ತರೀಕೆರೆಯಲ್ಲಿ ನಿವೇಶನ ಹಸ್ತಾಂತರ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆನಿವೇಶನ ಹಾಸ್ತಾಂತರ ಬರೀ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಗೆ ಮಾತ್ರ ಐತಿಹಾಸಿಕ ದಿನವಲ್ಲ ಬದಲಾಗಿ ಇಡೀ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಇದೊಂದು ಮಹತ್ವದ ದಿನವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಹೇಳಿದ್ದಾರೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತರೀಕೆರೆ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ಭವನಕ್ಕಾಗಿ ನಿವೇಶನ ಹಸ್ತಾಂತರ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿ, ನಿವೇಶನ ಪತ್ರ ಸ್ವೀಕರಿಸಿ ಮಾತನಾಡಿದರು. ಅನ್ನದಾನಕ್ಕಿಂತ ಶ್ರೇಷ್ಠ ವಿದ್ಯಾದಾನ, ಒಬ್ಬ ವ್ಯಕ್ತಿಗೆ ವಿದ್ಯಾದಾನ ಮಾಡಿದರೆ ಆ ವ್ಯಕ್ತಿಯ ಜೀವ ಇರುವವರೆಗೆ ವಿದ್ಯೆ ಇರುತ್ತದೆ. ವಿದ್ಯಾದಾನ ನಮ್ಮ ಭಾರತೀಯ ಪರಂಪರೆ. ವಿದ್ಯಾದಾನಕ್ಕಿಂತಲೂ ಶ್ರೇಷ್ಠವಾದ ದಾನ ಐಶ್ವರ್ಯ ದಾನ ಸಂಪತ್ತು ದಾನ, ಒಬ್ಬ ವ್ಯಕ್ತಿ ತಾವು ಗಳಿಸಿದ ಐಶ್ವರ್ಯ, ಸಂಪತ್ತನ್ನು ದಾನ ಮಾಡಿದರೆ ಆ ದಾನ ಭೂಮಿ ಇರುವವರೆಗೆ ಇರುತ್ತದೆ. ವಿಶಾಲ ಹೃದಯ ಇರುವವರು ಮಾತ್ರ ಇಂತಹ ಬೆಲೆ ಕಟ್ಟಲಾಗದ ಸಂಪತ್ತನ್ನು ದಾನ ಮಾಡುವರು ಇದು ಶಾಶ್ವತ, ಇವರು ಅಪರೂಪದಲ್ಲಿ ಅಪರೂಪ ಎಂದು ಶ್ಲಾಘಿಸಿದರು. ಕನ್ನಡ ತಾಯಿ ಸೇವೆಗೆ ಸ್ವ ಇಚ್ಛೆಯಿಂದ ನಿವೇಶನ ದಾನ ನೀಡಿರುವುದು ಆದರ್ಶನೀಯ. ಇಂತಹ ದಾನಿಗಳ ಸಂಖ್ಯೆ ಹೆಚ್ಚಾಗಲಿ. ಕನ್ನಡ ಸಾಹಿತ್ಯ ಪರಿಷತ್ತು ಬೆಳೆಯಬೇಕೆಂಬ ನಿಟ್ಟಿನಲ್ಲಿ ಶ್ಯಾಮಲಾ ಮಂಜುನಾಥ್ ಅವರು ನೀಡಿದ ನಿವೇಶನದಲ್ಲಿ ಕನ್ನಡ ಭವನ ನಿರ್ಮಾಣ ಮಾಡಿ, ಅನೇಕ ಕನ್ನಡ ಪರ ಕಾರ್ಯಕ್ರಮ ಇನ್ನಿತರ ಚಟುವಟಿಕೆಯನ್ನು ತಮ್ಮ ಉದ್ದೇಶದಂತೆ ಆಯೋಜಿಸುವ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್ತು ವಹಿಸಿಕೊಳ್ಳುತ್ತದೆ ತಾವು ನೀಡಿದ ನಿವೇಶನವನ್ನು ಸಂತೋಷ, ಗೌರವದಿಂದ ಸ್ವೀಕರಿಸುತ್ತದೆ ಎಂದು ಹೇಳಿದರು.ತಾಲೂಕು ಕಸಾಪ ಅಧ್ಯಕ್ಷ ನವೀನ್ ಪೆನ್ನಯ್ಯ ಮಾತನಾಡಿ, ಕನ್ನಡ ಭಾಷೆಗೆ ೨೫೦೦ ಸಾವಿರ ವರ್ಷಗಳ ಇತಿಹಾಸವಿದೆ. ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್, ಸರ್.ಎಂ ವಿಶ್ವೇಶ್ವರಯ್ಯ, ಮಿರ್ಜಾ ಇಲ್ಮಾಯಿಲ್ ರವರ ಕನಸು ಸಾಕಾರಗೊಂಡು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿತವಾಗಿದೆ. ಇಂತಹ ಸುದೀರ್ಘ ಇತಿಹಾಸದ ಪರಿಷತ್ತಿಗೆ ಸರಿ ಸುಮಾರು ೨೦ ಲಕ್ಷ ಬೆಲೆಬಾಳುವ ೩೦*೨೫ ಅಳತೆಯ ೭೮೩ ಚದುರ ಅಡಿ ವಿಸ್ತೀರ್ಣದ ನಿವೇಶನ ದಾನವಾಗಿ ನೀಡಿರುವುದು ಶ್ಲಾಘನೀಯ ಎಂದು ಹೇಳಿದರು.
ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಕನ್ನಡ ಭವನ ದೇಗುಲ ಇದ್ದ ಹಾಗೆ ಇಂತಹ ದೇಗುಲಕ್ಕೆ ನಿವೇಶನ ದಾನ ನೀಡಿದ್ದಾರೆ. ಇಂತಹ ದಾನಿಗಳು, ವಿಶಾಲ ಮನಸ್ಸುಗಳು ಹೆಚ್ಚಾದರೆ, ಕನ್ನಡ ಕಟ್ಟುವ ಕೆಲಸ ಆಗುತ್ತದೆ. ನಾಮ ಫಲಕಗಳು ಶೇ ೬೦ ಕನ್ನಡದಲ್ಲಿ ಇರಬೇಕು ಎನ್ನುವ, ನ್ಯಾಯಾಲಯದಲ್ಲಿಯೂ ಸಹ ಕನ್ನಡದಲ್ಲಿಯೇ ತೀರ್ಪು ನೀಡಬೇಕು ಎನ್ನುವ ಕನ್ನಡದ ವಿಧೇಯಕ ಸರ್ಕಾರ ತಂದಿದೆ ಎಂದರೆ ಅದಕ್ಕೆ ಮೂಲ ಕಾರಣ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಎಂದರು.ರಾಜ್ಯದ ಯಾವ ಯಾವ ಸ್ಥಳಗಳಲ್ಲಿ ಕನ್ನಡ ಭವನಕ್ಕೆ ನಿವೇಶನವಿಲ್ಲವೋ ಅಲ್ಲಿನ ಕಂದಾಯ ಇಲಾಖೆ ಮತ್ತು ಗ್ರಾಪಂ ವ್ಯಾಪ್ತಿಯ ಒಂದು ನಿವೇಶನ ನೀಡಬೇಕು ಎಂದು ರಾಜ್ಯಾಧ್ಯಕ್ಷ ಮಹೇಶ್ ಜೋಶಿರವರು ತಮ್ಮ ತಂಡದೊಂದಿಗೆ ಮುಖ್ಯ ಮಂತ್ರಿಯವರಲ್ಲಿ ಮನವಿ ಮಾಡಬೇಕು. ಕನ್ನಡ ಕುಟಿರಕ್ಕೆ ಗ್ರಾಪಂಗಳಲ್ಲಿ ನಿವೇಶನ ಮೀಸಲಿರಿಸಬೇಕು ಮತ್ತು ಕಸಾಪ ನಿವೇಶನ ನೋಂದಣಿಗೆ ಮುದ್ರಾಂಕ ಶುಲ್ಕದಲ್ಲಿ ಪೂರ್ಣ ವಿನಾಯತಿ ನೀಡಬೇಕು ಎಂದು ಆಗ್ರಹಿಸಿದರು.
ನಿವೇಶನ ದಾನಿಗಳಾದ ಶ್ಯಾಮಲಾ ಮಂಜುನಾಥ್ ಅಭಿನಂದನೆ ಸ್ವೀಕರಿಸಿದರು. ಇವರ ಪುತ್ರ ನವೀನ್, ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್, ಹಿರಿಯ ಸದಸ್ಯರಾದ ಶಿವಣ್ಣ, ಮರುಳ ಸಿದ್ದಯ ಪಟೇಲ್, ಜಿಲ್ಲಾ ಕಸಾಪ ಮಹಿಳಾ ಘಟಕದ ಕೋಶಾಧ್ಯಕ್ಷೆ ವಿಶಾಲಾಕ್ಷಮ್ಮ, ಚಿಕ್ಕಮಗಳೂರು ಕಸಪಾ ಅಧ್ಯಕ್ಷ ಸೋಮಶೇಖರ್, ದರ್ಶನ್, ಗಾಯಿತ್ರಮ್ಮ, ಮುಹೀಬುಲ್ಲಾ, ನಿಕಟಪೂರ್ವ ಅಧ್ಯಕ್ಷರಾದ ಬೇಲೇನಹಳ್ಳಿ ಸೋಮಶೇಖರ್, ದಾದಾಪೀರ್, ಕನ್ನಡಶ್ರೀ ಭಗವಾನ್ , ತ.ಮಾ.ದೇವಾನಂದ್ , ಇಮ್ರಾನ್ ಅಹಮ್ಮದ್ ಬೇಗ್ ಕಾರ್ಯದರ್ಶಿ ಮಿಲ್ಟ್ರಿ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.15ಕೆಟಿಆರ್.ಕೆ.1ಃತರೀಕೆರೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ನಿವೇಶನ ಹಸ್ತಾಂತರ ಪತ್ರ ಸ್ವೀಕರಿಸಿದರು. ನಿವೇಶನ ದಾನಿಗಳಾದ ಶ್ಯಾಮಲ ಮಂಜುನಾಥ್, ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ತಾ.ಕಸಾಪ ಅಧ್ಯಕ್ಷ ನವೀನ್ ಪೆನ್ನಯ್ಯ ಮತ್ತಿತರರು ಇದ್ದರು.