ಕನ್ನಡಪ್ರಭ ವಾರ್ತೆ ಹಲಗೂರು
ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆದ 14 ವರ್ಷದೊಳಗಿನ ವಯೋಮಾನದ ವಿದ್ಯಾರ್ಥಿಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಮಹಮದ್ ಷಾಹಿದ್ ಮತ್ತು ಶ್ರುತಿ ಚಾಂಪಿಯನ್ ಆದರು.ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ 30 ಶಾಲೆಗಳಿಂದ 600 ಬಾಲಕರು ಮತ್ತು 500 ಬಾಲಕಿಯರು ಸ್ಪರ್ಧಾಳುಗಳಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಬಾಲಕರ ಗುಂಪು ಕ್ರೀಡೆಗಳಲ್ಲಿ ಖೋಖೋ- ಕರ್ನಾಟಕ ಪಬ್ಲಿಕ್ ಸ್ಕೂಲ್ ಹಲಗೂರು, ಕಬಡ್ಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬ್ಯಾಡರಹಳ್ಳಿ, ವಾಲಿಬಾಲ್ ದಿವ್ಯಜ್ಯೊತಿ ಸ್ಕೂಲ್ ಗೊಲ್ಲರಹಳ್ಳಿ ಮತ್ತು ಥ್ರೋ ಬಾಲ್ ಜಿ.ಎಚ್.ಪಿ.ಎಸ್ ಬ್ಯಾಡರಹಳ್ಳಿ, ಬಾಲಕಿಯರ ಗುಂಪು ಕ್ರೀಡೆಗಳಲ್ಲಿ ಖೋಖೋ- ಕೆಜಿಬಿವಿ ಶಾಲೆ ಡಿ.ಕೆ.ಹಳ್ಳಿ, ಕಬಡ್ಡಿ ಜಿ.ಎಚ್.ಪಿ.ಎಸ್ ಬಾಳೆಹೊನ್ನಿಗ, ವಾಲಿಬಾಲ್ ಜಿ.ಎಚ್.ಪಿ.ಎಸ್ ಬ್ಯಾಡರಹಳ್ಳಿ, ಥ್ರೋ ಬಾಲ್ ಜೆ.ಜೆ.ಪಬ್ಲಿಕ್ ಸ್ಕೂಲ್ ಹಲಗೂರು ಪಾರಿತೋಷಕ ತಮ್ಮದಾಗಿಸಿಕೊಂಡರು.ಬಾಲಕರ ವಿಭಾಗದಲ್ಲಿ ವೈಯಕ್ತಿಕ ಅಥ್ಲೆಟಿಕ್ ವಿಭಾಗದಲ್ಲಿ 100 ಮೀ. ಓಟ ಮೊಹಮದ್ ಶಾಹಿದ್, 200 ಮೀ. ಓಟ ಸಂತೋಷ್ ಕುಮಾರ್, 400 ಮೀ ಓಟ ಗುರುಲಿಂಗ, 600 ಮೀ. ಓಟ ದರ್ಶನ್, ಗುಂಡು ಎಸೆತ ಮಹಮದ್ ಶಾಹಿದ್, ಚಕ್ರ ಎಸೆತ ಸ್ವಾಮಿ, ಉದ್ದ ಜಿಗಿತ ಮಹಮದ್ ಶಾಹಿದ್, ಎತ್ತರ ಜಿಗಿತ ದಿಶಾಂಕ್ ಮತ್ತು ರಿಲೇಯಲ್ಲಿ ಭರತ್ ಮತ್ತು ತಂಡ ಪ್ರಥಮ ಪ್ರಶಸ್ತಿ ಬಾಚಿಕೊಂಡವು.
ಬಾಲಕಿಯರ ವಿಭಾಗದಲ್ಲಿ ವೈಯಕ್ತಿಕ ಅಥ್ಲೆಟಿಕ್ ವಿಭಾಗದಲ್ಲಿ 100 ಮೀ. ಓಟ ಭಾವನ, 200 ಮೀ. ಓಟ ಭಾವನ, 400 ಮೀ ಓಟ ಶೃತಿ, 600 ಮೀ. ಓಟ ಶೃತಿ, ಗುಂಡು ಎಸೆತ ಧನುಶ್ರೀ, ಚಕ್ರ ಎಸೆತ ಧನುಶ್ರೀ, ಉದ್ದ ಜಿಗಿತ ಲತಾ, ಎತ್ತರ ಜಿಗಿತ ಲತಾ ಮತ್ತು ರಿಲೇಯಲ್ಲಿ ತೇಜಶ್ರೀ ಮತ್ತು ತಂಡ ಪ್ರಥಮ ಪ್ರಶಸ್ತಿಯನ್ನು ತಮ್ಮ ಮುಡಿಗೆರಿಸಿಕೊಂಡರು.ವೈಯಕ್ತಿಕ ವಿಭಾಗದ ಬಾಲಕರ ಚಾಂಪಿಯನ್ ಆಗಿ ಹಲಗೂರು ಜೆ.ಜೆ.ಪಬ್ಲಿಕ್ ಶಾಲೆ ಮಹಮದ್ ಶಾಹಿದ್, ಬಾಲಕಿಯರ ಚಾಂಪಿಯನ್ ಆಗಿ ಬ್ಯಾಡರಹಳ್ಳಿ ಸರ್ಕಾರಿ ಶಾಲೆ ಶೃತಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ದೈಹಿಕ ಶಿಕ್ಷಣ ಪರೀವಿಕ್ಷಕರಾದ ನಾಗರತ್ನ, ಲೋಕೇಶ್, ಸಿ.ಆರ್.ಪಿ. ಜಿ.ಎಸ್.ಕೃಷ್ಣ, ಅಜೀಂ ಪ್ರೇಮ್ ಜೀ ಫೌಂಡೇಶನ್ ಸಮನ್ವಯ ಅಧಿಕಾರಿ ಹೇಮಂತ್ ಕುಮಾರ್, ಶಿಕ್ಷಕರಾದ ಪ್ರದೀಪ್ ಕುಮಾರ್, ಶೇಖರ್, ಬಸವರಾಜು, ಈಶಾ, ನಂದ ಕುಮಾರಿ, ಸಿದ್ದಯ್ಯ, ದೈಹಿಕ ಶಿಕ್ಷಕರಾದ ಗಂಗಾಂಬಿಕಾ, ಸವಿತಾ, ಎಸ್.ಡಿ.ಎಂ.ಸಿ. ಸದಸ್ಯ ಶ್ರೀನಿವಾಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.