ಹಿರೇಕೆರೂರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ತಾವು ಬದ್ಧ- ಶಾಸಕ ಯು . ಬಿ. ಬಣಕಾರ

KannadaprabhaNewsNetwork |  
Published : Aug 19, 2024, 12:56 AM ISTUpdated : Aug 19, 2024, 01:02 PM IST
ಪಟ್ಟಣದ ರಾಷ್ಟ್ರೀಯ ಹೆದ್ದಾರಿಗೆ ಅಳವಡಿಸಿರುವ ವಿದ್ಯುತ್ ದೀಪಗಳು ಹಾಗೂ ಹೊಸ್ ಬಸ್ಸ ನಿಲ್ದಾಣ ಸರ್ಕಲ್ ಮತ್ತು ಭಗತ್ ಸಿಂಗ ವೃತ್ತದಲ್ಲಿ ಅಳವಡಿಸಿರುವ ಹೈಮಾಸ್ಕಗಳನ್ನು ಶಾಸಕ ಯು.ಬಿ ಬಣಕಾರ ಚಾಲನೆ ನೀಡಿದರು. | Kannada Prabha

ಸಾರಾಂಶ

ರಟ್ಟೀಹಳ್ಳಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಗೆ ಅಳವಡಿಸಿರುವ ವಿದ್ಯುತ್ ದೀಪಗಳು ಹಾಗೂ ಹೊಸ್ ಬಸ್‌ ನಿಲ್ದಾಣ ಸರ್ಕಲ್ ಮತ್ತು ಭಗತ್ ಸಿಂಗ ವೃತ್ತದಲ್ಲಿ ಅಳವಡಿಸಿರುವ ಹೈಮಾಸ್ಕ್‌ಗಳನ್ನು ಶಾಸಕ ಯು.ಬಿ. ಬಣಕಾರ ಲೋಕಾರ್ಪಣೆ ಮಾಡಿದರು.

ರಟ್ಟೀಹಳ್ಳಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಗೆ ಅಳವಡಿಸಿರುವ ವಿದ್ಯುತ್ ದೀಪಗಳು ಹಾಗೂ ಹೊಸ್ ಬಸ್‌ ನಿಲ್ದಾಣ ಸರ್ಕಲ್ ಮತ್ತು ಭಗತ್ ಸಿಂಗ ವೃತ್ತದಲ್ಲಿ ಅಳವಡಿಸಿರುವ ಹೈಮಾಸ್ಕ್‌ಗಳನ್ನು ಶಾಸಕ ಯು.ಬಿ. ಬಣಕಾರ ಲೋಕಾರ್ಪಣೆ ಮಾಡಿದರು.

ನಂತರ ಮಾತನಾಡಿದ ಅವರು ರಟ್ಟೀಹಳ್ಳಿ ತಾಲೂಕು ಕೇಂದ್ರವಾದ ನಂತರ ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.

ಪಟ್ಟಣದಲ್ಲಿ ನೂತನ ಫೈರ್‌ ಎಂಜಿನ್‌ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸಿ.ಡಿ. ಕಾಮಗಾರಿ ಬಾಕಿ ಇದ್ದು, ಸದ್ಯದಲ್ಲೇ 45 ಲಕ್ಷ ವೆಚ್ಚದ ಸಂಪರ್ಕ ರಸ್ತೆ ಹಾಗೂ ಸಿ.ಡಿ. ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ, ಇನ್ನೆರಡು ತಿಂಗಳಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಂದ ಉದ್ಟಾಟಿಸಲಾಗುವುದು ಎಂದರು.

ನೂತನ ತಾಲೂಕಿಗೆ ಕೋರ್ಟ್‌ ಅವಶ್ಯಕತೆ ಇದ್ದು, ಹಿರೇಕೆರೂರು ತಾಲೂಕಿಗೆ ಹೋಲಿಸಿದರೆ ರಟ್ಟೀಹಳ್ಳಿ ತಾಲೂಕಿನಲ್ಲೇ ಅತಿ ಹೆಚ್ಚು ಸಿವಿಲ್ ಮತ್ತು ಕ್ರಿಮಿನಲ್ ಕೇಸ್‌ಗಳು ದಾಖಲಾಗುತ್ತಿದ್ದು, ಅನೇಕ ಬಾರಿ ತಾಲೂಕಿನಲ್ಲೆ ಜೂನಿಯರ ಸಿವಿಲ್ ಕೋರ್ಟ್‌ ಪ್ರಾರಂಭಕ್ಕೆ ಮನವಿ ಸಲ್ಲಿಸಿದ್ದರಿಂದ ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ತೋಟಗಾರಿಕೆ ಇಲಾಖೆ ಕಟ್ಟಡವನ್ನು 30 ಲಕ್ಷ ವೆಚ್ಚದಲ್ಲಿ ದುರಸ್ತಿ ಕಾಮಗಾರಿಯನ್ನು ಸೋಮವಾರದಿಂದ ಪ್ರಾರಂಭಿಸಿ ಒಂದು ತಿಂಗಳಲ್ಲಿ ಮುಕ್ತಾಯಗೊಳಿಸಿ ಲೋಕಾರ್ಪಣೆಗೋಳಿಸಲಾಗುವುದು ಎಂದರು.

ಟ್ರ್ಯಾಕ್ಟರ್‌ ಉದ್ಘಾಟನೆ: ಪಟ್ಟಣ ಪಂಚಾಯತ್‌ಗೆ ನೂತನ ಕಸ ವಿಲೆವಾರಿಗೆ ಟ್ರ್ಯಾಕ್ಟರ್‌ ಉದ್ಟಾಟಿಸಿ ಮಾತನಾಡಿ, ಗ್ರಾಮ ಪಂಚಾಯತಿಯಿಂದಲೂ ಪಟ್ಟಣದಲ್ಲಿ ಕಸ ವಿಲೇವಾರಿಗಾಗಿ ಬಾಡಿಗೆ ಟ್ರ್ಯಾಕ್ಟರ್‌ ಬಳಸಲಾಗುತ್ತಿತ್ತು. 2021-22ನೇ ಸಾಲಿನಲ್ಲಿ 15ನೇ ಹಣಕಾಸಿನಲ್ಲಿ 10ಲಕ್ಷ ವೆಚ್ಚದಲ್ಲಿ ಸ್ವಂತ ಟ್ರ್ಯಾಕ್ಟರ್‌ ಖರೀದಿ ಮಾಡಿದ್ದು ಕಾರಣ ಪಟ್ಟಣದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಆಗಲಿದೆ ಎಂದರು.

ಇಂದಿರಾ ಕ್ಯಾಂಟೀನ್ ಕಾಮಗಾರಿ ವೀಕ್ಷಣೆ: ಪಟ್ಟಣದಲ್ಲಿ ನೂತವಾಗಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದ ಶಾಸಕ ಯು.ಬಿ. ಬಣಕಾರ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದ ಯಾರೊಬ್ಬರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಕಡಿಮೆ ದರದಲ್ಲಿ ಮುಂಜಾನೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ನೀಡಲಾಗುತ್ತಿದ್ದು, ರಟ್ಟೀಹಳ್ಳಿ ಪಟ್ಟಣದಲ್ಲೂ ಸದ್ಯದಲ್ಲೆ ಇಂದಿರಾ ಕ್ಯಾಂಟೀನ್ ಕಾಮಗಾರಿ ಮುಗಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ, ಸಿಬ್ಬಂದಿ ರಾಜಕುಮಾರ ಹೇಂದ್ರೆ, ಸಂತೋಷ ಬಿಳಚಿ, ಪರಮೇಶಪ್ಪ ಅಂತರಳ್ಳಿ, ಮಂಜು ಸುಣಗಾರ, ಕಾಂಗೆಸ್ ಮುಖಂಡರಾದ ಪಿ.ಡಿ. ಬಸನಗೌಡ್ರ, ರವೀಂದ್ರ ಮುದಿಯಪ್ಪನವರ, ವಿಜಯ ಅಂಗಡಿ, ಶಂಕ್ರಪ್ಪ ಬಿದರಿ, ಮಂಜು ಮಾಸೂರ, ಮಂಜಪ್ಪ ಅಸ್ವಾಲಿ, ಬೀರೇಶ ಕರಡೆಣ್ಣನವರ, ಪರಮೇಶಪ್ಪ ಕಟ್ಟೆಕಾರ, ನಾಸೀರಸಾಬ್ ಸೈಕಲ್‌ಗಾರ, ಅರುಣ ಮೂಲಿಮನಿ, ಫಾರೂಕ್ ಸೈಕಲಗಾರ ಮುಂತಾದವರು ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ