನ್ನೊಂದಿಗೆ ನಡೆಸಿದ ಲೈಂಗಿಕ ಕ್ರಿಯೆಯ ದೃಶ್ಯಾವಳಿ ಚಿತ್ರೀಕರಿಸಿಕೊಂಡು ಪತಿ ವಿಕೃತನಾಗಿ ನಡೆದುಕೊಂಡಿದ್ದ. ಈ ವಿಡಿಯೋವನ್ನು ದುಬೈನಲ್ಲಿ ನೆಲೆಸಿರುವ ತನ್ನ ಸ್ನೇಹಿತರಿಗೆ ಆತ ಹಂಚಿಕೊಂಡು ಅಸಹ್ಯವಾಗಿ ವರ್ತಿಸಿದ್ದ. ಅಲ್ಲದೆ ಈ ವಿಡಿಯೋ ಮುಂದಿಟ್ಟು ತನ್ನ ಸ್ನೇಹಿತರೊಂದಿಗೆ ಸಹ ಲೈಂಗಿಕ ಕ್ರಿಯೆ ನಡೆಸುವಂತೆ ಆತ ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಹಲವು ಮಹಿಳೆಯರ ಜತೆ ಸಂಬಂಧತನಗೆ ಹಲವು ಮಹಿಳೆಯರ ಜತೆ ಅಕ್ರಮ ಸಂಬಂಧವಿದೆ ಎಂದು ಆರೋಪಿ ಹೇಳಿಕೊಳ್ಳುತ್ತಿದ್ದ. ಮದುವೆ ಸಂದರ್ಭದಲ್ಲಿ ಆರೋಪಿಗೆ ವರದಕ್ಷಿಣೆ ರೂಪದಲ್ಲಿ ಬೈಕ್, 340 ಗ್ರಾಂ ಚಿನ್ನ ಹಾಗೂ ಹಣ ಸಹ ಕೊಡಲಾಗಿತ್ತು. ಇನ್ನು ಮದುವೆ ವೇಳೆ ಊಟದ ವಿಚಾರವಾಗಿ ಆತನ ಸೋದರ ಸಂಬಂಧಿಗಳು ಗಲಾಟೆ ಕೂಡ ಮಾಡಿದ್ದರು. ತನ್ನ ತವರು ಮನೆಗೆ ಸಹ ಹೋಗದಂತೆ ಪತ್ನಿಗೆ ಸೈಯದ್ ನಿರ್ಬಂಧ ವಿಧಿಸಿದ್ದ ಎಂದು ದೂರಲಾಗಿದೆ.
ಸುಳ್ಳು ಹೇಳಿ ಎರಡನೇ ಮದುವೆನನ್ನೊಂದಿಗೆ ಮದುವೆ ಮುಂಚೆಯೇ ಸೈಯದ್‌ಗೆ ವಿವಾಹವಾಗಿತ್ತು. ಆದರೆ ಮದುವೆ ವಿಷಯ ಮುಚ್ಚಿಟ್ಟು ನನ್ನೊಂದಿಗೆ ಆತ ಎರಡನೇ ವಿವಾಹವಾಗಿದ್ದ. ಅಲ್ಲದೆ ಮದುವೆ ಮುನ್ನವೇ ಆತನೊಂದಿಗೆ ಡೇಟಿಂಗ್ ಸಹ ಹೋಗಿದ್ದೆ ಎಂದು ಸಂತ್ರಸ್ತೆ ಹೇಳಿದ್ದಾಳೆ.