ರಾಮನಗರ: ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಪೂವ೯ ಪ್ರಾಥಮಿಕ ಶಿಕ್ಷಣ ನೀಡುವ ಸದುದ್ದೇಶದಿಂದ ತೆರೆಯಲಾಗಿರುವ ಹಲವಾರು ಅಂಗನವಾಡಿ ಕೇಂದ್ರಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗಿದ್ದರೆ, ನೂರಾರು ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ಅಂಗನವಾಡಿಗಳಿಗೆ ನಿವೇಶನ ಒದಗಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮನವಿ ಮಾಡಿದ ಹೊರತಾಗಿಯೂ ನಿವೇಶನ ಲಭ್ಯತೆ ಇಲ್ಲದ ಕಾರಣ ಬಾಡಿಗೆ ಕಟ್ಟಡ ಇಲ್ಲವೇ, ಶಾಲಾ ಕೊಠಡಿಗಳಲ್ಲಿಯೇ ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.
ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 1596 ಅಂಗನವಾಡಿ ಕೇಂದ್ರಗಳಿದ್ದು, ಸಾವಿರಾರು ಮಕ್ಕಳು ಬಾಲ್ಯ ಕಳೆಯುತ್ತಿದ್ದಾರೆ. ಇದರಲ್ಲಿ 1,034 ಮಾತ್ರ ಸ್ವಂತ ಕಟ್ಟಡಗಳಿವೆ. ಉಳಿದ 562 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ.ಬಾಡಿಗೆ ಕಟ್ಟಡ ಇಲ್ಲವೇ ಇತರ ಲಭ್ಯ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳ ಸ್ಥಿತಿ ಶೋಚನೀಯವಾಗಿದೆ. ಇರುವ ಚಿಕ್ಕ ಜಾಗದಲ್ಲಿಯೇ ಮಕ್ಕಳಿಗೆ ಪಾಠ ಹೇಳಿಕೊಡುವ ಜತೆಗೆ ಸರ್ಕಾರ ಜಾರಿಗೆ ತರುವ ಹಲವಾರು ಯೋಜನೆಗಳನ್ನು ಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡಬೇಕು. ಕಿಷ್ಕಿಂದೆಯಂತಹ ಜಾಗದಲ್ಲೇ ಮಕ್ಕಳ ಕಲಿಕೆ, ನಿದ್ರೆ, ಆಟ, ಪೌಷ್ಟಿಕ ಆಹಾರವನ್ನು ತಯಾರಿಸಿ ನೀಡಬೇಕಿದೆ.
ಅಂಗನವಾಡಿಗಳಿಗೆ ಹೈಟೆಕ್ ಸ್ಪರ್ಶ:
ಅಂಗನವಾಡಿಗಳಿಗೆ ಬೇಕಾದ ನಿವೇಶನ, ಕಟ್ಟಡ ಹಾಗೂ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಜತೆಗೆ ಸ್ಥಳೀಯ ಆಡಳಿತ ಸಂಸ್ಥೆಗಳ ಆಸಕ್ತಿ ತೋರಬೇಕಿದೆ. ನಗರ ವ್ಯಾಪ್ತಿಯಲ್ಲಿ ನಗರಸಭೆ, ಪುರಸಭೆಗಳ ಜನಪ್ರತಿನಿಧಿಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಗಮನ ಹರಿಸಬೇಕು. ಇದರಿಂದ ಬಾಲ್ಯದಲ್ಲಿಯೇ ಮಕ್ಕಳು ಉತ್ತಮ ವಾತಾವರಣದಲ್ಲಿ ಕಲಿಕೆ ಮಾಡಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿಗಳು ಅಗತ್ಯ ನಿವೇಶನ ನೀಡುವ ಜತೆಗೆ ಪ್ರತಿ ಅಂಗನವಾಡಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಬೇಕಿದೆ.
ಬಾಕ್ಸ್ .............
ಜಿಲ್ಲೆಯಲ್ಲಿ 1301 ಅಂಗನವಾಡಿಗಳು ಹಾಗೂ 285 ಮಿನಿ ಅಂಗನವಾಡಿಗಳೂ ಸೇರಿ ಒಟ್ಟು 1586 ಕೇಂದ್ರಗಳಿವೆ. ಇವುಗಳಲ್ಲಿ 3ರಿಂದ 6 ವರ್ಷದೊಳಗಿನ 30 ಸಾವಿರದಷ್ಟು ಮಕ್ಕಳು ಪ್ರವೇಶ ಪಡೆದಿದ್ದಾರೆ. ಈ ಪೈಕಿ 1034 ಅಂಗನವಾಡಿಗಳು ಮಾತ್ರ ಸ್ವಂತ ಕಟ್ಟಡಗಳಲ್ಲಿ ನಡೆಯುತ್ತಿವೆ. ಉಳಿದ 552 ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. 40ಕ್ಕೂ ಹೆಚ್ಚು ಅಂಗನವಾಡಿಗಳು ಸಮುದಾಯ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, 189 ಅಂಗನವಾಡಿಗಳು ಶಾಲಾ ಕಟ್ಟಡಗಳಲ್ಲಿ ಇವೆ. 303 ಅಂಗನವಾಡಿಗಳು ಬಾಡಿಗೆ ಮನೆ, ಸಮುದಾಯ ಭವನ, ಶಾಲಾ ಕೊಠಡಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ವಿಪರ್ಯಾಸವೆಂದರೆ ಸುಮಾರು 259 ಅಂಗನವಾಡಿಗಳಿಗೆ ನಿವೇಶನವೇ ಇಲ್ಲ.
ನಿವೇಶನ ಇಲ್ಲದ ಅಂಗನವಾಡಿಗಳು
ರಾಮನಗ.
79ಚನ್ನಪಟ್ಟ.
51ಕನಕಪು.
72ಹಾರೋಹಳ್ಳ.
19ಮಾಗಡ.
38-----------------------
ಒಟ್ಟ.259
4ಕೆಆರ್ ಎಂಎನ್ 2.ಜೆಪಿಜಿಚನ್ನಪಟ್ಟಣ ತಾಲೂಕು ಹನುಮಾಪುರ ದೊಡ್ಡಿಯ ಅಂಗನವಾಡಿ ಕೇಂದ್ರ.