ಕನ್ನಡಪ್ರಭ ವಾರ್ತೆ ಹುಕ್ಕೇರಿ
ಶತಮಾನೋತ್ಸವ ಹೊಸ್ತಿಲಲ್ಲಿರುವ ಪಟ್ಟಣದ ಪ್ರತಿಷ್ಠಿತ ದಿ.ಹುಕ್ಕೇರಿ ಅರ್ಬನ್ ಕೋ-ಆಪ್ ಬ್ಯಾಂಕ್ ಪ್ರಗತಿ ಪಥದತ್ತ ಸಾಗುತ್ತಿದ್ದು ಗ್ರಾಹಕ ಸ್ನೇಹಿಯಾಗಿ ಹೊರಹೊಮ್ಮಿದೆ ಎಂದು ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೇಳಿದರು.ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕು ಸೇರಿದಂತೆ ಜಿಲ್ಲೆಯ ಬ್ಯಾಂಕಿಂಗ್ ವಲಯದಲ್ಲಿ ತನ್ನದೇಯಾದ ರೀತಿಯಲ್ಲಿ ಗ್ರಾಹಕ-ಸದಸ್ಯರ ಆರ್ಥಿಕ ಅಭಿವೃದ್ಧಿಗೆ ಸಂಸ್ಥೆ ವಿಶಿಷ್ಟ ಕೊಡುಗೆ ನೀಡುತ್ತಿದೆ. ಬ್ಯಾಂಕ್‌ನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಸತತ ಪ್ರಯತ್ನದಿಂದ ಬ್ಯಾಂಕ್ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ₹87 ಲಕ್ಷಕ್ಕಿಂತ ಹೆಚ್ಚು ಲಾಭ ಗಳಿಸಿದೆ ಎಂದರು.
ಒಟ್ಟು 5215 ಸದಸ್ಯರನ್ನು ಹೊಂದಿದ್ದು ₹241 ಕೋಟಿ ಶೇರು ಬಂಡವಾಳ, ₹732 ಕೋಟಿ ನಿಧಿಗಳಿದ್ದು. ₹9450 ಕೋಟಿ ಠೇವು, ₹5889 ಕೋಟಿ ಸಾಲ ವಿತರಿಸಲಾಗಿದೆ. ₹10853 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಗ್ರಾಹಕರಿಗೆ ಶೇ.13ರಷ್ಟು ಲಾಭಾಂಶ ವಿತರಿಸಲಾಗಿದ್ದು, ₹87 ಲಕ್ಷ ನಿವ್ವಳ ಲಾಭ ಗಳಿಸಿದೆ. ಪ್ರಧಾನ ಕಚೇರಿ ಎಲ್ಲ ಶಾಖೆಗಳಲ್ಲಿ ಆಧುನಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಯುಪಿಐ, ಎಟಿಎಂ, ಸ್ಕ್ಯಾನರ್ ಸೌಲಭ್ಯಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ಪ್ರಧಾನ ಕಚೇರಿ ಸೇರಿ ಒಟ್ಟು 7 ಶಾಖೆಗಳನ್ನು ಹೊಂದಿದ್ದು ಮುಂಬರುವ ದಿನಗಳಲ್ಲಿ ಮತ್ತೊಂದು ಶಾಖೆ ಆರಂಭಿಸುವ ಚಿಂತನೆಯಿದೆ. ಇದರೊಂದಿಗೆ ಗ್ರಾಹಕರ ಮನೆ ಬಾಗಿಲಿಗೆ ಸೇವೆ ಸಲ್ಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಈ ವೇಳೆ ಉಪಾಧ್ಯಕ್ಷ ಪ್ರಭು ಸಾಂಬಾರೆ, ಪ್ರಭಾರ ಪ್ರಧಾನ ವ್ಯವಸ್ಥಾಪಕ ಕೆ.ಬಿ.ಬಂದಾಯಿ, ನಿರ್ದೇಶಕರಾದ ಗುರುಲಿಂಗಪ್ಪ ಗಂಧ, ರಾಜು ಬಾಗಲಕೋಟಿ, ಮಲ್ಲಿಕಾರ್ಜುನ ತೇರಣಿ, ವಿಜಯ ರವದಿ, ಸೋಮಶೇಖರ ಪಟ್ಟಣಶೆಟ್ಟಿ, ಶಿವಾನಂದ ನೂಲಿ, ಸಿದ್ದೇಶ್ವರ ಹೆದ್ದೂರಶೆಟ್ಟಿ, ಶಂಕರಗೌಡ ಪಾಟೀಲ, ಗೌರವ್ವಾ ನಾಯಿಕ, ಸುವರ್ಣಾ ಹುಂಡೇಕಾರ, ಮೌನೇಶ್ವರ ಪೋತದಾರ, ಮಲ್ಲಿಕಾರ್ಜುನ ಕೋಟ್ಯಾಗೋಳ, ರಾಜು ಬೋಳಮಲ್ಲ, ಮಹಾದೇವ ಖಡಬಡಿ ಇತರರು ಇದ್ದರು.
ಇಂದು ಸಾಮಾನ್ಯ ಸಭೆಹುಕ್ಕೇರಿ ಎಸ್.ಕೆ.ಹೈಸ್ಕೂಲ್ ಆವರಣದ ಚಿಣ್ಣರ ಭವನದಲ್ಲಿ ಆ.30ರಂದು ಮಧ್ಯಾಹ್ನ 3ಕ್ಕೆ ಬ್ಯಾಂಕ್‌ನ 2024-25ನೇ ಸಾಲಿನ 97ನೇ ವಾರ್ಷಿದ ಸರ್ವ ಸಾಧಾರಣಾ ಸಭೆ ಆಯೋಜಿಸಲಗಿದೆ. ಕಾರಣ ಸಂಸ್ಥೆಯ ಎಲ್ಲ ಸದಸ್ಯರು ಹಾಜರಿರಲು ಕೋರಲಾಗಿದೆ.