ಶಿಕ್ಷಕರನ್ನು ಕರೆದು ಸನ್ಮಾನಿಸುತ್ತಿರುವುದು ಶ್ಲಾಘನೀಯ

KannadaprabhaNewsNetwork | Published : Jan 5, 2024 1:45 AM

ಸಾರಾಂಶ

ಅಂದಿನ ಕಾಲದಲ್ಲಿ ಮಾಹಿತಿ ತಂತ್ರಜ್ಞಾನ ಬೆಳೆದಿರಲಿಲ್ಲ. ಶಿಕ್ಷಕರು ಪಾಠ ಮಾಡಿದರೆ ತಲೆಗೆ ನಾಟುವಂತಾಗುತ್ತಿತ್ತು. ಮನೆಯಲ್ಲಿ ಪಾಲಕರಿಗೆ ಮಕ್ಕಳಿಗಿಂತ ಶಿಕ್ಷಕರ ಮೇಲೆ ಹೆಚ್ಚು ವಿಶ್ವಾಸ ಇರುತ್ತಿತ್ತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಶಿಕ್ಷಣ ನೀಡಿರುವ ಗುರುಗಳಿಗೆ ಗೌರವ ನೀಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಜೀವನ ಸಾರ್ಥಕತೆ ಮೆರೆಯುತ್ತಾರೆ ಎಂದು ಗುಳೇದಗುಡ್ಡ ಒಪ್ಪತ್ತೇಶ್ವರ ಮಠದ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಇಳಕಲ್ಲ ತಾಲೂಕಿನ ಗುಡೂರ ಗ್ರಾಮದ ಮಹಾಂತೇಶ ಮಠದಲ್ಲಿ 1990-91 ನೇ ಸಾಲಿನ ಪ್ರಾಥ ಮಿಕ ಹಾಗೂ ಫ್ರೌಢ ಶಾಲೆ0ು ವಿದ್ಯಾರ್ಥಿ ,ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಸಮಾರಂಭಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಅಂದಿನ ಕಾಲದಲ್ಲಿ ಮಾಹಿತಿ ತಂತ್ರಜ್ಞಾನ ಬೆಳೆದಿರಲಿಲ್ಲ. ಶಿಕ್ಷಕರು ಪಾಠ ಮಾಡಿದರೆ ತಲೆಗೆ ನಾಟುವಂತಾಗುತ್ತಿತ್ತು. ಮನೆಯಲ್ಲಿ ಪಾಲಕರಿಗೆ ಮಕ್ಕಳಿಗಿಂತ ಶಿಕ್ಷಕರ ಮೇಲೆ ಹೆಚ್ಚು ವಿಶ್ವಾಸ ಇರುತ್ತಿತ್ತು. ಹೀಗಾಗಿ ಶಿಕ್ಷಕರು ಹೊಡೆದರೂ ಪಾಲಕರು ಯಾವುದೇ ಚಕಾರ ಎನ್ನುತ್ತಿಲ್ಲ. 33 ವರ್ಷದ ಹಿಂದಿನ ವಿದ್ಯಾರ್ಥಿಗಳು ಇಂದು ಶಿಕ್ಷಕರನ್ನು ಕರೆಯಿಸಿ, ಸ್ಮರಣೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.ಇದೇ ಸಮಯದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಎಸ್.ಆರ್.ವಸ್ತ್ರದ, ಹಿಂದಿನ ಕಾಲದ ಶಿಕ್ಷಣ,ಇಂದಿನ ಕಾಲದ ಶಿಕ್ಷಣದ ಗುಣಮಟ್ಟದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಇಷ್ಟು ವರ್ಷ ಆದ ಬಳಿಕ ಶಿಕ್ಷಕರನ್ನು ಕರೆಯಿಸಿ ,ಗೌರವಿಸಿದ ಜೊತೆಗೆ ಹೂ ಮಳೆ ಸುರಿಸಿ ಸ್ವಾಗತ ಮಾಡಿಕೊಂಡಿದ್ದರು ನೋಡಿದರೆ ಇಂತಹ ವಿದ್ಯಾರ್ಥಿಗಳನ್ನು ಕಲಿಸಿರುವುದು ಸ್ವಾರ್ಥಕವಾಗಿದೆ ಎಂದು ಅನ್ನಿಸಿದೆ ಎಂದು ಹೇಳಿದರು.ಇದೇ ಸಮಯದಲ್ಲಿ ಸುಮಾರು 12 ಶಿಕ್ಷಕರಿಗೆ ಹಾಗೂ ಗುರು ಮಾತೆಯರಿಗೆ ಗೌರವಿಸಿದ ಸನ್ಮಾನಿಸಲಾಯಿತು. ಇದೇ ಸಮಯದಲ್ಲಿ ನಿವೃತ್ತ ಶಿಕ್ಷಕರಾದ ಎ ಎ ಬದಿ, ಎಸ್ ಎಚ್ ಲಾಯದಗುಂದಿ, ಎ ಎಸ್ ಗಂಜಿಹಾಳ, ಬಿ ಜಿ ಹೂಗಾರ, ಜಿ ಎಂ ಮೂಲಮನಿ, ಸಿವಿ ಮುಷ್ಟಿಗೇರಿಮಠ, ಗುರುಮಾತೆ ,ಎಸ್ ಎಸ್ ನಗಾರಿ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಭುಲಿಂಗಯ್ಯ ವಸ್ತ್ರದ ವಹಿಸಿದ್ದರು. ಪ್ರಾಸ್ತಾವಿಕವಾಗಿ ಆನಂದ ದಲಭಂಜನ ಮಾತನಾಡಿದರು. ಶಾಂತಾ ವ್ಯಾಪಾರಿ, ವಿಜಯಲಕ್ಷ್ಮಿ ಮೇಟಿ, ಗುರುಬಾಯಿ ಪತ್ತಾರ ಹಾಗೂ ವಿಮಲ ರಾಥೋಡ ಸ್ವಾಗತ ಗೀತೆ ಹಾಡಿದರು. ಕಾರ್ಯಕ್ರಮ ವನ್ನು ರಾಚಯ್ಯ ಮುದೇನೂರ, ಸೀಮಾ ಪಾಟೀಲ ನಿರೂಪಿಸಿ, ವಂದಿಸಿದರು..

Share this article