ಸರ್ಕಾರದಿಂದ ನಿರಾಶ್ರಿತರಿಗೆ ತಂಗಲು ವಸತಿ ಸೌಲಭ್ಯ: ನ್ಯಾ. ಈಶ್ವರ್

KannadaprabhaNewsNetwork |  
Published : Oct 13, 2024, 01:02 AM IST
 ನಗರದ ನ್ಯಾಯಾಲಯದ ರಸ್ತೆಯಲ್ಲಿ ಇರುವ ನಿರಾಶ್ರಿತರ ಕೇಂದ್ರದಲ್ಲಿ  ನಿರಾಶ್ರಿತರಿಗೆ ಆರೋಗ್ಯ ತಪಾಸಣೆ  | Kannada Prabha

ಸಾರಾಂಶ

ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಮತ್ತು ನಗರಸಭೆಯು ರಸ್ತೆ ಬದಿಯ ನಿರಾಶ್ರಿತರಿಗೆ ಅನುಕೂಲ ಮಾಡುವ ಉದ್ದೇಶದಿಂದ ಅವರನ್ನು ಕರೆತಂದು ವಸತಿ ಸೌಕರ್ಯ, ಊಟದ ವ್ಯವಸ್ಥೆ, ಅವರು ಸ್ವಚ್ಛತೆಯಿಂದ ಇರಲು ಸೋಪ್ ಹಾಗೂ ಇನ್ನಿತರೆ ವಸ್ತುಗಳನ್ನು ಸರ್ಕಾರದ ವತಿಯಿಂದ ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ನಿರಾಶ್ರಿತರಿಗೆ ರಾಜ್ಯ ಸರ್ಕಾರದ ಅನುದಾನದಲ್ಲಿ ಎನ್.ಜಿ.ಒ ಕೇಂದ್ರಗಳ ಮುಖಾಂತರ ತಂಗಲು ವಸತಿ ಸೌಕರ್ಯಗಳನ್ನು ಮಾಡಲಾಗುತ್ತಿದೆ. ನಿರಾಶ್ರಿತರು ಆತಂಕಪಡುವ ಅವಶ್ಯವಿಲ್ಲ ಎಂದು ನಾಯ್ಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ತಿಳಿಸಿದರು.ನಗರದ ನ್ಯಾಯಾಲಯದ ರಸ್ತೆಯಲ್ಲಿ ಇರುವ ನಿರಾಶ್ರಿತರ ಕೇಂದ್ರದಲ್ಲಿ ನಿರಾಶ್ರಿತರಿಗೆ ಆರೋಗ್ಯ ತಪಾಸಣೆ ಶಿಬಿರದಲ್ಲಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಯಿ, ತಂದೆಯರಿಗೆ ವಯಸ್ಸಾಗುತ್ತಿದ್ದಂತೆ ಕೆಲವರು ಮನೆಯಿಂದ ಹೊರಹಾಕಿರುವ ಸಂಗತಿಯನ್ನು ನೋಡುತ್ತಿದ್ದೇವೆ. ಆಸ್ತಿ ಮತ್ತು ಹಣಗಳನ್ನು ತಂದೆ, ತಾಯಿಂದ ಪಡೆದು ಮಕ್ಕಳು ಹೊರ ಹಾಕಿದರೆ ಅಂತಹ ಮಕ್ಕಳ ಮೇಲೆ ದಾವೆ ಹಾಕಬಹುದು, ಮನೆಯ ಹಿರಿಯರನ್ನು ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿಯಾಗಿದೆ ಎಂದು ಹೇಳಿದರು

ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಮಕ್ಕಳು ಪೋಷಕರನ್ನು ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಬಿಡುತ್ತಿರುವುದು ಹೆಚ್ಚಾಗಿದೆ. ಕೆಲವರು ರಸ್ತೆ ಬದಿಯಲ್ಲಿ ಮಲಗುವುದು ಆಹಾರವಿಲ್ಲದೆ ಎಷ್ಟೋ ಜನ ಪ್ರಾಣವನ್ನೆ ಕಳೆದುಕೊಂಡಿದ್ದಾರೆ ಸಾರ್ವಜನಿಕರ ಗಮನಕ್ಕೆ ಬಂದರೆ ಇಂತಹ ವ್ಯಕ್ತಿಗಳನ್ನು ನಿರಾಶಿತರ ಕೇಂದ್ರಕ್ಕೆ ಕರೆತಂದರೆ ಅವರಿಗೆ ಸೌಕರ್ಯ ಸಿಗಲಿದೆ ಎಂದರು.

ಕೌಶಲ್ಯಾಭಿವೃದ್ಧಿ ನಿಗಮದ ಮ್ಯಾನೇಜರ್ ಡಾ.ಪುಟ್ಟಸ್ವಾಮಿ ಮಾತನಾಡಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಮತ್ತು ನಗರಸಭೆಯು ರಸ್ತೆ ಬದಿಯ ನಿರಾಶ್ರಿತರಿಗೆ ಅನುಕೂಲ ಮಾಡುವ ಉದ್ದೇಶದಿಂದ ಅವರನ್ನು ಕರೆತಂದು ವಸತಿ ಸೌಕರ್ಯ, ಊಟದ ವ್ಯವಸ್ಥೆ, ಅವರು ಸ್ವಚ್ಛತೆಯಿಂದ ಇರಲು ಸೋಪ್ ಹಾಗೂ ಇನ್ನಿತರೆ ವಸ್ತುಗಳನ್ನು ಸರ್ಕಾರದ ವತಿಯಿಂದ ನೀಡಲಾಗುತ್ತಿದೆ. ನಿರಾಶ್ರಿತರು ಬೆಳಗ್ಗೆ ಹೊರಗಡೆ ಹೋಗಿ ಸಂಜೆಯ ಸಮಯಕ್ಕೆ ಕೇಂದ್ರಕ್ಕೆ ಬರಬಹುದು ಅವರಿಗೆ ಪ್ರತಿ ತಿಂಗಳು ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.

ವೈದ್ಯಾಧಿಕಾರಿ ಡಾ. ರಿಯಾ ಮಾತನಾಡಿ ಹಿರಿಯರು ಹಾಗೂ ಕಿರಿಯರು ಪ್ರತಿ ೩ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಉತ್ತಮ, ಆರೋಗ್ಯದ ಏರುಪೇರುಗಳನ್ನು ತಿಳಿಯಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಯೋಜನಾಧಿಕಾರಿ ವೆಂಕಟನಾಯಕ್, ಗ್ರೀನ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಪ್ರಭುಸ್ವಾಮಿ, ಕಾರ್ಯದರ್ಶಿ ಮಹದೇವಸ್ವಾಮಿ, ನಿರಾಶ್ರಿತರ ಆಶ್ರಮದ ಕೋಮಲ, ಶಿವಕುಮಾರ್. ನಂದನ್, ಶುಶ್ರೂಷಕರಾದ ಶಿವಮ್ಮ, ಧಿವ್ಯಬೇಬಿ ಹಾಜರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...