ಪ್ರೌಢಶಾಲಾಮಟ್ಟದ ಗಾಯನ ಸ್ಪರ್ಧೆ: ಅನಘ ಪ್ರಥಮ ಸ್ಥಾನ

KannadaprabhaNewsNetwork | Published : Dec 2, 2024 1:20 AM

ಸಾರಾಂಶ

ಚಿಕ್ಕಮಗಳೂರು, ನಗರದ ಕದ್ರಿಮಿದ್ರಿಯ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಅಂತರ ಪ್ರೌಢಶಾಲಾ ಮಟ್ಟದ ಗಾಯನ ಸ್ಪರ್ಧೆಯಲ್ಲಿ ಆಲ್ದೂರಿನ ಪೂರ್ಣಪ್ರಜ್ಞ ಶಾಲೆ ವಿದ್ಯಾರ್ಥಿನಿ ಅನಘ ಪ್ರಥಮ ಸ್ಥಾನ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರದ ಕದ್ರಿಮಿದ್ರಿಯ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಅಂತರ ಪ್ರೌಢಶಾಲಾ ಮಟ್ಟದ ಗಾಯನ ಸ್ಪರ್ಧೆಯಲ್ಲಿ ಆಲ್ದೂರಿನ ಪೂರ್ಣಪ್ರಜ್ಞ ಶಾಲೆ ವಿದ್ಯಾರ್ಥಿನಿ ಅನಘ ಪ್ರಥಮ ಸ್ಥಾನ ಪಡೆದಿದ್ದಾರೆ.

ಕುವೆಂಪು ವಿದ್ಯಾನಿಕೇತನದ ನಮ್ರತಾ ದ್ವಿತೀಯ. ಸಂತ ಜೋಸೆಫರ ಶಾಲೆ ಲಾವಣ್ಯ ತೃತೀಯ. ಚರ್ಚಾ ಸ್ಪರ್ಧೆಯಲ್ಲಿ ಸೈಂಟ್ ಮೇರಿಸ್ ಶಾಲೆ ಜೈಮಾದಾಹಿಯ ಮತ್ತು ಸುಮಿತ್‌, ಎಜುಕೇಶನ್‌ ಇನ್ಸ್ಟಿಟ್ಯೂಟ್‌ನ ನಿಕ್ಷೇಪ್ ಪ್ರಥಮ, ಕುವೆಂಪು ಶಾಲೆ ಪ್ರಾರ್ಥನಾ ಹಾಗೂ ಯುನೈಟೆಡ್ ಶಾಲೆ ಅಪ್ರಾ ಆಜೀರ ದ್ವಿತೀಯ ಸ್ಥಾನ ಗಳಿಸಿದ್ದಾರೆ.ಚಿತ್ರಕಲೆ ವಿಭಾಗದಲ್ಲಿ ಕುವೆಂಪು ವಿದ್ಯಾನಿಕೇತನದ ಸಾಯಿ ಪ್ರೇಕ್ಷ ಪ್ರಥಮ, ಸಂತ ಜೋಸೆಫರ ಶಾಲೆ ಆಶ್ರಯ್‌ ಎಂ. ನಾಯಕ್ ದ್ವಿತೀಯ, ಜೆವಿಎಸ್ ಶಾಲೆ ದೀಪ್ತಿ ಮನ್ನಾ ತೃತೀಯ. ರಸಪ್ರಶ್ನೆಯಲ್ಲಿ ಕುವೆಂಪು ಶಾಲೆ ತಂಡ ಪ್ರಥಮ, ಅಂಬರ್ ವ್ಯಾಲಿ ದ್ವಿತೀಯ ಸ್ಥಾನ ಗಳಿಸಿದೆ.ಪ್ರಬಂಧ ಸ್ಪರ್ಧೆಯಲ್ಲಿ ಕುವೆಂಪು ವಿದ್ಯಾನಿಕೇತನದ ನುಡಿ ಆರ್‌. ಗೌಡ ಪ್ರಥಮ. ಪೂರ್ಣ ಪ್ರಜ್ಞ ಶಾಲೆಯ ಧನ್ಯಾ ರಾಗ ದ್ವಿತೀಯ, ಸಂತ ಜೋಸೆಫರ ಶಾಲೆ ನಿಶಾ ಚೌದರಿ ತೃತೀಯ ಸ್ಥಾನ ಪಡೆದರು. ವಿವಿಧ ಸ್ಪರ್ಧೆಗಳಲ್ಲಿ 20 ಶಾಲೆಗಳ 160 ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಸ್ಪರ್ಧೆ ನಂತರ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎಂ.ಆರ್. ಲೋಹಿತ್ ಮಕ್ಕಳು ತಮ್ಮ ಸರ್ವಾಂಗೀಣ ಬೆಳವಣಿಗೆಗಾಗಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆ ಕಾರ್ಯದರ್ಶಿ ಕೆ.ಸಿ. ಶಂಕರ್ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಕಳೆದ ಹತ್ತು ವರ್ಷಗಳಿಂದ ಶಾಲೆಯಲ್ಲಿ ಇಂತಹ ಸ್ಪರ್ಧೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲೆ ಟ್ರಸ್ಟಿ ಅರ್ಚನಾ ಶಂಕರ್, ಪ್ರಾಂಶುಪಾಲ ವಿ.ಎಸ್. ರಾಘವೇಂದ್ರ, ಉಪ ಪ್ರಾಂಶುಪಾಲೆ ಶಮ್ಮಿ. ಉಪನ್ಯಾಸಕರಾದ ಮಧು, ಓಂಕಾರಮೂರ್ತಿ ಉಪಸ್ಥಿತರಿದ್ದರು.1 ಕೆಸಿಕೆಎಂ 6ಚಿಕ್ಕಮಗಳೂರಿನ ಕದ್ರಿಮಿದ್ರಿಯ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಅಂತರ ಪ್ರೌಢಶಾಲಾ ಮಟ್ಟದ ಗಾಯನ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕೆ.ಸಿ. ಶಂಕರ್‌, ರಾಘವೇಂದ್ರ, ಲೋಹಿತ್‌ ಇದ್ದರು.

Share this article