ಗೃಹರಕ್ಷಕ ದಳದ ಸೇವೆ ಅತ್ಯಮೂಲ್ಯ: ಜಗದೀಶ್

KannadaprabhaNewsNetwork |  
Published : Dec 07, 2024, 12:35 AM IST
ಅಖಿಲ ಭಾರತ ಗೃಹ ರಕ್ಷಕ ದಳ ದಿನಾಚರಣೆ ಕಾರ್ಯಕ್ರಮವನ್ನು ಎಎಸ್‌ಪಿ ಜಗದೀಶ ಉದ್ಘಾಟಿಸಿದರು. | Kannada Prabha

ಸಾರಾಂಶ

ಗೃಹರಕ್ಷಕ ದಳದವರು ತಮಗೆ ದೊರೆಯುವ ಅಲ್ಪ ವೇತನದಲ್ಲಿ ಸಮಾಜಕ್ಕೆ ತಮ್ಮ ಅತ್ಯಮೂಲ್ಯವಾದ ಸೇವೆ ಸಲ್ಲಿಸುತ್ತಿದ್ದು, ಶಿಸ್ತು, ಬಂದೋಬಸ್ತ್ ಕಾಪಾಡುವಲ್ಲಿ ಪೊಲೀಸರಿಗಿಂತ ಹೆಚ್ಚಾಗಿ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ.

ಕಾರವಾರ: ಪೊಲೀಸ್ ಇಲಾಖೆ ಹಾಗೂ ಎಲ್ಲ ಇಲಾಖೆಯವರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕ ದಳದವರು ತಮ್ಮ ಅಗತ್ಯ ಸಹಕಾರವನ್ನು ನೀಡುತ್ತಿದ್ದಾರೆ ಎಂದು ಹೆಚ್ಚುವರಿ ಪೋಲಿಸ್ ವರಿಷ್ಠ ಜಗದೀಶ್ ತಿಳಿಸಿದರು.ಇಲ್ಲಿನ ಕೊಡಿಬಾಗದ ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಅಖಿಲ ಭಾರತ ಗೃಹ ರಕ್ಷಕ ದಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗೃಹರಕ್ಷಕ ದಳದವರು ತಮಗೆ ದೊರೆಯುವ ಅಲ್ಪ ವೇತನದಲ್ಲಿ ಸಮಾಜಕ್ಕೆ ತಮ್ಮ ಅತ್ಯಮೂಲ್ಯವಾದ ಸೇವೆ ಸಲ್ಲಿಸುತ್ತಿದ್ದು, ಶಿಸ್ತು, ಬಂದೋಬಸ್ತ್ ಕಾಪಾಡುವಲ್ಲಿ ಪೊಲೀಸರಿಗಿಂತ ಹೆಚ್ಚಾಗಿ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ ಎಂದರು.

ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖೆಯ ಸಮಾದೇಷ್ಠ ಡಾ. ಸಂಜು ನಾಯಕ ಮಾತನಾಡಿ, ಗೃಹರಕ್ಷಕ ದಳವು ಶಾಂತಿ, ಶಿಸ್ತು ಮತ್ತು ಸುಭದ್ರತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಎಲ್ಲರೂ ಒಗ್ಗೂಡಿ ಶ್ರದ್ಧೆ ನಿಷ್ಠೆ, ಪ್ರಾಮಾಣಿಕತೆಯ ಮನೋಭಾವ ಬೆಳಸಿಕೊಂಡು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಎಂದರು.ಸನ್ಮಾನ ಸ್ವೀಕರಿಸಿದ ನಿವೃತ್ತ ಠಾಣಾಧಿಕಾರಿ ಎಸ್.ಕೆ. ನಾಯ್ಕ ಮಾತನಾಡಿ, ಗೃಹರಕ್ಷಕ ಸೇವೆಯು ಶಿಸ್ತು ಮತ್ತು ನಿಷ್ಕಾಮ ಸೇವೆಯಾಗಿದ್ದು, ಎಲ್ಲರೂ ಒಗ್ಗೂಡಿ ನಿಷ್ಕಲ್ಮಶ ಸೇವೆ ಸಲ್ಲಿಸಬೇಕು ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಉತ್ತಮ ಕರ್ತವ್ಯ ನಿರ್ವಹಿಸಿದ ಗೃಹರಕ್ಷಕ ಮತ್ತು ಗೃಹರಕ್ಷಕಿಯರಿಗೆ, ಪ್ರಾಮಾಣಿಕತೆ ಮೆರೆದ ಮಂಗಳಜಟ್ಟಿ ಹಳ್ಯರ ಹಾಗೂ ನಿವೃತ್ತ ಘಟಕಾಧಿಕಾರಿ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. ಶಿರಸಿ ಹಾಗೂ ಹಳಿಯಾಳ ಘಟಕಕ್ಕೆ ಅತ್ಯುತ್ತಮ ಘಟಕ ಪ್ರಶಸ್ತಿ ನೀಡಲಾಯಿತು.

ಜಿಲ್ಲಾ ಬೋಧಕ ರಘು ಬಿ.ಸಿ., ಕಚೇರಿಯ ದ್ವಿತೀಯದರ್ಜೆ ಸಹಾಯಕಿ ಮಧು ಎಚ್., ಸಿಬ್ಬಂದಿ ಮಾಯಾ ಕಾಳೆ ಮೊದಲಾದವರು ಇದ್ದರು.ಡಾ. ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ

ಶಿರಸಿ: ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೬೮ನೇ ಮಹಾ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ ಅಧ್ಯಕ್ಷ ಬಸವರಾಜ ದೊಡ್ಮನಿ, ಕೆಪಿಸಿಸಿ ಸದಸ್ಯ ದೀಪಕ್ ದೊಡ್ಡೂರು, ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಶ್ರೀನಿವಾಸ ನಾಯ್ಕ, ಮುಖಂಡರಾದ ರಘು ಕಾನಡೆ, ಅಮರ ನೆರಲಕಟ್ಟೆ, ಮಾಧವ ರೇವಣಕರ್, ಸುಭಾಸ ಕಾನಡೆ, ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಚಂದ್ರಕಾಂತ ರೇವಣಕರ್, ಗೀತಾ ಭೋವಿ, ಪೂಜಾ ವೈದ್ಯ, ತಾರಾ ಮೇಸ್ತಾ, ಶಾಂತಾರಾಂ ನಾಯ್ಕ, ಎನ್.ವಿ. ನಾಯ್ಕ, ನಂದಕುಮಾರ್, ವಿಶ್ವನಾಥ ಶರ್ಮಾ, ನಾರಾಯಣ ವೈದ್ಯ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ