ರೈತರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ: ಶಾಸಕ ಕೆ.ಎಸ್.ಆನಂದ್

KannadaprabhaNewsNetwork |  
Published : Nov 08, 2025, 01:15 AM IST
7ಬೀರೂರು1ಬೀರೂರು ಹೋಬಳಿಯ ಎಮ್ಮೆದೊಡ್ಡಿ ಭಾಗದಲ್ಲಿರುವ ಬಾರ್&ರೆಸ್ಟೊರೆಂಟ್‌ಅನ್ನು ಮುಚ್ಚುವಂತೆ ಗ್ರಾಮಸ್ಥರು ಶಾಸಕರಲ್ಲಿ ನಿವೇದಿಸಿಕೊಂಡರು. ಸಿ.ಎಸ್.ಪೂರ್ಣಿಮಾ, ಸಿ.ಆರ್.ಪ್ರವೀಣ್, ಛಾಯಪತಿ, ಶೋಭಾ ಮತ್ತಿತರಿದ್ದರು. | Kannada Prabha

ಸಾರಾಂಶ

ಬೀರೂರು, ಎಮ್ಮೆದೊಡ್ಡಿ ಪಂಚಾಯಿತಿ ವ್ಯಾಪ್ತಿಯ 23 ಗ್ರಾಮಗಳನ್ನು ಕಂದಾಯ ಗ್ರಾಮವನ್ನಾಗಿ ಸದ್ಯದಲ್ಲೇ ಘೋಷಣೆಯಾಗಲಿದ್ದು ಈ ಭಾಗದ ರೈತರ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಎಮ್ಮೆದೊಡ್ಡಿ ಗ್ರಾಮದಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಭರವಸೆ

ಕನ್ನಡಪ್ರಭ ವಾರ್ತೆ, ಬೀರೂರು

ಎಮ್ಮೆದೊಡ್ಡಿ ಪಂಚಾಯಿತಿ ವ್ಯಾಪ್ತಿಯ 23 ಗ್ರಾಮಗಳನ್ನು ಕಂದಾಯ ಗ್ರಾಮವನ್ನಾಗಿ ಸದ್ಯದಲ್ಲೇ ಘೋಷಣೆಯಾಗಲಿದ್ದು ಈ ಭಾಗದ ರೈತರ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು. ಬೀರೂರು ಹೋಬಳಿ ಎಮ್ಮೆದೊಡ್ಡಿ ಗ್ರಾಮದಲ್ಲಿ ಶುಕ್ರವಾರ ನಡೆದ ಜನಸ್ಪಂದನಾ ಸಭೆಯಲ್ಲಿ ಮಾತನಾಡಿ, ಕಂದಾಯ ಗ್ರಾಮ ಗಳ ರಚನೆಯಿಂದ ನಿವಾಸಿಗರಿಗೆ ಹಕ್ಕು ಪತ್ರಗಳನ್ನು ದೊರಕಿಸಿಕೊಡಲು ಸಾಧ್ಯವಾಗಲಿದೆ. ಅರಣ್ಯ ಮತ್ತು ಕಂದಾಯ ಇಲಾಖೆ ಗಳ ಸಚಿವರ ಸಮ್ಮುಖದಲ್ಲಿ ಈ ಭಾಗದ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಸಭೆ ನಡೆಸಿ. 11 ಸಾವಿರ ಎಕರೆಯಷ್ಟು ಅರಣ್ಯ ಇಲಾಖೆಯಿಂದ ಮುಕ್ತಿ ದೊರಕಲಿದೆ, ಈ ಭಾಗದ ರೈತರಿಗೆ ಅನ್ಯಾಯವಾಗದಂತೆ ಬಿಡುವುದಿಲ್ಲ ಅನಿವಾರ್ಯವಿದ್ದರೆ ಹೋರಾಟಕ್ಕೂ ತೊಡಗಿಸಿಕೊಳ್ಳುತ್ತೇನೆ ಎಂದರು.ರೈತಪರ ಹೋರಾಟಗಾರರ ಸಂಘದ ಅಧ್ಯಕ್ಷ ಸೋಮಶೇಖರಪ್ಪ ಮಾತನಾಡಿ, ಅಮೃತ್ ಮಹಲ್ ಕಾವಲ್ ಪ್ರದೇಶವನ್ನು ಗುರುತಿಸಿಕೊಳ್ಳಲು ಹೊಸದಾಗಿ ಎಮ್ಮೆದೊಡ್ಡಿ ಭಾಗದಲ್ಲಿ ಅಸಂಬದ್ಧವಾದ ಸರ್ವೆ ಸ್ಕೇಚ್ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ದೂರಿದರು. ಅರಣ್ಯ ಇಲಾಖೆ ತಮ್ಮ ಜಾಗವನ್ನು ಅಳತೆ ಮಾಡಿಕೊಳ್ಳುವ ಮೊದಲು ರೈತರ ಜಾಗ ವನ್ನು ಅಳತೆ ಮಾಡಿಕೊಡಲಿ, ಆದರೆ ಸದ್ದಿಲ್ಲದೆ ದಾಖಲೆಗಳನ್ನು ತಿರುಚುವ ಅರಣ್ಯಾಧಿಕಾರಿಗಳು ರೈತರನ್ನು ವಂಚಿಸುವ ಕಾರ್ಯ ಮಾಡುತ್ತಾರೆ ಇದರ ವಿರುದ್ದ ಹೋರಾಟಕ್ಕೆ ರೈತರು ಒಗ್ಗೂಡಲಿದ್ದು. ಕ್ಷೇತ್ರದ ಶಾಸಕರು ಹೋರಾಟಕ್ಕೆ ಕೈ ಜೋಡಿಸಬೇಕಿದೆ ಎಂದು ಮನವಿ ಮಾಡಿದರು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾತನಾಡಿ, ಅಮೃತಮಹಲ್ ಮತ್ತು ಅರಣ್ಯ ಪ್ರದೇಶದ ಜಾಗಗಳು ಪ್ರತ್ಯೇಕವಾಗಿದ್ದು, ಸರಕಾರದ ನಿರ್ದೇಶನದಿಂದ ಎಸಿ ಅವರ ಅಧ್ಯಕ್ಷತೆಯಲ್ಲಿ ಅಮೃತ್ ಮಹಲ್ ಸಮಿತಿ ರಚನೆಗೊಂಡಿದೆ. ಈ ಪ್ರದೇಶಗಳ ಸ್ವಾದೀನದಲ್ಲಿರುವ ಜಾಗಗಳ ಗುರುತಿಸುವಿಕೆಗೆ ತಾಲ್ಲೂಕಿನ ಬಿಳುವಾಲ, ಟಿ.ಬಿ.ಕಾವಲ್ ಜಾಗಗಳ ಪ್ರದೇಶಗಳಿಗೆ ಸರ್ವೆ ಸ್ಕೇಚ್ ನಡೆಸಲು ಮುಂದಾಗಿದ್ದು, ಎಮ್ಮೆದೊಡ್ಡಿಯನ್ನು ಭಾಗದ ಅಮೃತ್ ಮಹಲ್ ಪ್ರದೇಶವನ್ನು ಸದ್ಯಕ್ಕೆ ಆಳತೆ ಮಾಡುತ್ತಿಲ್ಲ ಇಲ್ಲಿನ ಭೌಗೋಳಿಕ ವಿಸ್ತರಣ ಪ್ರದೇಶ ಹೆಚ್ಚಾಗಿದೆ. ಅಮೃತ್‌ಮಹಲ್, ಅರಣ್ಯ ಮತ್ತು ಕಂದಾಯ ಇಲಾಖೆಗಳ ಸಂಯುಕ್ತಾ ಶ್ರಯದಲ್ಲಿ ಜಾಗಗಳನ್ನು ಗುರುತಿಸಲು ಸ್ಥಳಪರಿಶೀಲಿಸಿ ಜಂಟಿ ಸರ್ವೆಗಳನ್ನು ನಡೆಸಲಾಗುತ್ತದೆ ಎಂದು ಪ್ರತಿಕ್ರಿಯಿಸಿದರು. ಎಮ್ಮೆದೊಡ್ಡಿ ವ್ಯಾಪ್ತಿಯಲ್ಲಿ 4731 ಎಕರೆಯಷ್ಟು ಅಮೃತ್ ಮಹಲ್ ಜಾಗವಿದೆ. 11 ಎಕರೆಯಷ್ಟು ರೈತರು ಸ್ವಾದೀನದಲ್ಲಿದ್ದಾರೆ ಎಂದು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಉಮೇಶ್ ಸಭೆಗೆ ಮಾಹಿತಿ ನೀಡಿದರು. ಎಮ್ಮೆದೊಡ್ಡಿ ಭಾಗಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಹಾಗೂ ಪಶು ಆಸ್ಪತ್ರೆಗೆ ಖಾಯಂ ಪಶು ವೈದ್ಯರನ್ನು ನಿಯೋಜಿಸುವಂತೆ, ಶಿವಪುರ ಇಸ್ಲಾಂಪುರ ಭಾಗದಲ್ಲಿ ನಿರ್ಮಿಸಿರುವ ರಸ್ತೆ ದುರಸ್ಥಿಪಡಿಸಿಕೊಂಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಛಾಯಾಪತಿ, ಉಪಾಧ್ಯಕ್ಷೆ ಶೋಭಾ, ತಾಪಂ ಇಒ ಸಿ.ಆರ್. ಪ್ರವೀಣ್, ಸದಸ್ಯರಾದ ನವೀನ್, ರಮೇಶ್, ಅಮ್ಮಯ್ಯಬಾಯಿ, ರವಿ, ಶಶಿನಾಯ್ಕ್, ಮೂರ್ತಿ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿದ್ದರು.-- ಬಾಕ್ಸ್ --ಎಮ್ಮೆದೊಡ್ಡಿ ಭಾಗದ ಬಾರ್& ರೆಸ್ಟೋರೆಂಟ್‌ನ್ನು ಮುಚ್ಚಿಸಿ, ರಸ್ತೆ ಒತ್ತುವರಿ ಮಾಡಿ ನಿರ್ಮಿಸಿರುವ ಕಾಂಪೌಂಡ್‌ನ್ನು ತೆರವುಗೊಳಿಸಲು ಗ್ರಾಮಸ್ಥರು ಶಾಸಕರಲ್ಲಿ ಒತ್ತಾಯಿಸಿದರು.ಗ್ರಾಮದಲ್ಲಿ ಅಶಾಂತಿ ಉಂಟು ಮಾಡುವ ಬಾರ್& ರೆಸ್ಟೊರೆಂಟ್‌ ತೆರೆದಿರುವ ಬಗ್ಗೆ ಪ್ರಶ್ನಿಸಿದ ಗ್ರಾಮದ 56 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಯಾವುದೇ ಕಾರಣಕ್ಕೂ ಮದ್ಯದಂಗಡಿ ಆರಂಭಿಸದಂತೆ ಕ್ರಮವಹಿಸಿ ಎಂದು ಮಹಿಳೆಯರು ಆಗ್ರಹಿಸಿದರು.ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಮದ್ಯದಂಗಡಿ ಬಗ್ಗೆ ಗ್ರಾಮಸ್ಥರು ಸಾಕಷ್ಟು ದೂರು ನೀಡುತ್ತಿದ್ದು, ಈ ಭಾಗ ದಲ್ಲಿ ಬಾರ್ &ರೆಸ್ಟೊರೆಂಟ್‌ಗೆ ತೆರೆಯಲು ಯಾವುದೇ ಅನುಮತಿ ನೀಡದೆ ಶಾಶ್ವತವಾಗಿ ಮುಚ್ಚಲು ಸೂಕ್ತ ಕ್ರಮ ವಹಿಸಬೇಕಿದ್ದು, ರಸ್ತೆ ಒತ್ತುವರಿ ತೆರವುಗೊಳಿಸಕೊಡಬೇಕಿದೆ ಎಂದು ಅಬಕಾರಿ ನಿರೀಕ್ಷಕ ನಾಗೇಂದ್ರ ಮತ್ತು ಪಿಡಿಒ ರಾಮಕೃಷ್ಣಗೆ ಸೂಚಿಸಿದರು.ಅಮೃತಮಹಲ್ ಕಾವಲ್‌ನಲ್ಲಿ ಚಾಲ್ತಿಯಲ್ಲಿರುವ ಪಹಣಿಗಳಲ್ಲಿ ಭೂಕಬಳಿಕೆ ನ್ಯಾಯಲಯದಿಂದ ರೈತರಿಗೆ ಬಂದ ನೋಟಿಸ್‌ ತಡೆಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಕೆಲಸ ಮಾಡಲಾಗಿದೆ. ಈ ಭಾಗದ ಜೀವನಾಡಿ ಮದಗ ದಕೆರೆ ಅಭಿವೃದ್ಧಿಗೆ ಏಕಕಾಲದಲ್ಲಿ ₹50 ಕೋಟಿ ಅನುದಾನ ಒದಗಿಸಲಾಗಿದೆ. ಶೀಘ್ರ ಮುಖ್ಯಮಂತ್ರಿಯಿಂದ ಶಂಕುಸ್ಥಾಪನೆ ನೆರವೇರಿಸಲಾಗುವುದು ಕೆರೆ ಪ್ರದೇಶವನ್ನು ಪ್ರವಾಸೋದ್ಯಮ ಇಲಾಖೆಯಡಿ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ. ಮದಗದಕೆರೆ ಮೇಲ್ಬಾಗದ 7 ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಈಗಾಗಲೇ ಫೀಡರ್ ಲೈನ್ ಮತ್ತು 40 ಕೆವಿ ಸಾಮಾರ್ಥ್ಯದಲ್ಲಿ ಹೆಚ್ಚುವರಿ ವೊಲ್ಟೇಜ್ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಇದರಿಂದ ಸಮರ್ಪಕ ವಿದ್ಯುತ್ ಪೂರೈಕೆ ಯಾಗಲಿದ್ದು, ಎಮ್ಮೆದೊಡ್ಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಬಾರಿ ₹1.35 ಕೋಟಿ ಮತ್ತು ಪ್ರಸ್ತುತ ₹1.89 ಕೋಟಿ ಹೆಚ್ಚುವರಿ ಅನುದಾನ ದೊರಕಿಸಿಕೊಟ್ಟು ಕ್ರಿಯಾಯೋಜನೆ ತಯಾರಿಸಿ ಗ್ರಾಮಗಳಲ್ಲಿ ಸಿಸಿ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.7ಬೀರೂರು1ಬೀರೂರು ಹೋಬಳಿ ಎಮ್ಮೆದೊಡ್ಡಿ ಭಾಗದ ಬಾರ್&ರೆಸ್ಟೊರೆಂಟ್‌ ಅನ್ನು ಮುಚ್ಚುವಂತೆ ಗ್ರಾಮಸ್ಥರು ಶಾಸಕರಲ್ಲಿ ನಿವೇದಿಸಿಕೊಂಡರು. ಸಿ.ಎಸ್.ಪೂರ್ಣಿಮಾ, ಸಿ.ಆರ್.ಪ್ರವೀಣ್, ಛಾಯಪತಿ, ಶೋಭಾ ಮತ್ತಿತರಿದ್ದರು.

PREV

Recommended Stories

ಬ್ರಾಹ್ಮಣ ಸಮುದಾಯಕ್ಕೆ ಸೌಲಭ್ಯ ನೀಡಲು ಬದ್ಧ : ಸಚಿವ ದಿನೇಶ್‌ ಗುಂಡೂರಾವ್‌
ಬೆಂಗಳೂರು ನಗರದ 6 ಆರ್‌ಟಿಒ ಕಚೇರಿ ಮೇಲೆ ದಾಳಿ: ಹಲವು ಅಕ್ರಮ ಪತ್ತೆ